15 ವರ್ಷಗಳ ಕ್ರಿಕೆಟ್ ಜೀವನ ಅಂತ್ಯ! ವಿಶ್ವಕಪ್ ಮಧ್ಯೆಯೇ ನಿವೃತ್ತಿ ಘೋಷಿಸಿದ 42ರ ಹರೆಯದ ಸ್ಟಾರ್ ಸೀಮ್ ಬೌಲರ್

Michael Hogan retirement: ಹೊಗನ್ 2023ರಲ್ಲಿ ಕೆಂಟ್‌ ಪರ 22 ಪಂದ್ಯಗಳನ್ನಾಡಿದ್ದಾರೆ. 28ನೇ ವಯಸ್ಸಿನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಪರ ತನ್ನ ವೃತ್ತಿಪರ ಚೊಚ್ಚಲ ಪಂದ್ಯವನ್ನು ಆಡಿದ ಅವರು, ಐದು ವರ್ಷಗಳ ಕಾಲ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌’ನಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು.

Written by - Bhavishya Shetty | Last Updated : Oct 7, 2023, 05:19 PM IST
    • ಆಸ್ಟ್ರೇಲಿಯಾ ತಂಡದ ಅನುಭವಿ ಸೀಮ್ ಬೌಲರ್ ಮೈಕೆಲ್ ಹೊಗನ್
    • 28ನೇ ವಯಸ್ಸಿನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಪರ ಚೊಚ್ಚಲ ಪಂದ್ಯ ಆಡಿದ ಮೈಕೆಲ್
    • 2017 ರಲ್ಲಿ ಗ್ಲಾಮೊರ್ಗಾನ್ ತಂಡದ ನಾಯಕನಾಗಿ ನೇಮಕಗೊಂಡರು
15 ವರ್ಷಗಳ ಕ್ರಿಕೆಟ್ ಜೀವನ ಅಂತ್ಯ! ವಿಶ್ವಕಪ್ ಮಧ್ಯೆಯೇ ನಿವೃತ್ತಿ ಘೋಷಿಸಿದ 42ರ ಹರೆಯದ ಸ್ಟಾರ್ ಸೀಮ್ ಬೌಲರ್ title=
Michael Hogan

Australia seam bowler Michael Hogan: ಮೈಕೆಲ್ ಹೊಗನ್ 15 ವರ್ಷಗಳ ವೃತ್ತಿಜೀವನದ ವೃತ್ತಿಪರ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಅನುಭವಿ ಸೀಮ್ ಬೌಲರ್ ಮೈಕೆಲ್ ತಮ್ಮ 42 ನೇ ವಯಸ್ಸಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಈತನೇ ಬಾಲಿವುಡ್’ನ 'ಮೋಸ್ಟ್ ಫ್ಲಾಪ್' ನಟ…! ನಟಿಸಿದ 180 ಸಿನಿಮಾವೂ ಕಂಪ್ಲೀಟ್ ಫೈಲ್ಯೂರ್

ಹೊಗನ್ 2023ರಲ್ಲಿ ಕೆಂಟ್‌ ಪರ 22 ಪಂದ್ಯಗಳನ್ನಾಡಿದ್ದಾರೆ. 28ನೇ ವಯಸ್ಸಿನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಪರ ತನ್ನ ವೃತ್ತಿಪರ ಚೊಚ್ಚಲ ಪಂದ್ಯವನ್ನು ಆಡಿದ ಅವರು, ಐದು ವರ್ಷಗಳ ಕಾಲ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌’ನಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು. ಅದಾದ ಬಳಿಕ ಆಸ್ಟ್ರೇಲಿಯನ್ ತರಬೇತುದಾರ ಮ್ಯಾಥ್ಯೂ ಮೋಟ್ ಅವರಿಂದ ಗ್ಲಾಮೊರ್ಗಾನ್‌’ಗೆ ನೇಮಕಗೊಂಡರು. 2017 ರಲ್ಲಿ ಗ್ಲಾಮೊರ್ಗಾನ್ ತಂಡದ ನಾಯಕನಾಗಿ ನೇಮಕಗೊಂಡರು.

ತಮ್ಮ ನಿವೃತ್ತಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದ ಅವರು ಈ ರೀತಿ ಬರೆದುಕೊಂಡಿದ್ದಾರೆ. “ಕಳೆದ ವಾರದಿಂದ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆಟಕ್ಕಿಂತ ಹೆಚ್ಚು ನನಗೆ ಅಗತ್ಯವಿರುವ ಕೆಲವು ಜನರಿದ್ದಾರೆ ಎಂದು ನಾನು ಶೀಘ್ರದಲ್ಲೇ ಅರಿತುಕೊಂಡೆ. ಅಧಿಕೃತವಾಗಿ ನನ್ನ ಬೂಟುಗಳಿಗೆ ವಿಶ್ರಾಂತಿ ನೀಡುವ ಮತ್ತು  ಮುಂದಿನ ಅಧ್ಯಾಯಕ್ಕೆ ತೆರಳುವ ಸಮಯ ಬಂದಿದೆ ಎಂದು ನಾನು ನಂಬುತ್ತೇನೆ” ಎಂದಿದ್ದಾರೆ.

"ಪ್ರಯಾಣದ ಭಾಗವಾಗಿದ್ದಕ್ಕಾಗಿ ನನ್ನ ತಂಡದ ಎಲ್ಲಾ ಸಹ ಆಟಗಾರರು ಮತ್ತು ತರಬೇತುದಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಸ್ನೇಹ ಮತ್ತು ನನ್ನೊಂದಿಗಿನ ನೆನಪುಗಳು ಜೀವನಪೂರ್ತಿ ಉಳಿಯುತ್ತವೆ” ಎಂದು ಭಾವನಾತ್ಮಕ ಬರಹ ಬರೆದಿದ್ದಾರೆ.

ಇದನ್ನೂ ಓದಿ: ಇರ್ಫಾನ್ ಪಠಾಣ್ ಮುಂದೆ ಅದೊಂದು ಆಹಾರಕ್ಕಾಗಿ ಬೇಡಿಕೆ ಇಟ್ಟಿದ್ರಂತೆ ಸಚಿನ್..!!

"ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ತೆರೆಮರೆಯ ವೀರರು, ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳಬೇಕು. ಈ ಪ್ರಯಾಣದಲ್ಲಿ ನಿರಂತರ ಶಕ್ತಿಯ ಆಧಾರಸ್ತಂಭವಾಗಿರುವ ನನ್ನ ಕುಟುಂಬಕ್ಕೆ ನನ್ನ ಧನ್ಯವಾದವನ್ನು ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News