ವಿರಾಟ್ ಕೊಹ್ಲಿ ಬರ್ತ್‌ ಡೇಗೆ ಅನುಷ್ಕಾ ಮುದ್ದಾದ ವಿಶ್‌.. ಎಲ್ಲರೂ ಕಾದಿದ್ದ ಆ ಗುಟ್ಟು ಬಿಟ್ಟು ಕೊಟ್ರಾ?

Anushka Sharma Wish To Virat Kohli : ಕ್ರಿಕೆಟಿಗ ವಿರಾಟ್ ಕೊಹ್ಲಿ ಇಂದು 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಮೂರು ಫೋಟೋಗಳೊಂದಿಗೆ ಅವರಿಗೆ ವಿಶ್ ಮಾಡಿದ್ದಾರೆ.  

Written by - Chetana Devarmani | Last Updated : Nov 5, 2023, 01:04 PM IST
  • ವಿರಾಟ್ ಕೊಹ್ಲಿ ಹುಟ್ಟುಹಬ್ಬ
  • ಅನುಷ್ಕಾ ಶರ್ಮಾ ಶುಭಾಶಯ
  • ಕೊಹ್ಲಿಗೆ 35 ನೇ ಹುಟ್ಟುಹಬ್ಬದ ಸಂಭ್ರಮ
ವಿರಾಟ್ ಕೊಹ್ಲಿ ಬರ್ತ್‌ ಡೇಗೆ ಅನುಷ್ಕಾ ಮುದ್ದಾದ ವಿಶ್‌.. ಎಲ್ಲರೂ ಕಾದಿದ್ದ ಆ ಗುಟ್ಟು ಬಿಟ್ಟು ಕೊಟ್ರಾ? title=

Virat Kohli Birthday : ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯು ಅತ್ಯಂತ ಜನಪ್ರಿಯ ಮತ್ತು ಸುಂದರ ಸೆಲಿಬ್ರಿಟಿ ಜೋಡಿಗಳಲ್ಲಿ ಒಂದಾಗಿದೆ. ಅಭಿಮಾನಿಗಳು ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ. ವಿರಾಟ್ ಕೊಹ್ಲಿ ನವೆಂಬರ್ 5 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊಹ್ಲಿ ಇಂದು 35 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಡೀ ಜಗತ್ತು ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಹಾರೈಸುತ್ತಿದೆ. ಅವರ ಪತ್ನಿ ಹೇಗೆ ಉಳಿದುಕೊಂಡರು. ಈ ವಿಶೇಷ ದಿನದಂದು ಅನುಷ್ಕಾ ಶರ್ಮಾ ತಮ್ಮ ಪತಿಗೆ ಸ್ಪೆಷಲ್‌ ವಿಶ್ ಮಾಡಿದ್ದಾರೆ.

ಇದನ್ನೂ ಓದಿ : 90ರ ದಶಕದ ಸಿನಿ ರಸಿಕರ ಕನಸಿನ ಕನ್ಯೆ ʼರಂಭಾʼ ಚಿತ್ರರಂಗಕ್ಕೆ ರೀ ಎಂಟ್ರಿ..! ಸಿನಿಮಾ ಯಾವುದು..? 

ಅನುಷ್ಕಾ ಶರ್ಮಾ ತಮಾಷೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿರಾಟ್ ಅವರ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪತ್ನಿ ಅನುಷ್ಕಾ ಮುದ್ದಾದ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ. ಕೊನೆಯ ಫೋಟೋದಲ್ಲಿ ಇಬ್ಬರೂ ಒಟ್ಟಿಗೆ ಇದ್ದಾರೆ. ಈ ಪೋಟೋಗಳ ಅಭಿಮಾನಿಗಳ ಮನಗೆಲ್ಲುತ್ತಿವೆ. 

 

 

ಅನುಷ್ಕಾ ಮತ್ತು ವಿರಾಟ್ ಜೋಡಿ ತುಂಬಾ ಮೆಚ್ಚುಗೆ ಪಡೆದಿದೆ. ಇಬ್ಬರಿಗೂ ವಾಮಿಕಾ ಎಂಬ ಮುದ್ದಾದ ಮಗಳಿದ್ದಾಳೆ, ಅವರ ಮುಖವನ್ನು ಇದುವರೆಗೂ ಅಭಿಮಾನಿಗಳಿಗೆ ತೋರಿಸಿಲ್ಲ. ಇದೀಗ ಅನುಷ್ಕಾ ಮತ್ತೆ ತಾಯಿಯಾಗಲಿದ್ದಾರೆ ಎಂಬ ವದಂತಿಯ ಸುದ್ದಿ ಹರಿದಾಡುತ್ತಿದೆ. ಆದರೆ ಅನುಷ್ಕಾ ಮತ್ತು ವಿರಾಟ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅನುಷ್ಕಾ ಈ ಬಾರಿಯ ಕರ್ವಾ ಚೌತ್‌ ಉಪವಾಸವನ್ನೂ ಮಾಡಿಲ್ಲ. ಹೀಗಾಗಿ ಆಕೆ ಗರ್ಭಿಣಿ ಎಂಬುದು ನಿಜ ಎಂದು ಅನೇಕರು ಊಹಿಸುತ್ತಿದ್ದಾರೆ. 

ಇದನ್ನೂ ಓದಿ : ಸಚಿನ್ ವಿಶ್ವ ದಾಖಲೆ ಮೇಲೆ 'ಕಿಂಗ್ ಕೊಹ್ಲಿ' ಕಣ್ಣು.. ಹುಟ್ಟು ಹಬ್ಬದಂದು ಬರೀತಾರಾ ಹೊಸ ಇತಿಹಾಸ? 

ಅನುಷ್ಕಾ ಶರ್ಮಾ ನವೆಂಬರ್ 2017 ರಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನು ವಿವಾಹವಾದರು. ಅವರು ಜನವರಿ 2021 ರಲ್ಲಿ ತಮ್ಮ ಮಗಳು ವಾಮಿಕಾ ಅವರನ್ನು ಸ್ವಾಗತಿಸಿದರು. ಅನುಷ್ಕಾ ಶೀಘ್ರದಲ್ಲೇ 'ಚಕ್ಡಾ ಎಕ್ಸ್‌ಪ್ರೆಸ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಭಾರತದ ಮಾಜಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News