World Cup 2023 : 12 ವರ್ಷಗಳ ನಂತರ ತನ್ನದೇ ನೆಲದಲ್ಲಿ ತನ್ನ ನೆಚ್ಚಿನ ಅಭಿಮಾನಿಗಳ ನಡುವೆ ODI ವಿಶ್ವಕಪ್ ಟ್ರೋಫಿ ಗೆಲ್ಲುವ ಅವಕಾಶ ಭಾರತಕ್ಕಿತ್ತು. ಆದರೆ, ಅಂತಿಮ ಪಂದ್ಯದಲ್ಲಿ, ಆಸ್ಟ್ರೇಲಿಯಾ ತಂಡವು ಭಾರತವನ್ನು 6 ವಿಕೆಟ್ಗಳಿಂದ ಸೋಲಿಸುವ ಮೂಲಕ ಕೋಟ್ಯಂತರ ಭಾರತೀಯ ಅಭಿಮಾನಿಗಳನ್ನು ನಿರಾಸೆಗೊಳಿಸಿತು. 2003ರಲ್ಲಿಯೂ ಆಸ್ಟ್ರೇಲಿಯಾ, ವಿಶ್ವಕಪ್ನ ಅಂತಿಮ ಪಂದ್ಯದಲ್ಲಿ ಭಾರತವನ್ನು 125 ರನ್ಗಳಿಂದ ಸೋಲಿಸಿ ಪ್ರಶಸ್ತಿ ಗೆಲ್ಲುವ ಕನಸನ್ನು ಭಗ್ನಗೊಳಿಸಿತ್ತು.
ವಿಶ್ವಕಪ್ ಸೋತ ನಂತರ ಭಾವನಾತ್ಮಕವಾಗಿ ಕುಸಿದ ಶಮಿ-ಜಡೇಜಾ :
ವಿಶ್ವಕಪ್ ಫೈನಲ್ ಸೋಲಿನ ನಂತರ ಟೀಂ ಇಂಡಿಯಾ ಆಟಗಾರರು ಎದೆಗುಂದಿದ್ದರು. ಈ ಮಧ್ಯೆ, ಟೀಮ್ ಇಂಡಿಯಾ ಆಟಗಾರರನ್ನು ಭೇಟಿ ಮಾಡಲು ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಬಂದಿರುವುದು ವಿಶೇಷವಾಗಿತ್ತು. ಭಾರತದ ಸೋಲಿನ ನಂತರ ಟೀಂ ಇಂಡಿಯಾ ಆಟಗಾರರು ಭಾವುಕರಾಗಿರುವುದು ಪ್ರಧಾನಿಗೆ ಕಂಡುಬಂತು. ಈ ವೇಳೆ ಸೋಲಿನಿಂದ ಹತಾಶೆಗೊಂಡಿರುವ ಮೊಹಮ್ಮದ್ ಶಮಿಯನ್ನು ಪ್ರಧಾನಿ ಮೋದಿ ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ : IND vs AUS: ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸಿಸ್ ಆಟಗಾರ.. ಇದೇನಾ ಸಂಸ್ಕೃತಿ ಎಂದು ನೆಟ್ಟಿಗರ ತರಾಟೆ!?
ಫೋಟೋ ಹಂಚಿಕೊಂಡ ಮೊಹಮ್ಮದ್ ಶಮಿ :
ವಿಶೇಷವಾಗಿ ಡ್ರೆಸ್ಸಿಂಗ್ ರೂಮ್ಗೆ ಬಂದು ನಮ್ಮನ್ನು ಹುರಿದುಂಬಿಸಿದ್ದಕ್ಕಾಗಿ ಧನ್ಯವಾದಗಳು, ನಾವು ಮತ್ತೆ ಪುಟಿದೇಳುತ್ತೇವೆ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ. ಪ್ರಧಾನಿ ಭೇಟಿಯ ಫೋಟೋವನ್ನು ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Unfortunately yesterday was not our day. I would like to thank all Indians for supporting our team and me throughout the tournament. Thankful to PM @narendramodi for specially coming to the dressing room and raising our spirits. We will bounce back! pic.twitter.com/Aev27mzni5
— 𝕸𝖔𝖍𝖆𝖒𝖒𝖆𝖉 𝖘𝖍𝖆𝖒𝖎 (@MdShami11) November 20, 2023
ಇದನ್ನೂ ಓದಿ : ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಈ 3 ಸ್ಟಾರ್ ಆಟಗಾರರ ವೃತ್ತಿಜೀವನ ಕೂಡ ಅಂತ್ಯ!?
We had a great tournament but we ended up short yesterday. We are all heartbroken but the support of our people is keeping us going. PM @narendramodi’s visit to the dressing room yesterday was special and very motivating. pic.twitter.com/q0la2X5wfU
— Ravindrasinh jadeja (@imjadeja) November 20, 2023
'ಇಡೀ ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡಿದ್ದೆವು. ಆದರೆ ನಿನ್ನೆ ಸ್ವಲ್ಪ ಹಿಂದೆ ಬಿದ್ದೆವು. ಸೋಲಿನಿಂದ ನಾವು ನಿರಾಸೆಗೊಂಡಿದ್ದೆವು. ಆದರೆ ಜನ ನೀಡುತ್ತಿರುವ ಬೆಂಬಲ ನಮ್ಮನ್ನು ಮುನ್ನಡೆಯಲು ಪ್ರೇರೇಪಿಸುತ್ತದೆ. ಅಲ್ಲದೆ ಡ್ರೆಸ್ಸಿಂಗ್ ರೂಂಗೆ ಪ್ರಧಾನಿ ಮೋದಿ ಆಗಮನ ವಿಶೇಷವಾಗಿತ್ತು ಮಾತ್ರವಲ್ಲ ಸ್ಪೂರ್ತಿದಾಯಕವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.