ಬೆಂಗಳೂರು: "ಹಿರಿಯ ನಟಿ ಲೀಲಾವತಿ ಅವರು ಕಟ್ಟಿಸಿದ ಪಶುವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ್ದು ನನ್ನ ಮನಸ್ಸಿಗೆ ನೆಮ್ಮದಿ ಕೊಟ್ಟ ಕೆಲಸ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮತ್ತು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆಗೆ ಅವರು ಶನಿವಾರ ಮಾತನಾಡಿದರು.
"ಕೊನೆಯ ಬಾರಿಗೆ ನನ್ನ ಮನೆಯ ಬಳಿ ಬಂದು ಸ್ವತಃ ಲೀಲಾವತಿ ಅವರೇ ಆಸ್ಪತ್ರೆ ಉದ್ಘಾಟನೆಗೆ ಆಹ್ವಾನ ಪತ್ರಿಕೆ ನೀಡಿದ್ದರು. ಆ ವೇಳೆ ಎಲ್ಲರನ್ನು ಗುರುತು ಹಿಡಿಯುತ್ತಿದ್ದರು, ಕೊಂಚ ಪ್ರಜ್ಞೆಯಿತ್ತು. ನೀವು ಬಂದು ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ ಮಾಡಬೇಕು ಎಂಬುದು ನನ್ನ ಜೀವನದ ಕೊನೆಯ ಆಸೆ. ನೀವು ಉದ್ಘಾಟನೆಗೆ ಬರಬೇಕು ಎಂದು ಮನವಿ ಮಾಡಿಕೊಂಡಿದ್ದರು. "ನನ್ನ ಸಾಕಷ್ಟು ಕೆಲಸಗಳ ಒತ್ತಡದ ನಡುವೆಯೂ ಆಸ್ಪತ್ರೆ ಉದ್ಘಾಟನೆ ಮಾಡಿದ್ದೆ. ಯಾರೂ ಕೇಳದೆ ಇದ್ದರೂ ಅವರಾಗಿಯೇ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಿಸಿದ್ದರು. ಇದು ಅವರ ಹೃದಯ ವೈಶಾಲ್ಯತೆಗೆ ಒಂದು ಸಾಕ್ಷಿ" ಎಂದು ಶಿವಕುಮಾರ್ ಬಣ್ಣಿಸಿದರು.
ಇದನ್ನೂ ಓದಿ: ಕಾಮಿಡಿ ಅಂದ್ರೆ ಲೀಲಾವತಿಗೆ ಅಚ್ಚುಮೆಚ್ಚು: ಆದ್ರೇ ನಟಿಗೆ ಸಿಕ್ಕಿದೆಲ್ಲಾ ಕಣ್ಣೀರಿನ ರೋಲ್!
"ನನ್ನ ಮತ್ತು ಲೀಲಾವತಿ ಅವರ ಪರಿಚಯ 40 ವರ್ಷಗಳಷ್ಟು ಹಳೆಯದು. ದುಡ್ಡಿರುವ ಮನುಷ್ಯ ದಾನ- ಧರ್ಮ ಮಾಡಬಹುದು, ಆದರೆ ಆರ್ಥಿಕವಾಗಿ ಶಕ್ತಿ ಇಲ್ಲದ ಅವರು ಸಮಾಜಕ್ಕೆ ಮತ್ತು ಮೂಕ ಪ್ರಾಣಿಗಳಿಗೆ ಸಹಾಯ ಮಾಡಬೇಕೆಂದು ಪ್ರಾಥಮಿಕ ಆಸ್ಪತ್ರೆ ಮತ್ತು ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಿಸಿದ್ದು ದೊಡ್ಡ ವಿಷಯ. ಈ ಮೂಲಕ ಅವರು ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿ, ಅವರ ಪುತ್ರರಾದ ಶ್ರೀ ವಿನೋದ್ ರಾಜ್'ರವರು ಸೇರಿದಂತೆ ಅವರ ಕುಟುಂಬವರ್ಗಕ್ಕೆ ಸಾಂತ್ವನ ತಿಳಿಸಿದೆ. ಲೀಲಾವತಿಯವರ ಕಲಾಸೇವೆ ಹಾಗೂ ಸಾಮಾಜಿಕ ಕಳಕಳಿ ನಮ್ಮೆಲ್ಲರಿಗೂ ಮಾದರಿಯಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು… pic.twitter.com/B30lXPZRw5
— DK Shivakumar (@DKShivakumar) December 9, 2023
ಸರ್ಕಾರಿ ಗೌರವಗಳೊಂದಿಗೆ ಲೀಲಾವತಿಯವರ ಅಂತ್ಯಕ್ರಿಯೆ
"ಎಲ್ಲವೂ ಭಗವಂತನ ಲೀಲೆ. ಮನುಷ್ಯ ಹುಟ್ಟಿದ ಮೇಲೆ ಸಾವನ್ನಪ್ಪಲೇಬೇಕು. ಹುಟ್ಟು-ಸಾವಿನ ನಡುವೆ ಸಾಧನೆ ಮಾಡಬೇಕು. ಹಿರಿಯರಾದ ಲೀಲಾವತಿಯವರ ಸಾಧನೆ ಮತ್ತು ಸಾರ್ಥಕ ಜೀವನ ನಮಗೆಲ್ಲ ಆದರ್ಶ. ರಾಜ್ಯ ಸರ್ಕಾರವು ಸಕಲ ಸರ್ಕಾರಿ ಗೌರವದಿಂದ ಲೀಲಾವತಿ ಅಮ್ಮನವರನ್ನು ಕಳಿಸಿಕೊಡುವ ಕೆಲಸ ಮಾಡುತ್ತದೆ. ಸಕಲ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯನವರು ಸೂಚನೆ ನೀಡಿದ್ದಾರೆ" ಎಂದರು.
ಇದನ್ನೂ ಓದಿ: ಲೀಲಮ್ಮನ ಅಂತಿಮ ದರ್ಶನಕ್ಕೆ ಚೆನೈನಿಂದ ಬಂದ ಮೊಮ್ಮಗ...!
ಲೀಲಾವತಿ ಅವರ ಹೆಸರಿನಲ್ಲಿ ಕಲಾಸೇವೆ, ಸಮಾಜಮುಖಿ ಕೆಲಸಗಳು ಉಳಿಸುವಂತಹ ಕೆಲಸವನ್ನು ಸರ್ಕಾರದಿಂದ ಮಾಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ ಡಿಕೆಶಿ, ʼಸರ್ಕಾರ ಎಂದರೆ ನಾನೊಬ್ಬನೆ ಅಲ್ಲ. ಈ ಬಗ್ಗೆ ಲೀಲಾವತಿ ಅವರ ಪಾರ್ಥಿವ ಶರೀರದ ಎಲ್ಲಾ ಅಂತಿಮ ಕಾರ್ಯಗಳು ಮುಗಿದ ನಂತರ, ಪ್ರಮುಖರ ಬಳಿ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ" ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