ಕ್ಯಾಲಿಫೋರ್ನಿಯಾ: ಲಾಸ್ ಏಂಜಲೀಸ್ನ ಈಶಾನ್ಯಕ್ಕೆ 200 ಮೈಲಿ ದೂರದಲ್ಲಿರುವ ರಿಡ್ಜೆಕ್ರೆಸ್ಟ್ ನಗರದ ಸಮೀಪ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದೆ. ಈ ಪ್ರದೇಶದಲ್ಲಿ ದಶಕಗಳಲ್ಲಿ ಉಂಟಾದ ಅತಿದೊಡ್ಡ ಭೂಕಂಪ ಇದಾಗಿದೆ.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಆರಂಭದಲ್ಲಿ ಭೂಕಂಪವು 6.6 ತೀವ್ರತೆ ಇತ್ತು ಎಂದು ವರದಿಯಾಗಿದೆ. ಕೇವಲ 5.4 ಮೈಲಿಗಳ ಆಳದಲ್ಲಿ ಭೂಕಂಪದ ಕೇಂದ್ರವಿದೆ ಎನ್ನಲಾಗಿದೆ.
ಲಾಸ್ ಏಂಜಲೀಸ್ನಲ್ಲಿ ಉಂಟಾದ ಭೂಕಂಪದ ನಡುಕವು ಹಲವಾರು ಸಣ್ಣ ಪಟ್ಟಣಗಳಲ್ಲೂ ತನ್ನ ಪ್ರಭಾವ ಬೀರಿದೆ. ಘಟನೆ ವರದಿಯಾದ ಕೂಡಲೇ, ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ಟ್ವೀಟ್ನಲ್ಲಿ ಇದು “ಅತಿದೊಡ್ಡ ಭೂಕಂಪ” ಎಂದು ಹೇಳಿದೆ.
ರಿಡ್ಜೆಕ್ರೆಸ್ಟ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಭೂಕಂಪನವು ನಗರದಲ್ಲಿ ಎಲ್ಲೆಲ್ಲಿ ಹಾನಿಯುಂಟು ಮಾಡಿದೆ ಎಂಬುದನ್ನು ಶಂಕಿಸಲಾಗಿಲ್ಲ ಎಂದು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ಟ್ವೀಟ್ನಲ್ಲಿ ತಿಳಿಸಿದೆ.
We felt the earthquake, did you? Please only use 911 to report emergencies. Non emergencies in the City of Los Angeles use 877-ASK-LAPD.
— LAPD HQ (@LAPDHQ) July 4, 2019
ಆದಾಗ್ಯೂ, ಸಾವು-ನೋವು ಅಥವಾ ಯಾವುದೇ ಹಾನಿಯ ಬಗ್ಗೆ ಇನ್ನೂ ಕೂಡ ಯಾವುದೇ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಏತನ್ಮಧ್ಯೆ, ಭೂಕಂಪದ ನಂತರ ಸುನಾಮಿ ಸಂಭವಿಸುವ ನಿರೀಕ್ಷೆಯಿಲ್ಲ ಎಂದು ಯುಎಸ್ ರಾಷ್ಟ್ರೀಯ ಸುನಾಮಿ ಎಚ್ಚರಿಕೆ ಕೇಂದ್ರ ಹೇಳಿದೆ.
Tsunami Info Stmt: M6.5 055mi NW Barstow, California 1034PDT Jul 4: Tsunami NOT expected; CA,OR,WA,BC,and AK
— NWS Tsunami Alerts (@NWS_NTWC) July 4, 2019