ಸಲಾರ್ BGM: ಥಿಯೇಟರ್‌ನಲ್ಲಿ ಮ್ಯೂಸಿಕ್‌ ಕೇಳಿ ಬೆಚ್ಚಿಬಿದ್ರಾ ಪ್ರೇಕ್ಷಕರು?

Salaar Music: ತೆಲುಗು ಸ್ಟಾರ್‌ ನಟ ಪ್ರಭಾಸ್‌ ಹಾಗೂ ಚಂದನವನದ ಡೈರೆಕ್ಟರ್ ಪ್ರಶಾಂತ್‌ ನೀಲ್‌ ಕಾಂಬೋದ ಸಲಾರ್‌ ಚಿತ್ರ ಇಂದು ರಿಲೀಸ್‌ ಆಗಿದ್ದು, ಚಿತ್ರದ ಬಿಜಿಎಂ ಕೇಳಿ ಪ್ರೇಕ್ಷಕರು ಸಿನಿಮಾದ ಸಂಗೀತಾ ಸಂಯೋಜಕ ರವಿ ಬಸ್ಸೂರ್‌ರವರನ್ನು ಕೊಂಡಾಡಿದ್ದಾರೆ.

Written by - Zee Kannada News Desk | Last Updated : Dec 22, 2023, 11:47 AM IST
  • ಬಿಗ್ ಬಜೆಟ್​ ​ಸಲಾರ್ ಸಿನಿಮಾ ಇಂದು ತೆರೆಕಂಡಿದ್ದು,ಈ ಚಿತ್ರವನ್ನು ಕೆಜಿಎಫ್ ಸಿನಿಮಾ ಎಂಬಂತೆ ಕಂಡ ಪ್ರಶಾಂತ್ ನೀಲ್​ ಫ್ಯಾನ್ಸ್‌ ಬೆಳ್ಳಿ ತೆರೆ ಮೇಲೆ ವೈಲೆನ್ಸ್​ ಸಿಟಿಯನ್ನು ಕಣ್ತುಂಬಿಕೊಂಡಿದ್ದಾರೆ.
  • ಸಲಾರ್‌ ಹಾಡುಗಳನ್ನು ಕೇಳಿದ ಜನರು ಮೆಚ್ಚಿಕೊಂಡು, ಇದೀಗ ಥಿಯೇಟರ್​ನಲ್ಲಿ ಸಲಾರ್ ಸಿನಿಮಾ ಬಿಜಿಎಂ ನೋಡಗರನ್ನು ಬೆಚ್ಚಿಬೀಳಿಸುತ್ತಿದೆ.
  • ಸಲಾರ್ ಸಿನಿಮಾದ ಆಕಾಶ ಗಡಿಯದಾಟಿ ತಂದಾನೋ ಬೆಳಕ ಕೋಟಿ ಹಾಗೂ ಎರಡನೇ ಹಾಡು ಪ್ರತಿಕಥೆಯ ರಾಕ್ಷಸನು ಹಾಡು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್​ ಆಗಿದೆ.
ಸಲಾರ್ BGM: ಥಿಯೇಟರ್‌ನಲ್ಲಿ ಮ್ಯೂಸಿಕ್‌ ಕೇಳಿ ಬೆಚ್ಚಿಬಿದ್ರಾ ಪ್ರೇಕ್ಷಕರು? title=

Salaar Music Review: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಹಾಗೂ ಸ್ಯಾಂಡಲ್‌ವುಡ್‌​ ಡೈರೆಕ್ಟರ್ ಪ್ರಶಾಂತ್ ನೀಲ್‌ ಬಿಗ್ ಬಜೆಟ್​ ​ಸಲಾರ್ ಸಿನಿಮಾ ಇಂದು ತೆರೆಕಂಡಿದ್ದು,ಈ ಚಿತ್ರವನ್ನು ಕೆಜಿಎಫ್ ಸಿನಿಮಾ ಎಂಬಂತೆ ಕಂಡ ಪ್ರಶಾಂತ್ ನೀಲ್​ ಫ್ಯಾನ್ಸ್‌ ಬೆಳ್ಳಿ ತೆರೆ ಮೇಲೆ ವೈಲೆನ್ಸ್​ ಸಿಟಿಯನ್ನು ಕಣ್ತುಂಬಿಕೊಂಡಿದ್ದಾರೆ. ಸಲಾರ್‌ನಲ್ಲಿ ಸ್ನೇಹ, ಪ್ರೀತಿ, ತ್ಯಾಗ, ವೈರತ್ವ  ಸಿಲ್ವರ್‌ ಸ್ರ್ರೀನ್‌ ಮೇಲೆ ತೆರೆಗಪ್ಪಳಿಸುವುದರ ಜೊತೆಗೆ ಕಥೆಯೊಂದಿಗಿರುವ ಮ್ಯೂಸಿಕ್ ಕೂಡ ಪ್ರೇಕ್ಷಕರ ಮನವನ್ನು ತಟ್ಟಿದೆ. 

