ಟೀಂ ಇಂಡಿಯಾ ಪಾಲಿಗೆ ಈ ಒಬ್ಬ ಆಟಗಾರ ಸಾಕು ಟ್ರೋಫಿ ಗೆಲ್ಲಿಸಿ ಕೊಡಲು ! ಯಾರಾತ ಗೊತ್ತಾ ?

World cup 2023 :ಐಸಿಸಿ ವಿಶ್ವಕಪ್ 2023 ಟ್ರೋಫಿಯನ್ನು ಟೀಮ್ ಇಂಡಿಯಾ ಗೆಲ್ಲುವಂತೆ ಮಾಡುವ ಒಬ್ಬ ಆಟಗಾರ ಭಾರತ ತಂಡದಲ್ಲಿದ್ದಾನೆ. ಐಸಿಸಿ ವಿಶ್ವಕಪ್ 2023 ರಲ್ಲಿ 'ಮ್ಯಾನ್ ಆಫ್ ದಿ ಟೂರ್ನಮೆಂಟ್' ಆಗಿ ಮಿಂಚ ಬಲ್ಲ ಈ ಆಟಗಾರನತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ. 

Written by - Ranjitha R K | Last Updated : Oct 5, 2023, 02:08 PM IST
  • ಈ ಆಟಗಾರ ವಿಶ್ವಕಪ್‌ನಲ್ಲಿ ಭಾರತದ ಪಾಲಿನ 'ಎಕ್ಸ್ ಫ್ಯಾಕ್ಟರ್
  • ಟ್ರೋಫಿ ಗೆಲ್ಲಿಸಿ ಕೊಡಬಲ್ಲ ಚತುರ
  • 7ನೇ ಕ್ರಮಾಂಕದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್
ಟೀಂ ಇಂಡಿಯಾ ಪಾಲಿಗೆ ಈ ಒಬ್ಬ ಆಟಗಾರ ಸಾಕು ಟ್ರೋಫಿ ಗೆಲ್ಲಿಸಿ ಕೊಡಲು ! ಯಾರಾತ ಗೊತ್ತಾ ?  title=

World cup 2023 : ಈ ಬಾರಿಯ ಐಸಿಸಿ ವಿಶ್ವಕಪ್ 2023  ಕಪ್ ಗೆಲ್ಲುವ ಹಾಟ್  ಫೆವರಿಟ್ ತಂಡಗಳಲ್ಲಿ ಭಾರತವೂ ಒಂದು. ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ದ ಆಡಲಿದೆ. ಈ ಪಂದ್ಯ ಇದೇ 8 ನೇ ತಾರೀಕಿನಂದು ನಡೆಯಲಿದೆ. ಐಸಿಸಿ ವಿಶ್ವಕಪ್ 2023 ಟ್ರೋಫಿಯನ್ನು ಟೀಮ್ ಇಂಡಿಯಾ ಗೆಲ್ಲುವಂತೆ ಮಾಡುವ ಒಬ್ಬ ಆಟಗಾರ ಭಾರತ ತಂಡದಲ್ಲಿದ್ದಾನೆ. ಐಸಿಸಿ ವಿಶ್ವಕಪ್ 2023 ರಲ್ಲಿ 'ಮ್ಯಾನ್ ಆಫ್ ದಿ ಟೂರ್ನಮೆಂಟ್' ಆಗಿ ಮಿಂಚ ಬಲ್ಲ ಈ ಆಟಗಾರನತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದೆ. 

ಈ ಆಟಗಾರ ವಿಶ್ವಕಪ್‌ನಲ್ಲಿ ಭಾರತದ ಪಾಲಿನ 'ಎಕ್ಸ್ ಫ್ಯಾಕ್ಟರ್' : 
ಮೈದಾನಕ್ಕೆ ಇಳಿದರೆ ಮೂವರು ಆಟಗಾರರ ಪಾತ್ರವನ್ನು ನಿರ್ವಹಿಸಬಲ್ಲ ಪ್ರತಿಭೆಯನ್ನು ಹೊಂದಿರುವ ಆಟಗಾರ ಈತ. ICC ವಿಶ್ವಕಪ್ 2023 ರ ಸಮಯದಲ್ಲಿ ಪ್ರತಿ ಪಂದ್ಯದ ಪ್ಲೇಯಿಂಗ್ 11 ನಲ್ಲಿ ಈ ಆಟಗಾರನ ಸ್ಥಾನ ಭದ್ರವಾಗಿದೆ. ಟೀಮ್ ಇಂಡಿಯಾದ ಈ ಆಟಗಾರ ಅತ್ಯುತ್ತಮ ಬ್ಯಾಟ್ಸ್‌ಮನ್,  ಬೌಲರ್ ಮತ್ತು ಬೆಸ್ಟ್ ಫೀಲ್ಡರ್‌ ಎಂದೆನಿಸಿಕೊಂಡಿದ್ದಾರೆ . ಒಂದರ್ಥದಲ್ಲಿ ಹೇಳಬೇಕೆಂದರೆ ಇವರೊಬ್ಬ ಸಂಪೂರ್ಣ ಪ್ಯಾಕೇಜ್. ಫೀಲ್ಡಿಂಗ್ ಮಾಡುವಾಗಲೂ ಈ ಆಟಗಾರನ ಚಾಣಾಕ್ಷತನಕ್ಕೆ ಎದುರಾಳಿಗಳು ಕಕ್ಕಾಬಿಕ್ಕಿಯಾಗುತ್ತಾರೆ. ನಾವು ಹೇಳುತ್ತಿರುವ ಆಟಗಾರ ಬೇರೆ ಯಾರೂ ಅಲ್ಲ   ಆಲ್ ರೌಂಡರ್ ರವೀಂದ್ರ ಜಡೇಜಾ.

