ಬೆಂಗಳೂರು: ಬುಡಕ್ಕೆ ಬೆಂಕಿ ಬಿದ್ದಾಗ ನನಗೆ ಗೊತ್ತಿಲ್ಲವೆಂದು ಜಾರಿಕೊಳ್ಳುವುದು ಸಿಎಂ ಸಿದ್ದರಾಮಯ್ಯನವರ ರಾಜಕೀಯದ ಸೋಗಲಾಡಿತನವೆಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಲು ಹೊರಟಿರುವ ಘನಂದಾರಿ ಕೆಲಸಗಳು ಮುಖ್ಯಮಂತ್ರಿ ಆದವರಿಗೆ ಗೊತ್ತಿಲ್ಲವೆಂದರೆ, ಇವರೊಬ್ಬ ಅಸಮರ್ಥರು ಅಥವಾ ಅಪ್ರಯೋಜಕರು ಎನ್ನುವುದು ಸಾಬೀತಾಗುತ್ತದೆ’ ಎಂದು ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಇವರಿಬ್ಬರ ಕುರ್ಚಿ ಕದನದಲ್ಲಿ ಇಡೀ ರಾಜ್ಯವೇ ಬಲಿಯಾಗುತ್ತಿದೆ. ಬೆಂಗಳೂರಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಡಿಸಿಎಂ ಡಿಕೆ ಸಾಹೇಬರು ಲ್ಯಾಂಡ್ ಮಾಫಿಯಾ, ರಿಯಲ್ ಎಸ್ಟೇಟ್ ದಂಧೆ ನಡೆಸಿ ಲೂಟಿ ಹೊಡೆಯಲು ಕನಕಪುರವನ್ನು ಕರ್ನಾಟಕದ ರಾಜಧಾನಿಯನ್ನಾಗಿ ಬೇಕಾದರೂ ಮಾಡಬಹುದೇನೋ? ಇದು ಕೂಡ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೆ ಆಗಬಹುದು..!’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಬುಡಕ್ಕೆ ಬೆಂಕಿ ಬಿದ್ದಾಗ ನನಗೆ ಗೊತ್ತಿಲ್ಲವೆಂದು ಜಾರಿಕೊಳ್ಳುವುದು @siddaramaiah ಅವರ ರಾಜಕೀಯದ ಸೋಗಲಾಡಿತನ.
ಡಿಸಿಎಂ @DKShivakumar ಮಾಡಲು ಹೊರಟಿರುವ ಘನಂದಾರಿ ಕೆಲಸಗಳು ಮುಖ್ಯಮಂತ್ರಿ ಆದವರಿಗೆ ಗೊತ್ತಿಲ್ಲವೆಂದರೆ, ಇವರೊಬ್ಬ ಅಸಮರ್ಥರು ಅಥವಾ ಅಪ್ರಯೋಜಕರು ಎನ್ನುವುದು ಸಾಬೀತಾಗುತ್ತದೆ.
ಇವರಿಬ್ಬರ ಕುರ್ಚಿ ಕದನದಲ್ಲಿ ಇಡೀ ರಾಜ್ಯವೇ… pic.twitter.com/nhWGHMYpdB
— BJP Karnataka (@BJP4Karnataka) October 26, 2023
ಇದನ್ನೂ ಓದಿ- ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಚಿಂತನೆ
ಲೂಟಿ ಹೊಡೆಯಲು ಸುರಂಗ ಮಾರ್ಗ!
ಕರ್ನಾಟಕವನ್ನು ಕೊಳ್ಳೆ ಹೊಡೆಯೋಕೆ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಹಾಗು ಕಾಂಗ್ರೆಸ್ ಶಾಸಕರು ನಿತ್ಯವೂ ಹೊಸ ಸ್ಕೀಂ ಹಾಕುತ್ತಿದ್ದಾರೆ. ಹಾಲಿ ಯೋಜನೆಗಳಿಗೇ ದುಡ್ಡಿಲ್ಲದಿರುವಾಗ ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆಯಲು ಹೊಸದಾಗಿ ಮಾಡಿರುವ ಹುನ್ನಾರವೇ ಬೆಂಗಳೂರಿನ ಸುರಂಗ ಮಾರ್ಗ.
