ಈ ರಾಜ್ಯದ ರೈತರಿಗೆ ಇಂದು ಸಿಗಲಿದೆ ದೊಡ್ಡ ಗಿಫ್ಟ್; 25,000 ರೂ.ವರೆಗೆ ಖಾತೆಗೆ ಜಮಾ ಆಗಲಿದೆ ಹಣ

ಒಂದು ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ 5,000 ರೂ. ಮತ್ತು 5 ಎಕರೆ ಭೂಮಿ ಹೊಂದಿರುವ ರೈತರಿಗೆ ಗರಿಷ್ಠ 25,000 ಸಾವಿರ ರೂಪಾಯಿಗಳನ್ನು ಎರಡು ಕಂತುಗಳಲ್ಲಿ ನೀಡಲಾಗುವುದು.

Last Updated : Aug 10, 2019, 10:38 AM IST
ಈ ರಾಜ್ಯದ ರೈತರಿಗೆ ಇಂದು ಸಿಗಲಿದೆ ದೊಡ್ಡ ಗಿಫ್ಟ್; 25,000 ರೂ.ವರೆಗೆ ಖಾತೆಗೆ ಜಮಾ ಆಗಲಿದೆ ಹಣ title=

ರಾಂಚಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ರಾಂಚಿ ಪ್ರವಾಸದಲ್ಲಿದ್ದಾರೆ. ಅವರು ಇಲ್ಲಿನ ರೈತರಿಗೆ ಇಂದು ದೊಡ್ಡ ಉಡುಗೊರೆಗಳನ್ನು ನೀಡಲಿದ್ದಾರೆ. ಮಾಹಿತಿಯ ಪ್ರಕಾರ, ಇಂದು ರಾಜ್ಯದ 13.60 ಲಕ್ಷ ರೈತರಿಗೆ ಮುಖ್ಯಮಂತ್ರಿ ಕೃಷಿ ಆಶಿರ್ವಾದ್ ಯೋಜನೆಯ ಲಾಭ ಸಿಗಲಿದೆ. 

ಮುಖ್ಯಮಂತ್ರಿ ಕೃಷಿ ಆಶಿರ್ವಾದ್ ಯೋಜನೆಯಡಿಯಲ್ಲಿ 442 ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗುವುದು. ಮುಖ್ಯಮಂತ್ರಿ ಕೃಷಿ ಆಶಿರ್ವಾದ್ ಯೋಜನೆ ಅಡಿಯಲ್ಲಿ ರೈತರಿಗೆ ಎಕರೆಗೆ ಐದು ಸಾವಿರ ರೂಪಾಯಿ ನೀಡಲಾಗುವುದು. ಈ ಯೋಜನೆಯಡಿ 35 ಲಕ್ಷ ರೈತರ ಖಾತೆಗೆ 3,000 ಕೋಟಿ ರೂ. ಹಣ ಜಮಾ ಆಗಲಿದೆ.

ಒಂದು ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ 5,000 ರೂ. ಮತ್ತು 5 ಎಕರೆ ಭೂಮಿ ಹೊಂದಿರುವ ರೈತರಿಗೆ ಗರಿಷ್ಠ 25,000 ಸಾವಿರ ರೂಪಾಯಿಗಳನ್ನು ಎರಡು ಕಂತುಗಳಲ್ಲಿ ನೀಡಲಾಗುವುದು ಎಂಬುದು ಸ್ಪಷ್ಟವಾಗಿದೆ. 

ಡಿಬಿಟಿ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್) ಮೂಲಕ ರೈತರ ಖಾತೆಗೆ 100% ಪಾವತಿ ಮಾಡುವ ಯೋಜನೆ ಜಾರಿಗೆ ತ್ನದಿರುವ ಮೊದಲ ರಾಜ್ಯ ಇದಾಗಿದೆ. ಕೃಷಿ ಇಲಾಖೆಯ ಮೌಲ್ಯಮಾಪನದ ಪ್ರಕಾರ, ರಾಜ್ಯದ ಶೇಕಡಾ 83 ರಷ್ಟು ರೈತರು 2 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿದ್ದಾರೆ. ಈ ಪೈಕಿ 65 ಪ್ರತಿಶತದಷ್ಟು ರೈತರ ಬಳಿ 1 ಎಕರೆಗಿಂತ ಕಡಿಮೆ ಭೂಮಿ ಮಾತ್ರ ಇದೆ.

ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ 2,250 ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. ಮುಖ್ಯಮಂತ್ರಿ ರಘುವರ್ ದಾಸ್ ಮಾತನಾಡಿ, "ಈ ಯೋಜನೆಯನ್ನು 2019-20ನೇ ಸಾಲಿನ ಬಜೆಟ್‌ನಲ್ಲಿ ಸೇರಿಸಲಾಗಿದೆ. ಪಿಎಂ ನರೇಂದ್ರ ಮೋದಿಯವರು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಈಡೇರಿಸಲು ಈ ಯೋಜನೆ ಬಹಳ ಸಹಾಯಕವಾಗುತ್ತದೆ. ರೈತರಿಗೆ ಬೀಜಗಳು, ರಸಗೊಬ್ಬರ ಮತ್ತು ಇತರ ಕೃಷಿ ಹೂಡಿಕೆಗಾಗಿ ನೀವು ಇತರರನ್ನು ಅಥವಾ ಬ್ಯಾಂಕನ್ನು ಅವಲಂಬಿಸಬೇಕಾಗಿಲ್ಲ. ಅವರು ಕೃಷಿಗಾಗಿ ಯಾರಿಂದಲೂ ಸಾಲ ತೆಗೆದುಕೊಳ್ಳಬೇಕಾಗಿಲ್ಲ" ಎಂದು ತಿಳಿಸಿದ್ದಾರೆ.

ರೈತರ ಏಳಿಗೆಗಾಗಿ ರಾಜ್ಯ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಈ ಯೋಜನೆ ಸಂಪೂರ್ಣವಾಗಿ ರೈತರ ಕಲ್ಯಾಣಕ್ಕಾಗಿ ಆಗಿದೆ ಎಂದು ಮುಖ್ಯಮಂತ್ರಿ ರಘುವರ್ ದಾಸ್ ಹೇಳಿದ್ದಾರೆ. ಈ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಕಳುಹಿಸಲಾಗುವುದು. ಇದರಿಂದ ಅವರು ಬೀಜ, ಗೊಬ್ಬರ ಇತ್ಯಾದಿಗಳನ್ನು ಮಾರುಕಟ್ಟೆಯಿಂದ ಖರೀದಿಸಲು ಸಾಧ್ಯವಾಗುತ್ತದೆ.  ಪ್ರಸ್ತುತ, ರಾಜ್ಯ ಸರ್ಕಾರವು 14.85 ಲಕ್ಷ ರೈತರ ಬೆಳೆ ವಿಮೆಗಾಗಿ (ವಾರ್ಷಿಕವಾಗಿ 66 ಕೋಟಿ ರೂ.) ಪ್ರೀಮಿಯಂ ಪಾವತಿಸುತ್ತಿದೆ. ರೈತರಿಗೆ ಶೂನ್ಯ ಶೇಕಡಾ ಬಡ್ಡಿಗೆ ಸಾಲ ನೀಡಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.
 

Trending News