ಮೈಸೂರು: ರಾಜಕೀಯದಲ್ಲಿ ಯಾರಾದರೂ ಖಳನಾಯಕ ಇದ್ದರೆ ಅದು ಹೆಚ್.ಡಿ.ಕುಮಾರಸ್ವಾಮಿ ಅವರೇ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮದವವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿ ಮುಖ್ಯ ಮಂತ್ರಿಗಳನ್ನು ಮಹಾಭಾರತದ ಎಲ್ಲಾ ಖಳನಾಯಕರಿಗೆ ಹೋಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಕ್ರಿಕೆಟ್ ನೋಡಲು ಹೋಗಿದ್ದರು ಎನ್ನುವ ಅವರು ಸರ್ಕಾರ ಬಿದ್ದುಹೋಗುವಾಗ ಅಮೆರಿಕದಲ್ಲಿ ಒಂದು ವಾರ ಕೂತಿದ್ದರು. ಒಂದು ವರ್ಷ 2 ತಿಂಗಳು ತಾಜ್ ವೆಸ್ಟ್ ಎಂಡ್ ನಲ್ಲಿ ಕಾಲ ಕಳೆಯುತ್ತಿದ್ದರು. ಇವರು ನಮಗೆ ಹೇಳಿಕೊಡಬೇಕೆ ಎಂದರು.
ತಪ್ಪುದಾರಿಗೆ ಎಳೆಯುತ್ತಿದ್ದಾರೆ:
ಕುಮಾರಸ್ವಾಮಿ ಅವರ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸಿದ್ದು, ಅದನ್ನು ಅವರು ಒಪ್ಪಿಕೊಳ್ಳಲಿ ಎಂದಿರುವ ಬಗ್ಗೆ ಮಾತನಾಡಿ ಅದನ್ನು ಅವರು ವಿಧಾನಮಂಡಲದ ವಿಶ್ವಾಸ ಮತಯಾಚನೆಯಾದ ಸಂದರ್ಭದಲ್ಲಿ ಉತ್ತರ ನೀಡಿದಾಗ ಈ ಸರ್ಕಾರವನ್ನು ಬೀಳಿಸಿದ್ದು ಬಿಜೆಪಿಯವರು ಎಂದಿರುವುದು ವಿಧಾನಮಂಡಲದ ರೆಕಾರ್ಡ್ ನಲ್ಲಿದೆ. ಅದನ್ನು ಬಿಡುಗಡೆ ಮಾಡುತ್ತೇನೆ. ಈಗ ಬೇರೆ ತರ ಹೇಳುತ್ತಿದ್ದಾರೆ. ಹಾಗಾದರೆ ವಿಧಾನಮಂಡಲವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಶಾಸಕರು, ಸಚಿವರನ್ನು ಭೇಟಿ ಮಾಡದೆ ಹೋಟೆಲಿನಲ್ಲಿ ಕುಳಿತಿದ್ದರು ಎಂದರು.
ಇದನ್ನೂ ಓದಿ- ಬೆಳಗಾವಿ ಕಾಂಗ್ರೆಸ್ನಲ್ಲಿ ಅಸಮಾಧಾನ; ಮತ್ತೆ ಆ್ಯಕ್ಟೀವ್ ಆದ ರಮೇಶ್ ಜಾರಕಿಹೊಳಿ
ಬಿಜೆಪಿ ಅವರಿಗಿಂತ ಹೆಚ್.ಡಿ.ಕುಮಾರಸ್ವಾಮಿ ಹೆಚ್ಚು ಹತಾಶರಾಗಿದ್ದಾರೆ!
ಬಿಜೆಪಿಗಿಂತಲೂ ಕುಮಾರಸ್ವಾಮಿ ಅವರು ಹೆಚ್ಚು ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ರಾಜಕೀಯವಾಗಿ ಹತಾಶರಾದವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹೆಚ್.ಡಿ ಕುಮಾರಸ್ವಾಮಿ ಅವರು ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು. ಬಿಜೆಪಿಗಿಂತ ಜಾಸ್ತಿ ಹತಾಶರಾಗಿರುವುದು ಕುಮಾರಸ್ವಾಮಿ. ಬಿಜೆಪಿ ಜೊತೆ ಸೇರದೇ ಹೋಗಿದ್ದರೆ ಒಂದು ಸ್ಥಾನವನ್ನೂ ಗೆಲ್ಲಲು ಆಗುತ್ತಿರಲಿಲ್ಲ. ಕುರುಡರು, ಹೆಳವರ ರೀತಿ ಒಬ್ಬರಿಗೊಬ್ಬರು ಅವಲಂಬಿತರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಚುನಾವಣೆ ಪ್ರಯುಕ್ತ ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ:
ಹೈ ಕಮಾಂಡಿಗೆ ದೂರು ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ ಪಂಚ ರಾಜ್ಯಗಳ ಚುನಾವಣೆ ಬಂದಿರುವುದರಿಂದ ನೆಪಮಾಡಿಕೊಂಡು ಸುಳ್ಳು ಹೇಳುತ್ತಾರೆ. ಇಂದಿನವರೆಗೆ ನಾವು ಯಾವ ರಾಜ್ಯಗಳಿಗೂ ಹಣ ಕೊಟ್ಟಿಲ್ಲ. ಅದಕ್ಕಾಗಿ ಯಾರ ಬಳಿಯೂ ಹಣ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ- ಕೈ ಕೊಟ್ಟ ಹಿಂಗಾರು, ಮುಂಗಾರು ಮಳೆ, ಆತ್ಮಹತ್ಯೆಗೆ ಶರಣಾದ ಅನ್ನದಾತ
ಬಿಜೆಪಿಗೆ ಮಾನ , ಮರ್ಯಾದೆ ಇದೆಯೇ?
ಬಿಜೆಪಿ ಎಟಿಎಂ ಸರ್ಕಾರ ಎಂದು ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಸುಳ್ಳು ಆರೋಪ. ಆಪರೇಷನ್ ಕಮಲ ಕೈಗೊಂಡು 25 ಕೋಟಿ ಹಣ ನೀಡಿ, 25.ಕೋಟಿ ಚುನಾವಣೆ ಗೆ ಖರ್ಚು ಮಾಡಲು ಹಣ ಎಲ್ಲಿಂದ ಬಂತು. ಇವರಿಗೆ ಏನಾದರೂ ಮಾನ , ಮರ್ಯಾದೆ ಇದೆಯೇ ಎಂದು ಇದೇ ಸಂದರ್ಭದಲ್ಲಿ ಸಿಎಂ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.