ಹೌದು.. ಸಲಾರ್ ಸಿನಿಮಾಗೆ ಕೆಜಿಎಫ್​ ಮ್ಯೂಸಿಕ್​ ಡೈರೆಕ್ಟರ್ ರವಿ ಬಸ್ರೂರ್​ ಸಂಗೀತಾ ನೀಡಿದ್ದು, ಈ ಚಿತ್ರದಲ್ಲಿನ ಎರಡು ಹಾಡುಗಳನ್ನು ಸಿನಿತಂಡ ಈಗಾಗಲೇ ರಿಲೀಸ್ ಮಾಡಿದೆ. ಸಲಾರ್‌ ಹಾಡುಗಳನ್ನು ಕೇಳಿದ ಜನರು ಮೆಚ್ಚಿಕೊಂಡು, ಇದೀಗ ಥಿಯೇಟರ್​ನಲ್ಲಿ ಸಲಾರ್ ಸಿನಿಮಾ ಬಿಜಿಎಂ ನೋಡಗರನ್ನು ಬೆಚ್ಚಿಬೀಳಿಸುತ್ತಿದೆ. ಬಿಜಿಎಂ ಸೂಪರ್ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದು, ರವಿ ಬಸ್ರೂರ್​ ಕೆಲಸವನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: Salaar Review: ಬಹುನಿರೀಕ್ಷಿತ ಸಲಾರ್‌ ರಿಲೀಸ್‌.. ಗೂಸ್‌ ಬಂಪ್ಸ್‌ ಗ್ಯಾರೆಂಟಿ, ಕಂಪ್ಲೀಟ್ ಸಿನಿಮಾದ ವಿಮರ್ಶೆ ಇಲ್ಲಿದೆ..

ಸಲಾರ್ ಸಿನಿಮಾದ ಆಕಾಶ ಗಡಿಯದಾಟಿ ತಂದಾನೋ ಬೆಳಕ ಕೋಟಿ ಹಾಗೂ ಎರಡನೇ ಹಾಡು ಪ್ರತಿಕಥೆಯ ರಾಕ್ಷಸನು ಹಾಡು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್​ ಆಗಿದೆ. ಕನ್ನಡದಲ್ಲಿ ಪ್ರತಿಕಥೆಯ ರಾಕ್ಷಸ ಎಂದು ಹಾಡು ಶುರುವಾಗಲಿದ್ದು, ಸಂಗೀತಾ ನಿರ್ದೇಶಕ ರವಿ ಬಸ್ರೂರ್​ ಸಲಾರ್​ ಸಿನಿಮಾಗೆ ಮ್ಯೂಸಿಕ್ ನೀಡಿದ್ದಾರೆ. ವಿಚ್​ ಈಸ್​ ವೈಲೆಂಟ್ ಸಿಡಿ ಅಂತಾನೇ ಕ್ಯಾಪ್ಶನ್ ಕೊಟ್ಟು ರಿಲೀಸ್ ಮಾಡಿದ ಸಲಾರ್ ಸಿನಿಮಾದ ತುಂಬಾ ವೈಲೆನ್ಸ್ ಜೋರಾಗಿದೆ.

ಸಲಾರ್‌ ಅಂತಹ ಮಾಸ್ ಸಿನಿಮಾ ಇಷ್ಟಪಡುವವರಿಗೆ ಇದು ಅದ್ಬುತ ಲೋಕವನ್ನೇ ಕಣ್ಣ ಮುಂದೆ ತೆರೆದಿಡುತ್ತೆ. ಮಾಸ್​ ಮಹಾರಾಜ್ ಪ್ರಭಾಸ್​ ಅಬ್ಬರ ಅಭಿಮಾನಿಗಳ ಕಣ್ಣುಕುಕ್ಕುವಂತೆ ಮಾಡಿದ್ದು, ಮತ್ತೆ ‘ಛತ್ರಪತಿ’ ಅವತಾರದಲ್ಲಿ ಪ್ರಭಾಸ್ ಕಂಡು ಫ್ಯಾನ್ಸ್ ಖುಷ್ ಆಗಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್‌ನ ಸಲಾರ್ ಚಿತ್ರ ಕೂಡ ಸಿನಿಪ್ರಿಯರು ಮತ್ತೊಂದು ಕೆಜಿಎಫ್ ಸಿನಿಮಾ ಎಂಬಂತೆ ಕಂಡಿದ್ದು, ಚಿತ್ರದ ಹಾಡು, ಡಾರ್ಕ್​ ಸೀನ್‌ಗಳಯ ವೀಕ್ಷಕರಿಗೆ ಕೆಜಿಎಫ್ ಸಿನಿಮಾವನ್ನು ನೆನಪಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
+

Trending News