ಇದನ್ನೂ ಓದಿ : ಪತ್ನಿಯಿಂದ ವಿಚ್ಛೇದನ ಪಡೆದ ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌, ದೂರವಾಗಲು ಮಾನಸಿಕ ಹಿಂಸೆಯೇ ಕಾರಣ!

ಟ್ರೋಫಿ ಗೆಲ್ಲಿಸಿ ಕೊಡಬಲ್ಲ ಚತುರ  :
ಆಲ್ ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಪ್ರವೀಣ. ಐಸಿಸಿ ವಿಶ್ವಕಪ್ 2023ರ ಸಮಯದಲ್ಲಿ, ರವೀಂದ್ರ ಜಡೇಜಾ  ಎದುರಾಳಿಗಳ ಬೆವರಿಳಿಸುವುದರಲ್ಲಿ ಎರಡು ಮಾತಿಲ್ಲ.  ರವೀಂದ್ರ ಜಡೇಜಾ ಟೀಂ ಇಂಡಿಯಾ ಪರ 186 ಏಕದಿನ ಪಂದ್ಯಗಳಲ್ಲಿ 204 ವಿಕೆಟ್ ಪಡೆದಿದ್ದಾರೆ. ಇದಲ್ಲದೇ ಏಕದಿನ ಪಂದ್ಯದಲ್ಲಿ ಒಟ್ಟು 2636 ರನ್ ಗಳಿಸಿದ್ದಾರೆ. ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 13 ಅರ್ಧ ಶತಕ ಬಾರಿಸಿದ ದಾಖಲೆ ಕೂಡಾ ಹೊಂದಿದ್ದಾರೆ. ಇದಲ್ಲದೇ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ  ಒಂದು ಪಂದ್ಯದಲ್ಲಿ  5 ವಿಕೆಟ್ ಪಡೆದಿರುವ  ಸಾಧನೆ ಕೂಡಾ ಮೆರೆದಿದ್ದಾರೆ. ರವೀಂದ್ರ ಜಡೇಜಾ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವೆಂದರೆ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 36 ರನ್‌ ನೀಡಿ  5 ವಿಕೆಟ್ ಕಬಳಿಸಿರುವುದು. 

7ನೇ ಕ್ರಮಾಂಕದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ : 
2011ರ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಪಾತ್ರವನ್ನು 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ರವೀಂದ್ರ ಜಡೇಜಾ ನಿರ್ವಹಿಸಬಹುದು ಎಂದೇ ಹೇಳಲಾಗುತ್ತಿದೆ.  ರವೀಂದ್ರ ಜಡೇಜಾ ತಮ್ಮ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರ. ರವೀಂದ್ರ ಜಡೇಜಾ ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ರೋಹಿತ್ ಶರ್ಮಾ ಅವರ ಅತ್ಯಂತ ವಿಶ್ವಾಸಾರ್ಹ ಆಟಗಾರ ಎನಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ತನ್ನ ಎಡಗೈ ಸ್ಪಿನ್ ಬೌಲಿಂಗ್‌ನಿಂದ  ಬಿರುಗಾಳಿ ಎಬ್ಬಿಸಲಿದ್ದಾರೆ. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯುವ ರವೀಂದ್ರ ಜಡೇಜಾ, ಟೆಸ್ಟ್ ಕ್ರಿಕೆಟ್, ಏಕದಿನ ಕ್ರಿಕೆಟ್, ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾಗೆ ಹಲವು ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೆ. ಫಾಸ್ಟ್  ಬೌಲರ್ ಆಗಿರುವ ರವೀಂದ್ರ ಜಡೇಜಾ ವಿಕೆಟ್ ಟು ವಿಕೆಟ್ ಬೌಲಿಂಗ್ ಮೂಲಕ ರನ್ ಗಳಿಸುವ ಅವಕಾಶಗಳನ್ನು ಮೊಟಕು ಗೊಳಿಸುತ್ತಾರೆ. 

ಇದನ್ನೂ ಓದಿ : ಈ ಬಾರಿ ವಿಶ್ವಕಪ್ ಗೆಲ್ಲುತ್ತೀರಾ ಎಂಬ ಪ್ರಶ್ನೆಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News