‘ಟೂರ್ನಮೆಂಟ್ ಆಟಗಾರ ಪ್ರಶಸ್ತಿ’ಗೆ ನಾಮನಿರ್ದೇಶನಗೊಂಡ 9 ಆಟಗಾರರು: ಅದರಲ್ಲಿ ನಾಲ್ವರು ಭಾರತೀಯರು! ಯಾರವರು?

ICC nominees for the Player of the Tournament award: 9 ಮಂದಿಯಲ್ಲಿ ನಾಲ್ವರು ಭಾರತೀಯ ಕ್ರಿಕೆಟಿಗರು, ಇಬ್ಬರು ಆಸ್ಟ್ರೇಲಿಯನ್ನರು, ಇಬ್ಬರು ನ್ಯೂಜಿಲೆಂಡ್ ಮತ್ತು ಒಬ್ಬರು ದಕ್ಷಿಣ ಆಫ್ರಿಕಾದವರಾಗಿದ್ದಾರೆ. ಐಸಿಸಿ ವಿಶ್ವಕಪ್ 2023 ರ ಫೈನಲ್ ನವೆಂಬರ್ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ.

Written by - Bhavishya Shetty | Last Updated : Nov 18, 2023, 06:26 PM IST
    • ಐಸಿಸಿಯ ‘ಟೂರ್ನಮೆಂಟ್‌ ಆಟಗಾರ ಪ್ರಶಸ್ತಿ’ಗೆ ಒಂಬತ್ತು ಮಂದಿ ಆಟಗಾರರ ನಾಮನಿರ್ದೇಶನ
    • 9 ಮಂದಿಯಲ್ಲಿ ನಾಲ್ವರು ಭಾರತೀಯ ಕ್ರಿಕೆಟಿಗರು
    • ವಿಶ್ವಕಪ್ 2023 ರ ಫೈನಲ್ ನವೆಂಬರ್ 19 ರಂದು ನಡೆಯಲಿದೆ
‘ಟೂರ್ನಮೆಂಟ್ ಆಟಗಾರ ಪ್ರಶಸ್ತಿ’ಗೆ ನಾಮನಿರ್ದೇಶನಗೊಂಡ 9 ಆಟಗಾರರು: ಅದರಲ್ಲಿ ನಾಲ್ವರು ಭಾರತೀಯರು! ಯಾರವರು? title=
ICC nominees for the Player of the Tournament award

ICC nominees for the Player of the Tournament award: ಐಸಿಸಿಯು ‘ಟೂರ್ನಮೆಂಟ್‌ ಆಟಗಾರ ಪ್ರಶಸ್ತಿ’ಗೆ ಒಂಬತ್ತು ಮಂದಿ ಆಟಗಾರರನ್ನು ನಾಮನಿರ್ದೇಶನಗೊಳಿಸಿದೆ. ಆ 9 ಮಂದಿಯಲ್ಲಿ ನಾಲ್ವರು ಭಾರತೀಯ ಕ್ರಿಕೆಟಿಗರು, ಇಬ್ಬರು ಆಸ್ಟ್ರೇಲಿಯನ್ನರು, ಇಬ್ಬರು ನ್ಯೂಜಿಲೆಂಡ್ ಮತ್ತು ಒಬ್ಬರು ದಕ್ಷಿಣ ಆಫ್ರಿಕಾದವರಾಗಿದ್ದಾರೆ. ಐಸಿಸಿ ವಿಶ್ವಕಪ್ 2023 ರ ಫೈನಲ್ ನವೆಂಬರ್ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಐಸಿಸಿಯು ನಾಮನಿರ್ದೇಶನ ಮಾಡಿದೆ.

ಇದನ್ನೂ ಓದಿ: “ಫೈನಲ್ ಪಂದ್ಯದಲ್ಲಿ ಸಿರಾಜ್ ಬದಲಿಯಾಗಿ ಈ ಅನುಭವಿ ಸ್ಪಿನ್ನರ್ ಆಡಲಿದ್ದಾರೆ”- ಬಿಸಿಸಿಐ ಅಧಿಕಾರಿ ಮಾಹಿತಿ

ವಿರಾಟ್ ಕೊಹ್ಲಿ (711 ರನ್)

