ಟಿ20 ವಿಶ್ವಕಪ್ ಗೆಲ್ಲಲು ಮಾಸ್ಟರ್ ಪ್ಲಾನ್: 12 ಸಾವಿರ ರನ್ ಗಳಿಸಿದ ಈ ದಿಗ್ಗಜನನ್ನು ಕೋಚ್ ಆಗಿ ನೇಮಿಸಿದ ಸಮಿತಿ

T20 World Cup 2024: ಮುಂದಿನ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ. ಹೀಗಾಗಿ ಇಂಗ್ಲೆಂಡ್ ತನ್ನ ಕೋಚಿಂಗ್ ಸ್ಟಾಫ್‌ನಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ ಪರಿಣತಿ ಹೊಂದಿರುವ ಟಿ20 ಸ್ಪೆಷಲಿಸ್ಟ್‌ ಪೊಲಾರ್ಡ್ ಅವರಿಗೆ ಸ್ಥಾನ ನೀಡಿದೆ.

Written by - Bhavishya Shetty | Last Updated : Dec 27, 2023, 03:35 PM IST
    • ವೆಸ್ಟ್ ಇಂಡೀಸ್‌ ಲೆಜೆಂಡರಿ ಆಲ್‌’ರೌಂಡರ್ ಕೀರಾನ್ ಪೊಲಾರ್ಡ್
    • ಇಂಗ್ಲೆಂಡ್‌’ನ ಸಹಾಯಕ ಕೋಚ್ ಆಗಿ ನೇಮಕ
    • 2012ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಪೊಲಾರ್ಡ್
ಟಿ20 ವಿಶ್ವಕಪ್ ಗೆಲ್ಲಲು ಮಾಸ್ಟರ್ ಪ್ಲಾನ್: 12 ಸಾವಿರ ರನ್ ಗಳಿಸಿದ ಈ ದಿಗ್ಗಜನನ್ನು ಕೋಚ್ ಆಗಿ ನೇಮಿಸಿದ ಸಮಿತಿ title=
T20 World Cup 2024

Kieran Pollard England Coach: ವೆಸ್ಟ್ ಇಂಡೀಸ್‌ ಲೆಜೆಂಡರಿ ಆಲ್‌’ರೌಂಡರ್ ಕೀರಾನ್ ಪೊಲಾರ್ಡ್ 2024ರ T20 ವಿಶ್ವಕಪ್‌’ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಸಹಾಯ ಮಾಡಲಿದ್ದಾರೆ. ಅಂದರೆ, ಈ ಟೂರ್ನಿಗೆ ಇಂಗ್ಲೆಂಡ್‌’ನ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ತನ್ನ ಉತ್ತರಾಧಿಕಾರಿಯ ಹೆಸರು ಘೋಷಿಸಿದ ಡೇವಿಡ್ ವಾರ್ನರ್… ಇನ್ಮುಂದೆ ಈತನೇ ಆಸೀಸ್ ತಂಡದ ಓಪನರ್!

ಮುಂದಿನ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ. ಹೀಗಾಗಿ ಇಂಗ್ಲೆಂಡ್ ತನ್ನ ಕೋಚಿಂಗ್ ಸ್ಟಾಫ್‌ನಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ ಪರಿಣತಿ ಹೊಂದಿರುವ ಟಿ20 ಸ್ಪೆಷಲಿಸ್ಟ್‌ ಪೊಲಾರ್ಡ್ ಅವರಿಗೆ ಸ್ಥಾನ ನೀಡಿದೆ.

ಪೊಲಾರ್ಡ್ 2012ರಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು. 2021ರ ಟಿ 20 ವಿಶ್ವಕಪ್‌’ನಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನೂ ಕೂಡ ವಹಿಸಿದ್ದಾರೆ. ವಿಂಡೀಸ್ ಪರ ಒಟ್ಟು 101 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಪೊಲಾರ್ಡ್, ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್‌’ನಿಂದ ನಿವೃತ್ತರಾಗಿದ್ದಾರೆ. ಆದರೆ ಇನ್ನೂ ಫ್ರಾಂಚೈಸಿ ಕ್ರಿಕೆಟ್‌’ನಲ್ಲಿ ಆಡುತ್ತಿದ್ದಾರೆ.

ಪೊಲಾರ್ಡ್ ಇತ್ತೀಚೆಗೆ ತಮ್ಮ ನಾಯಕತ್ವದಲ್ಲಿ ಅಬುಧಾಬಿ T10 ಲೀಗ್‌’ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ಚಾಂಪಿಯನ್ ಆಗಿದ್ದರು. ಇಂಟರ್ನ್ಯಾಷನಲ್ ಲೀಗ್ T20 ನಲ್ಲಿ ಮುಂಬೈ ಇಂಡಿಯನ್ಸ್ ಎಮಿರೇಟ್ಸ್ ನಾಯಕರಾಗಿದ್ದಾರೆ. ಇದರೊಂದಿಗೆ ಐಪಿಎಲ್‌’ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಕೂಡ ಆಗಿದ್ದಾರೆ

ಇದನ್ನೂ ಓದಿ:  ಒಂದೇ ಇನ್ನಿಂಗ್ಸ್’ನಲ್ಲಿ ಇಬ್ಬರು ನಾಯಕರ ದಾಖಲೆ ಮುರಿದ ಕೊಹ್ಲಿ: ಈ ವಿಭಾಗದಲ್ಲಿ ನಂ.1 ಪಟ್ಟಕ್ಕೇರಿದ ವಿರಾಟ್

T20 ವಿಶ್ವಕಪ್ 2024 ಯಾವಾಗ?

ಮುಂದಿನ ಟಿ20 ವಿಶ್ವಕಪ್ ಐಪಿಎಲ್ 2024ರ ನಂತರ ನಡೆಯಲಿದೆ. ಈ ಪಂದ್ಯಾವಳಿಯು ಜೂನ್ 4 ರಿಂದ 30ರ ನಡುವೆ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News