ಆದರೆ ಕಮಿಷನ್ಗಾಗಿ @DKShivakumar ಹಾಗೂ… pic.twitter.com/BencqWemON
— BJP Karnataka (@BJP4Karnataka) October 26, 2023
‘ಕರ್ನಾಟಕವನ್ನು ಕೊಳ್ಳೆ ಹೊಡೆಯೋಕೆ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು ನಿತ್ಯವೂ ಹೊಸ ಸ್ಕೀಂ ಹಾಕುತ್ತಿದ್ದಾರೆ. ಹಾಲಿ ಯೋಜನೆಗಳಿಗೇ ದುಡ್ಡಿಲ್ಲದಿರುವಾಗ ಗುತ್ತಿಗೆದಾರರಿಂದ ಕಿಕ್ಬ್ಯಾಕ್ ಪಡೆಯಲು ಹೊಸದಾಗಿ ಮಾಡಿರುವ ಹುನ್ನಾರವೇ ಬೆಂಗಳೂರಿನ ಸುರಂಗ ಮಾರ್ಗ. ಆದರೆ ಕಮಿಷನ್ಗಾಗಿ ಡಿ.ಕೆ.ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಅವರಿಬ್ಬರೂ ತೋಡುತ್ತಿರುವ ಸುರಂಗಗಳು ಎದುರಾಬದುರು ಬಂದಿರುವುದೇ ಹೊರಜಗತ್ತಿಗೆ ಕಾಣುತ್ತಿರುವ ಈ ಒಳಜಗಳದ ಒಳಮರ್ಮ’ವೆಂದು ಬಿಜೆಪಿ ಕುಟುಕಿದೆ.
"ಬ್ರ್ಯಾಂಡ್ ಬೆಂಗಳೂರು"ನ್ನು "ಬ್ಯಾಡ್ ಬೆಂಗಳೂರು" ಮಾಡುತ್ತಿರುವ @DKShivakumar ಅವರಿಗೆ ಆಗುವ ಲಾಭಗಳು:
✔️ ಆ ದಿನಗಳ ತನ್ನದೇ ಸಾಮ್ರಾಜ್ಯ ಕಟ್ಟಿಕೊಳ್ಳಲು ಅನುಕೂಲ..!
✔️ ಕನಕಪುರವನ್ನು ಬೆಂಗಳೂರಿಗೆ ಸೇರಿದರೆ ಆಸ್ತಿಗಳ ಮೌಲ್ಯ ನೂರುಪಟ್ಟು ಹೆಚ್ಚಳ..!
✔️ ಬ್ರ್ಯಾಂಡ್ ಬೆಂಗಳೂರಿನ ಹೆಸರಲ್ಲಿ ಯೋಜನೆಗಳ ಮೂಲಕ ಲೂಟಿ..!
✔️ ₹85,000…— BJP Karnataka (@BJP4Karnataka) October 26, 2023
‘ಬ್ರ್ಯಾಂಡ್ ಬೆಂಗಳೂರು"ನ್ನು "ಬ್ಯಾಡ್ ಬೆಂಗಳೂರು" ಮಾಡುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಗುವ ಲಾಭಗಳು ಈ ರೀತಿ ಇವೆ. ಆ ದಿನಗಳ ತನ್ನದೇ ಸಾಮ್ರಾಜ್ಯ ಕಟ್ಟಿಕೊಳ್ಳಲು ಅನುಕೂಲ, ಕನಕಪುರವನ್ನು ಬೆಂಗಳೂರಿಗೆ ಸೇರಿದರೆ ಆಸ್ತಿಗಳ ಮೌಲ್ಯ ನೂರುಪಟ್ಟು ಹೆಚ್ಚಳ, ಬ್ರ್ಯಾಂಡ್ ಬೆಂಗಳೂರಿನ ಹೆಸರಲ್ಲಿ ಯೋಜನೆಗಳ ಮೂಲಕ ಲೂಟಿ, ₹85,000 ಕೋಟಿ ವೆಚ್ಚದ ಸುರಂಗ ಮಾರ್ಗದ ಹೆಸರಲ್ಲಿ ಕಲೆಕ್ಷನ್ಗೆ ಸ್ಕೆಚ್, ಬಫರ್ ಜೋನ್ಗಳನ್ನು ಕಡಿಮೆ ಮಾಡಿ ಲ್ಯಾಂಡ್ ಮಾಫಿಯಾಗೆ ನಾಂದಿ ಮತ್ತು 10 ಎಕರೆ ಪ್ರದೇಶದಲ್ಲಿ ಸ್ಕೈಡೆಕ್ ಎಂಬ ಹೂವಿಟ್ಟು ಜಮೀನು ಕಬಳಿಕೆ..!’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಮಿಷನ್ ಕೊಡುವ ಮುನ್ನ ಅಕ್ರಮ, ಕಮಿಷನ್ ಕೊಟ್ಟ ತಕ್ಷಣ ಸಕ್ರಮ, ಇದು ರಾಜ್ಯದ @INCKarnataka ಸರ್ಕಾರದ ವಾಸ್ತವ ಸ್ಥಿತಿ.
