ಬೆಂಗಳೂರು: ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿಂದ ಅನ್ನದಾತ ಕಂಗಾಲಾಗಿದ್ದಾನೆ. ಸಂಕಷ್ಟ ಆಲಿಸಬೇಕಾದ ಸರ್ಕಾರವೇ ರೈತನ ಬೆನ್ನುಮೂಳೆ ಮುರಿಯುತ್ತಿದೆ. ಲಜ್ಜೆ ಬಿಟ್ಟ #ATMSarkara..!ವೆಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಬಿಜೆಪಿ, ʼರಾಜ್ಯದಲ್ಲಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ರೈತರನ್ನು ಬೀದಿಗೆ ತಂದು ನಿಲ್ಲಿಸಲು ಮಾಡುತ್ತಿರುವ ಪ್ರಯತ್ನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬರ ಪರಿಹಾರ ಕೊಡದೆ ಇರುವುದು, ಐಪಿ ಸೆಟ್ ಹೊರೆಯನ್ನು ಹಾಕುವುದು, ಪಿಎಂ ಕಿಸಾನ್ ಯೋಜನೆ ನಿಲ್ಲಿಸುವುದು, ಪಂಪ್ಸೆಟ್ಗಳಿಗೆ ವಿದ್ಯುತ್ ತೆಗೆಯುವುದು, ಬೆಳೆ ಬೆಳೆಯ ಬೇಡಿ ಎಂದು ನಿರ್ಬಂಧ ಹೇರುವುದು ಮತ್ತು ಪ್ರತಿಭಟನೆಗೆ ಇಳಿದಾಗ ದಬ್ಬಾಳಿಕೆ ನಡೆಸುವುದು ಇವೇ ರೈತರನ್ನು ಬೀದಿಗೆ ತಂದು ನಿಲ್ಲಿಸಲು ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಪ್ರಯತ್ನಗಳು ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದಲ್ಲಿ ರೈತ ವಿರೋಧಿ @INCKarnataka ಸರ್ಕಾರ ರೈತರನ್ನು ಬೀದಿಗೆ ತಂದು ನಿಲ್ಲಿಸಲು ಮಾಡುತ್ತಿರುವ ಪ್ರಯತ್ನಗಳ ಪಟ್ಟಿ:
▪️ಬರ ಪರಿಹಾರ ಕೊಡದೆ ಇರುವುದು.
▪️ಐಪಿ ಸೆಟ್ ಹೊರೆಯನ್ನು ಹಾಕುವುದು.
▪️ಪಿಎಂ ಕಿಸಾನ್ ಯೋಜನೆ ನಿಲ್ಲಿಸುವುದು.
▪️ಪಂಪ್ಸೆಟ್ಗಳಿಗೆ ವಿದ್ಯುತ್ ತೆಗೆಯುವುದು.
▪️ಬೆಳೆ ಬೆಳೆಯ ಬೇಡಿ ಎಂದು ನಿರ್ಬಂಧ ಹೇರುವುದು.…— BJP Karnataka (@BJP4Karnataka) December 9, 2023
ಹಣ ಸಂಗ್ರಹಿಸುವುದೇ ಕಾಂಗ್ರೆಸ್ಸಿಗರ ಏಕೈಕ ಗುರಿ!
ʼಕರ್ನಾಟಕದ ಲೂಟಿಯ ಮಾಡೆಲ್ನ್ನು ಕಾಂಗ್ರೆಸ್ ದೇಶದಾದ್ಯಂತ ವಿಸ್ತರಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗುತ್ತಿಗೆದಾರರ ಮಂಚದ ಅಡಿ ಸಿಕ್ಕಂತೆಯೇ ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯರ ಮನೆಯಲ್ಲಿ ₹200 ಕೋಟಿ ಅಕ್ರಮ ಹಣ ಪತ್ತೆಯಾಗಿದೆ! ಭ್ರಷ್ಟಾಚಾರದ ನವ ಇತಿಹಾಸ ಬರೆಯುತ್ತಿರುವ ಕಾಂಗ್ರೆಸ್ ಶಾಸಕರ ಮನೆಯಲ್ಲಿ ಹುಡುಕಿದರೆ ಅದಕ್ಕಿಂತಲೂ ಹೆಚ್ಚು ಹಣ ಸಿಗಬಹುದು. ಜನರನ್ನು ವಂಚಿಸಿ ತಮ್ಮ ಕಪಾಟು-ಮಂಚಗಳಲ್ಲಿ ಹಣ ಸಂಗ್ರಹಿಸುವುದೇ ಕಾಂಗ್ರೆಸ್ಸಿಗರ ಏಕೈಕ ಗುರಿಯಾಗಿದೆ. ಕರ್ನಾಟಕವೂ ಇಂಥ ಭ್ರಷ್ಟರ ಪಾಲಾಗಿರುವುದು ಸಮಸ್ತ ಕನ್ನಡಿಗರ ಪಾಲಿನ ಸಾರ್ವಕಾಲಿಕ ದುರಾದೃಷ್ಟʼವೆಂದು ಬಿಜೆಪಿ ಕುಟುಕಿದೆ.
ಕರ್ನಾಟಕದ ಲೂಟಿಯ ಮಾಡೆಲ್ನ್ನು ಕಾಂಗ್ರೆಸ್ ದೇಶಾದ್ಯಂತ ವಿಸ್ತರಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗುತ್ತಿಗೆದಾರರ ಮಂಚದ ಅಡಿ ಸಿಕ್ಕಂತೆಯೇ ಜಾರ್ಖಂಡ್ನ ಕಾಂಗ್ರೆಸ್ ರಾಜ್ಯಸಭಾ ಸದಸ್ಯರ ಮನೆಯಲ್ಲಿ ₹200 ಕೋಟಿ ಅಕ್ರಮ ಹಣ ಪತ್ತೆಯಾಗಿದೆ!