10 ಪಂದ್ಯಗಳಲ್ಲಿ ಮೂರು ಶತಕ ಮತ್ತು 5 ಅರ್ಧಶತಕಗಳ ಸಹಾಯದಿಂದ 711 ರನ್ ಗಳಿಸಿದ್ದಾರೆ. ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 86 ರನ್ ಗಳಿಸಿ ಶುಭಾರಂಭ ಮಾಡಿದ ಅವರು, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 55 ರನ್ ಗಳಿಸಿದ್ದರು. ಆ ಬಳಿಕ ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ ಶತಕ ಬಾರಿಸಿದ್ದರು. ಇದಾದ ನಂತರ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ 95 ಮತ್ತು 88 ಸ್ಕೋರ್‌’ಗಳು ದಾಖಲಾಗಿವೆ. ಈ ಬಳಿಕ ಈಡನ್ ಗಾರ್ಡನ್‌’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49ನೇ ಶತಕ ಸಿಡಿಸಿದ್ದರೆ, ನೆದರ್ಲೆಂಡ್ಸ್ ವಿರುದ್ಧದ ಲೀಗ್ ಪಂದ್ಯದಲ್ಲಿ 51 ರನ್ ಸಿಡಿಸಿದ್ದರು. ಅಂದಹಾಗೆ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 117 ರನ್ ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ.

ಮೊಹಮ್ಮದ್ ಶಮಿ (23 ವಿಕೆಟ್)

ಆಡಿರುವ ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್‌’ಗಳನ್ನು ಕಬಳಿಸಿರುವ ಶಮಿಗೆ ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಇವರು ಪ್ರತೀ ಪಂದ್ಯದಲ್ಲೂ ಬೆಸ್ಟ್ ಪ್ರದರ್ಶನ ನೀಡಿದ್ದರು., ಆದರೆ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌’ನಲ್ಲಿ 7 ವಿಕೆಟ್‌ ಕಬಳಿಸಿ ಇತಿಹಾಸವನ್ನೇ ಸೃಷ್ಟಿಸಿದ್ದರು.

ರೋಹಿತ್ ಶರ್ಮಾ (550 ರನ್)

ಟೀಂ ಇಂಡಿಯಾದ ನಾಯಕ ಮತ್ತು ಆರಂಭಿಕ ಆಟಗಾರ ತಂಡಕ್ಕೆ ಅದ್ಭುತ ಆರಂಭ ನೀಡುತ್ತಿದ್ದಾರೆ. ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿರುವ ರೋಹಿತ್, ಜವಾಬ್ದಾರಿಯುತ ಬ್ಯಾಟಿಂಗ್ ಇಡೀ ತಂಡಕ್ಕೆ ಅಡಿಪಾಯ ಹಾಕಿದಂತಿದೆ ಎಂಬುದು ಸುಳ್ಳಲ್ಲ.

ಜಸ್ಪ್ರೀತ್ ಬುಮ್ರಾ (18 ವಿಕೆಟ್)

ಭಾರತದ ಖ್ಯಾತ ಯಾರ್ಕರ್ ಸ್ಪೆಷಲಿಸ್ಟ್ ಈ ಟೂರ್ನಿಯಲ್ಲಿ ಒಟ್ಟು 18 ವಿಕೆಟ್’ಗಳನ್ನು ಪಡೆದಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ವಿರುದ್ಧ ಜಸ್ಪ್ರೀತ್ ಬುಮ್ರಾ ಮಿಂಚಿನ ಬೌಲಿಂಗ್ ಮಾಡಿದ್ದರು.

ಇದನ್ನೂ ಓದಿ: “ಅಪ್ಪಾ ತಪ್ಪಾಯ್ತಪ್ಪ… ಕ್ಷಮಿಸು!”- ತಂದೆ ಕರೆ ಮಾಡುತ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತ ಪ್ರತಾಪ್

ಇನ್ನುಳಿದಂರತೆ, ನ್ಯೂಜಿಲೆಂಡ್ ತಂಡದ ಡೇರಿಲ್ ಮಿಚೆಲ್ (552 ರನ್), ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ (398 ರನ್ ಮತ್ತು ಐದು ವಿಕೆಟ್), ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ (578 ರನ್, ಐದು ವಿಕೆಟ್),  ನ್ಯೂಜಿಲೆಂಡ್ ತಂಡದ ಕ್ವಿಂಟನ್ ಡಿ ಕಾಕ್ (594 ರನ್), ಆಸ್ಟ್ರೇಲಿಯಾದ ಆಡಮ್ ಝಂಪಾ (22 ವಿಕೆಟ್) ಈ ಪಟ್ಟಿಯಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News