IND vs AUS: ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸಿಸ್‌ ಆಟಗಾರ..‌ ಇದೇನಾ ಸಂಸ್ಕೃತಿ ಎಂದು ನೆಟ್ಟಿಗರ ತರಾಟೆ!?

Mitchell Marsh: ಆಸ್ಟ್ರೇಲಿಯ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದು 6ನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು.. ಹೀಗಿರುವಾಗಲೇ ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಪೋಟೋಗೆ ಪೋಸ್ ನೀಡಿದ್ದಾರೆ.. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ..

Written by - Savita M B | Last Updated : Nov 20, 2023, 12:41 PM IST
  • ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು.
  • ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು.
  • ಫೈನಲ್ ತಲುಪಿದ್ದ ಆಸ್ಟ್ರೇಲಿಯಾ 6ನೇ ಬಾರಿ ಟ್ರೋಫಿ ಗೆದ್ದುಕೊಂಡಿದೆ.
IND vs AUS: ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸಿಸ್‌ ಆಟಗಾರ..‌ ಇದೇನಾ ಸಂಸ್ಕೃತಿ ಎಂದು ನೆಟ್ಟಿಗರ ತರಾಟೆ!? title=

world cup final 2023: ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು.. ಇದರಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 240 ರನ್ ಮಾತ್ರ ಗಳಿಸಿತು. ಇದರಲ್ಲಿ ಕೆಎಲ್ ರಾಹುಲ್ 66 ರನ್, ವಿರಾಟ್ ಕೊಹ್ಲಿ 54 ರನ್ ಮತ್ತು ರೋಹಿತ್ ಶರ್ಮಾ 47 ರನ್ ಗಳಿಸಿದರು.

ನಂತರ ಸರಳ ಗುರಿ ಬೆನ್ನಟ್ಟಿದ ಡೇವಿಡ್ ವಾರ್ನರ್ 7 ರನ್ ಗಳಿಸಿ ಔಟಾಗುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿದರು. ಮಿಚೆಲ್ ಮಾರ್ಷ್ 15 ರನ್ ಹಾಗೂ ಸ್ಟೀವ್ ಸ್ಮಿತ್ 4 ರನ್ ಗಳಿಸಿ ಔಟಾದರು. ಅದರ ನಂತರ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಇಬ್ಬರೂ ತಮ್ಮ ಹಿಡಿತವನ್ನು ಉಳಿಸಿಕೊಂಡರು.. ಅಂತಿಮವಾಗಿ ಟ್ರಾವಿಸ್ ಹೆಡ್ ಶತಕ ಬಾರಿಸಿ.. ಆಟವನ್ನು ಮುಂದುವರಿಸಿದರು ಮತ್ತು 120 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ 137 ರನ್ ಗಳಿಸಿದ ನಂತರ ಔಟಾದರು.

ಇದನ್ನೂ ಓದಿ-ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಈ 3 ಸ್ಟಾರ್‌ ಆಟಗಾರರ ವೃತ್ತಿಜೀವನ ಕೂಡ ಅಂತ್ಯ!?

ಮಾರ್ನಸ್ ಲ್ಯಾಬುಸ್ಚಾಗ್ನೆ 58 ರನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 2 ರನ್ ಗಳಿಸಿ ಗೆಲುವಿಗೆ ಕಾರಣರಾದರು. ಅಂತಿಮವಾಗಿ ಆಸ್ಟ್ರೇಲಿಯಾ 43 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿ 6 ವಿಕೆಟ್ ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 6ನೇ ಬಾರಿ ಚಾಂಪಿಯನ್ ಆಯಿತು. ಇದಕ್ಕೂ ಮೊದಲು 1987, 1999, 2003, 2007 ಮತ್ತು 2015ರಲ್ಲಿ ವಿಶ್ವಕಪ್ ಟ್ರೋಫಿ ಗೆದ್ದಿತ್ತು. 1975 ರಿಂದ 2023 ರ ನಡುವೆ 8 ಬಾರಿ ಫೈನಲ್ ತಲುಪಿದ್ದ ಆಸ್ಟ್ರೇಲಿಯಾ 6ನೇ ಬಾರಿ ಟ್ರೋಫಿ ಗೆದ್ದುಕೊಂಡಿದೆ. 

ಇದನ್ನೂ ಓದಿ-ICC World Cup 2023: ಆ ವಿಷಯದಲ್ಲಿ ಮಹಿಗೆ ಸರಿಸಾಟಿ ಯಾರೂ ಇಲ್ಲ...!

ಇನ್ನು 2003ರ ನಂತರ ಭಾರತ ವಿಶ್ವಕಪ್‌ ಫೈನಲ್‌ನಲ್ಲಿ ಸೋತಿದ್ದು ಇದು ಎರಡನೇ ಬಾರಿ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯದ ಉಪಪ್ರಧಾನಿ ಜಂಟಿಯಾಗಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಟ್ರೋಫಿಯನ್ನು ನೀಡಿದರು. ಆ ಬಳಿಕ ಆಸ್ಟ್ರೇಲಿಯ ಆಟಗಾರರು ಸರದಿಯಂತೆ ಚಾಂಪಿಯನ್ ಗಳ ಫೋಟೋಗೆ ಪೋಸ್ ನೀಡಿದರು. 

ಹೀಗಿರುವಾಗಲೇ ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಪೋಸ್ ನೀಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು " ಟ್ರೋಫಿಯನ್ನು ಹೇಗೆ ಗೌರವಿಸಬೇಕೆಂದು ತಿಳಿದಿಲ್ಲದ ತಂಡಕ್ಕೆ ಟ್ರೋಫಿ..! ಅದು ನಮಗೆ ಸಿಕ್ಕಿದ್ದರೆ ನಿಧಿಯಹಾಗೇ ನೋಡುತ್ತಿದ್ದೆವು" ಎಂದು ಆಕ್ರೋಶ ಹೊರಹಾಕಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News