ಭ್ರಷ್ಟಾಚಾರದ ನವ ಇತಿಹಾಸ ಬರೆಯುತ್ತಿರುವ @INCKarnataka ಶಾಸಕರ ಮನೆಯಲ್ಲಿ ಹುಡುಕಿದರೆ… pic.twitter.com/HDxdij5L0K
— BJP Karnataka (@BJP4Karnataka) December 9, 2023
ಇದನ್ನೂ ಓದಿ: ಹಿರಿಯ ನಟಿ ಲೀಲಾವತಿಯವರ ನಿಧನಕ್ಕೆ ನಟಿ ಮಹಾಲಕ್ಷ್ಮಿ ಸಂತಾಪ
ಕಾಂಗ್ರೆಸ್ಸಿಗೆ ಚಿಂತೆಯೇ ಇಲ್ಲ!
ಬರ ನಿರ್ವಹಣೆ ವೈಫಲ್ಯ ಮತ್ತು ಸ್ಟಾಲಿನ್ ಪ್ರೇಮಕ್ಕಾಗಿ ಕಾವೇರಿ ನೀರು ಹರಿಬಿಟ್ಟ ಕಾಂಗ್ರೆಸ್ ಸರ್ಕಾರದ ಕರ್ಮ ಫಲವನ್ನು ಬೆಂಗಳೂರಿನ ಜನತೆ ಈಗ ಉಣ್ಣಬೇಕಾಗಿದೆ.
ಬೆಂಗಳೂರಿಗೆ ಕುಡಿಯುವ ನೀರನ್ನೇ ಒದಗಿಸಲು ಹರ ಸಾಹಸ ಪಡುತ್ತಿರುವ @INCKarnataka ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಹಣ ಬಿಡುಗಡೆ ಮಾಡಿ ಭರ್ಜರಿಯಾಗಿ ಸ್ವತಃ ತಾನೇ ತಿನ್ನುತ್ತಿದೆ.… pic.twitter.com/5dFPlkhJ7g
— BJP Karnataka (@BJP4Karnataka) December 9, 2023
ʼಬರ ನಿರ್ವಹಣೆ ವೈಫಲ್ಯ ಮತ್ತು ಎಂ.ಕೆ.ಸ್ಟಾಲಿನ್ ಪ್ರೇಮಕ್ಕಾಗಿ ಕಾವೇರಿ ನೀರು ಹರಿಬಿಟ್ಟ ಕಾಂಗ್ರೆಸ್ ಸರ್ಕಾರದ ಕರ್ಮ ಫಲವನ್ನು ಬೆಂಗಳೂರಿನ ಜನತೆ ಈಗ ಉಣ್ಣಬೇಕಾಗಿದೆ. ಬೆಂಗಳೂರಿಗೆ ಕುಡಿಯುವ ನೀರನ್ನೇ ಒದಗಿಸಲು ಹರ ಸಾಹಸ ಪಡುತ್ತಿರುವ
ಕಾಂಗ್ರೆಸ್ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಹಣ ಬಿಡುಗಡೆ ಮಾಡಿ ಭರ್ಜರಿಯಾಗಿ ಸ್ವತಃ ತಾನೇ ತಿನ್ನುತ್ತಿದೆ. ಬೆಂಗಳೂರಿಗೆ ನೀರೇ ಇಲ್ಲದಿದ್ದರೂ ಕಾಂಗ್ರೆಸ್ಸಿಗೆ ಚಿಂತೆಯೇ ಇಲ್ಲ, ಏಕೆಂದರೆ ಎಲ್ಲಾ ಚುನಾವಣಾ ಖರ್ಚುಗಳನ್ನೂ ಬೆಂಗಳೂರೇ ನೋಡಿಕೊಳ್ಳುತ್ತಿದೆಯಲ್ಲಾ!ʼ ಎಂದು ಬಿಜೆಪಿ ವ್ಯಂಗ್ಯವಾಡುತ್ತಿದೆ.
ಕೆ.ಜೆ.ಜಾರ್ಜ್ ವಿರುದ್ಧ ಬಿಜೆಪಿ ಕಿಡಿ!
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ಇಲ್ಲವೆಂದು ಹೇಳಿಕೆ ನೀಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ʼರಾಜ್ಯದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ, ರಾಜ್ಯದಲ್ಲಿ ಎಲೆಕ್ಟ್ರಿಕಲ್ ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತಿರುವುದೇ ತಿಳಿದಿಲ್ಲವಂತೆ..! ಸ್ವಾಮಿ ಕೆ.ಜೆ.ಜಾರ್ಜ್ ಅವರೇ, ನೀವು ಕರ್ನಾಟಕದ ಇಂಧನ ಸಚಿವರು ಎಂಬುದಾದರೂ ನಿಮಗೆ ತಿಳಿದಿದೆಯೇ..?? ಬಹುಶಃ ನೀವು ತೆಲಂಗಾಣಕ್ಕೆ ಹೋದಾಗ ಅಲ್ಲಿ ಸೂಟ್ ಕೇಸ್ ಮಾತ್ರ ಬಿಟ್ಟು ಬಂದಿಲ್ಲ, ನಿಮ್ಮ ನೆನಪಿನ ಶಕ್ತಿಯನ್ನು ಅಲ್ಲಿಯೇ ಬಿಟ್ಟು ಬಂದಿದ್ದೀರಿ ಅನಿಸುತ್ತದೆ!ʼ ಎಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಪರಿಪೂರ್ಣ ಕಲಾವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