Leelavati husband Mahalinga Bhagavatar : ಕನ್ನಡದ ಹಿರಿಯ ನಟಿ ಲೀಲಾವತಿ ಸದ್ಯ ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಲೀಲಾವತಿ ಅವರ ಮದುವೆ ಬಗ್ಗೆ ಸಾಕಷ್ಟು ವದಂತಿಗಳಿವೆ. ಅವರ ಪತಿ ಯಾರೆಂದು ಅನೇಕರಿಗೆ ತಿಳಿಯದ ಸಂಗತಿ. ನಟಿ ಲೀಲಾವತಿ ಅವರ ನಿಜವಾದ ಗಂಡ ಯಾರು, ಪುತ್ರ ವಿನೋದ್ ರಾಜ್ ಅವರ ತಂದೆ ಯಾರು ಎಂಬುದು ಅನೇಕರ ತಲೆಯಲ್ಲಿರುವ ಪ್ರಶ್ನೆ.
ಈ ಫೋಟೋದಲ್ಲಿ ನಟಿ ಲೀಲಾವತಿಯವರ ಪಕ್ಕದಲ್ಲಿರುವ ವ್ಯಕ್ತಿಯೇ ಅವರ ಪತಿ ಮಹಾಲಿಂಗ ಭಾಗವತರ್. ಮಹಾಲಿಂಗ ಭಾಗವತರ್ ಸಹ ಒಬ್ಬ ನಟ. ಮಹಾಲಿಂಗ ಭಾಗವತರ್ ಒಂದು ನಾಟಕದ ಕಂಪನಿ ನಡೆಸುತ್ತಿದ್ದರು. ನಟಿ ಲೀಲಾವತಿಯವರನ್ನು ಗುರುತಿಸಿ ರಂಗಭೂಮಿಗೆ ಕರೆ ತಂದವರು ಇವರೇ. ನಾಟಕ ಕಂಪನಿ ನಷ್ಟದಿಂದ ಮುಚ್ಚಿದಾಗ ಲೀಲಾವತಿಯವರೊಡನೆ ಸುಬ್ಬಯ್ಯ ನಾಯ್ಡು ರವರ ನಾಟಕ ಮಂಡಳಿಗೆ ಮಹಾಲಿಂಗ ಭಾಗವತರ್ ಕೂಡ ಸೇರಿದರು.
ಇದನ್ನೂ ಓದಿ : ಟೀಸರ್ ಮೂಲಕ ಕೌತುಕದ ಕಿಡಿ ಹೊತ್ತಿಸಿದ ʻಕೆಂಡʼ
ಹಿರಿಯ ನಟಿ ಲೀಲಾವತಿಯವರ ಪತಿ ಮಹಾಲಿಂಗ ಭಾಗವತರ್ ಎಂದು ಅನೇಕರು ಹೇಳುತ್ತಾರೆ. ಈ ಹಿಂದೆ ಒಂದು ಸಂದರ್ಶನದಲ್ಲಿ ಲೀಲಾವತಿ ಅವರ ಕಾಲದ ನಟ ಡಿಂಗ್ರಿ ನಾಗರಾಜ್ ಈ ಬಗ್ಗೆ ಮಾತನಾಡಿದ್ದರು. ಅವರು ಸಹ ಲೀಲಾವತಿ ಅವರ ಪತಿ ಮಹಾಲಿಂಗ ಭಾಗವತರ್ ಎಂದೇ ಹೇಳಿದ್ದರು.
ಸುಬ್ಬಯ್ಯ ನಾಯ್ಡು ನಾಟಕ ಕಂಪನಿ ಬಳಿಕ ನಟಿ ಲೀಲಾವತಿ ಅವರೊಂದಿ ನಟಿಸುವ ಹಂಬಲದಿಂದ ಮೈಸೂರಿನಿಂದ ಮದ್ರಾಸಿನ ಕಡೆಗೆ ಮಹಾಲಿಂಗ ಭಾಗವತರ್ ಪಯಣ ಬೆಳೆಸಿದ್ದರು. ಲೀಲಾವತಿಯವರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸಲು ಮಹಾಲಿಂಗ ಭಾಗವತರ್ ಶ್ರಮಿಸಿದ್ದರು ಎಂದು ಸಹ ಅನೇಕರು ಹೇಳುತ್ತಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ನ ಈ ಗಂಡ ಹೆಂಡತಿಯರ ನಡುವಿರುವ ವಯಸ್ಸಿನ ಅಂತರ ಗೊತ್ತೇ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.