ಶ್ರೀನಗರ: ಅಮರನಾಥ ಯಾತ್ರೆಗೆ ತೆರಳುತ್ತಿರುವ ಬಾಲ್ಟಾಲ್ ಮಾರ್ಗದ ಯಾತ್ರಿಕರ ವಿಡಿಯೋ ವೈರಲ್ ಆಗುತ್ತಿದೆ. ಇದು ಆಶ್ಚರ್ಯಕರ ಮಾತ್ರವಲ್ಲದೆ ಸೇನೆಯ ಬಗ್ಗೆ ಹೆಮ್ಮೆಪಡುವಂತೆ ಮಾಡಿದೆ. ವೀಡಿಯೊದಲ್ಲಿ, ದಾರಿಯುದ್ದಕ್ಕೂ ಕಟ್ಟೆಚ್ಚರ ವಹಿಸಿರುವ ಐಟಿಬಿಪಿ ಜವಾನರು ಬಾಲಾಟಾಲ್ ಮಾರ್ಗವಾಗಿ ಬರುವ ಜನರಿಗೆ ರಕ್ಷಾಕವಚವಾಗಿ ನಿಂತು ಅವರನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಿದ್ದಾರೆ. ಈ ವೀಡಿಯೊವನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತದೆ.
ಅಮರನಾಥ ಯಾತ್ರೆಯ ಎರಡೂ ಮಾರ್ಗಗಳಲ್ಲಿ ಇತರ ಭದ್ರತಾ ಸಂಸ್ಥೆಗಳೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು 5000 ಐಟಿಬಿಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
#WATCH ITBP: Indo-Tibetan Border Police personnel braving shooting stones in a glacier by placing shield wall to ensure safety of pilgrims in Baltal, Jammu & Kashmir. #AmarnathYatra pic.twitter.com/8FWerGoE6o
— ANI (@ANI) July 4, 2019
ಮಾಹಿತಿಯ ಪ್ರಕಾರ, ವೈದ್ಯಕೀಯ ತುರ್ತು ಪರಿಸ್ಥಿತಿ ವೇಳೆ ಯಾತ್ರಾರ್ಥಿಗಳ ಸಹಾಯಕ್ಕಾಗಿ ಐಟಿಬಿಪಿಯಿಂದ ಕೆಲವು ವಿಶೇಷ ತಂಡವನ್ನು ರಚಿಸಲಾಗಿದೆ. ಇದಕ್ಕಾಗಿ ಅನೇಕ ಜವಾನರನ್ನು ಸಿದ್ಧಪಡಿಸಲಾಗಿದ್ದು, ಅವರಿಗೆ ವಿಶೇಷ ವೈದ್ಯಕೀಯ ತರಬೇತಿ ನೀಡಲಾಯಿತು. ಈ ಯುವಕರು ಪ್ರತಿ ಎರಡು ಮೂರು ಕಿಲೋಮೀಟರ್ಗೆ ಗಸ್ತು ತಿರುಗುತ್ತಿರುವುದು ಕಂಡುಬರುತ್ತದೆ. ಆಕ್ಸಿಜನ್ ಸಿಲಿಂಡರ್ಗಳು ಸಹ ಜವಾನರ ಹಿಂಭಾಗದಲ್ಲಿವೆ.
ಜುಲೈ 1 ರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಿದೆ. ಇದುವರೆಗೆ 50 ಸಾವಿರಕ್ಕೂ ಹೆಚ್ಚು ಯಾತ್ರಿಕರು ಅಮರನಾಥ ಗುಹೆಯಲ್ಲಿ ಪ್ರಕೃತಿಯ ನಡುವೆ ಇರುವ ಶಿವನ ದರ್ಶನ ಪಡೆದಿದ್ದಾರೆ. ಅಮರನಾಥ ಯಾತ್ರೆ ವೇಳೆ ಕೆಲವು ಪ್ರಯಾಣಿಕರು ಎದುರಿಸಬಹುದಾದಂತಹ ಸಮಸ್ಯೆಗಳಿಗೆ ಸಹಾಯ ಮಾಡಲು ಪ್ರತಿ ನಿಲ್ದಾಣದ ಕೊನೆಯಲ್ಲಿ ಐಟಿಬಿಪಿ ಜವಾನರು ಸಿದ್ದರಿದ್ದಾರೆ. ಕಳೆದ 4 ದಿನಗಳ ಬಗ್ಗೆ ಮಾತನಾಡುವುದಾದರೆ, ಎತ್ತರದ ಪ್ರದೇಶದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 50 ಕ್ಕೂ ಹೆಚ್ಚು ಯಾತ್ರಿಕರಿಗೆ ಐಟಿಬಿಪಿ ಜವಾನರು ಸಹಾಯ ಮಾಡಿದ್ದಾರೆ.