ಬಿ.ಬಿ.ಎಂ.ಪಿ ವ್ಯಾಪ್ತಿಯ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ, ಹೀಗಾಗಿ ತನಿಖೆ ನಡೆಸಿ ಬಿಲ್ ಪಾವತಿಸುತ್ತೇವೆ ಎಂದು ವೀರಾವೇಶದಿ ಮಾತನಾಡಿದ್ದ ಡಿಸಿಎಂ @DKShivakumar ಅವರು, ಈಗ ತನಿಖೆಯೂ ನಡೆಸದೆ, ಮುಗುಮ್ಮಾಗಿ ಬಿಲ್… pic.twitter.com/R43EUujwTs
— BJP Karnataka (@BJP4Karnataka) October 26, 2023
ಇದನ್ನೂ ಓದಿ- ಈ ಹಿಂದೆ ಹುಲಿ ಉಗುರು ಒರಿಜಿನಲ್ ಅಂತ ಹೇಳಿದ್ದ ಜಗ್ಗೇಶ್
ಅಕ್ರಮ ಆಸ್ತಿ ಗಳಿಕೆ ಹಾಗೂ ದುಪ್ಪಟ್ಟು ಆದಾಯವನ್ನು ಏರಿಸಿಕೊಳ್ಳುವುದರಲ್ಲಿ ನಿಸ್ಸೀಮರಾಗಿರುವ ಡಿಕೆ ಸಾಹೇಬರ ಮುಂದೆ ಇರುವುದು ಬ್ರ್ಯಾಂಡ್ ಬೆಂಗಳೂರಲ್ಲ, ಭವ್ಯ ಬೆಂಗಳೂರಿನ ಲೂಟಿಯ ಕನಸು. ಕಮಿಷನ್ ಕೊಡುವ ಮುನ್ನ ಅಕ್ರಮ, ಕಮಿಷನ್ ಕೊಟ್ಟ ತಕ್ಷಣ ಸಕ್ರಮ, ಇದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಾಸ್ತವ ಸ್ಥಿತಿ. ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ, ಹೀಗಾಗಿ ತನಿಖೆ ನಡೆಸಿ ಬಿಲ್ ಪಾವತಿಸುತ್ತೇವೆಂದು ವೀರಾವೇಶದಿ ಮಾತನಾಡಿದ್ದ ಡಿಸಿಎಂ ಡಿಕೆಶಿಯವರು, ಈಗ ತನಿಖೆಯೂ ನಡೆಸದೆ, ಮುಗುಮ್ಮಾಗಿ ಬಿಲ್ ಪಾವತಿಸಿ "ಕೈ" ತೊಳೆದುಕೊಂಡಿದ್ದಾರೆ! ಅಕ್ರಮವೇ ನಡೆದಿಲ್ಲವೆಂದ ಮೇಲೆ ತನಿಖೆ ಹೆಸರಿನಲ್ಲಿ ಗುತ್ತಿಗೆದಾರರನ್ನು ಗೋಳು ಹೊಯ್ದುಕೊಂಡಿದ್ದು 80% ಕಮಿಷನ್ ವಸೂಲಿಗಾ ಡಿಕೆ ಶಿವಕುಮಾರ್ ಅವರೇ...?? ಕಳೆದ ವಾರ ಅಕ್ರಮವಾಗಿ ದೊರೆತ ₹102 ಕೋಟಿ ಸಹ ಈ ಬಿಲ್ ಪಾವತಿಯ ಕಿಕ್ ಬ್ಯಾಕ್ ಹಣವೇ ಕಾಂಗ್ರೆಸ್..?’ ಎಂದು ಬಿಜೆಪಿ ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.