ಶ್ರೀರಾಮನನ್ನು ನೋಡಲು ಅಯೋಧ್ಯೆಗೆ ಹೋಗ್ತೀರಾ..? ಈ ನಿಮಯಗಳನ್ನು ನೀವು ಪಾಲಿಸಲೇಬೇಕು

Ram Mandir rules and regulations : ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ನೀವು ತೆರಳುತ್ತಿದ್ದರೆ ಈ ಕೆಳಗೆ ನೀಡಿರುವ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಅವು ಯಾವುವು ಅಂತ ತಿಳಿಯಲು ಮುಂದೆ ಓದಿ..

Written by - Krishna N K | Last Updated : Jan 12, 2024, 11:11 AM IST
  • ಅಯೋಧ್ಯೆಯ ಶ್ರೀರಾಮನ ಮಂದಿರವನ್ನು ನೋಡಬೇಕೆಂಬುದು ಹಲವರ ಕನಸು.
  • ಅನೇಕ ಭಕ್ತರು ಅಯೋಧ್ಯೆ ಭವ್ಯತೆಯನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಹೋಗುತ್ತಿದ್ದಾರೆ.
  • ನೀವೂ ಅಲ್ಲಿಗೆ ಹೋಗುವವರಾಗಿದ್ದರೆ, ಮೊದಲು ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿದಿರಬೇಕು.
ಶ್ರೀರಾಮನನ್ನು ನೋಡಲು ಅಯೋಧ್ಯೆಗೆ ಹೋಗ್ತೀರಾ..? ಈ ನಿಮಯಗಳನ್ನು ನೀವು ಪಾಲಿಸಲೇಬೇಕು title=

Ayodhya Ram Mandir : ಅಯೋಧ್ಯೆಯ ಶ್ರೀರಾಮನ ಮಂದಿರವನ್ನು ನೋಡಬೇಕೆಂಬುದು ಹಲವರ ಕನಸು. ಆ ಕನಸು ನನಸಾಗುವ ದಿನ ಕೊನೆಗೂ ಹತ್ತಿರ ಬರುತ್ತಿದೆ. ಅನೇಕ ಭಕ್ತರು ಅಯೋಧ್ಯೆ ಭವ್ಯತೆಯನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಹೋಗುತ್ತಿದ್ದಾರೆ. ನೀವೂ ಅಲ್ಲಿಗೆ ಹೋಗುವವರಾಗಿದ್ದರೆ, ಮೊದಲು ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿದಿರಬೇಕು. ಅಂದಾಗ ಮಾತ್ರ ಯಾವುದೇ ತೊಂದರೆಗಳಿಲ್ಲದೆ ಶ್ರೀರಾಮ ಲಲ್ಲಾನ ದರ್ಶನವನ್ನು ಪಡೆಯಬಹುದು.

ಅಯೋಧ್ಯೆಯ ಅತ್ಯಂತ ಮಹತ್ವಾಕಾಂಕ್ಷೆಯ ರಾಮ ಮಂದಿರವು ಜನವರಿ 22, 2024 ರಂದು ಲೋಕಾರ್ಪಣೆಗೊಳ್ಳಲಿದೆ. ರಾಮಭಕ್ತರೆಲ್ಲರೂ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಸಂದರ್ಭವಿದು. ಭಗವಾನ್ ರಾಮನು ಅಯೋಧ್ಯೆಯಲ್ಲಿ ನೆಲೆಸಿದ್ದಾನೆ ಎಂದು ಪೂರ್ವಿಕರ ಕಾಲದಿಂದಲೂ ನಂಬಲಾಗಿದೆ. ಈ ನಿಟ್ಟಿನಲ್ಲಿ ಅಯೋಧ್ಯೆ ಚರ್ಚೆಗೂ ಸಹ ಕಾರಣವಾಗಿತ್ತು.

ಇದನ್ನೂ ಓದಿ: ಇಂದು ಉದ್ಘಾಟನೆಗೊಳ್ಳಲಿದೆ ಅತಿ ಉದ್ದದ ಸಮುದ್ರ ಸೇತುವೆ

ರಾಮ ಅಯೋಧ್ಯೆಯಲ್ಲಿ ಹುಟ್ಟಿ 500 ವರ್ಷವಾದರೂ ಅವನಿಗೆ ಸರಿಯಾದ ನೆಲೆ ಸಿಕ್ಕಿರಲಿಲ್ಲ. ಇಷ್ಟು ವರ್ಷಗಳ ಅಜ್ಞಾತವಾಸದ ನಂತರ ಈಗ ಪ್ರಭು ಶ್ರೀರಾಮ ಈ ನೆಲಕ್ಕೆ ಕಾಲಿಡುತ್ತಿದ್ದಾನೆ. ಆದ್ದರಿಂದಲೇ ರಾಮ ಭಕ್ತರಿಗೆ ಈ ಹಬ್ಬ ಅತ್ಯಂತ ಭಾವಪೂರ್ಣ. ದೇವಾಲಯದಲ್ಲಿ ನಡೆಸಲಾಗುವ ವಿಗ್ರಹ ಪ್ರಾಣಪೃಷ್ಠ ಬಹಳ ಮುಖ್ಯವಾದುದು. ಇದನ್ನು ನೋಡಲು ಅಪಾರ ಸಂಖ್ಯೆಯ ರಾಮ ಭಕ್ತರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ವ್ಯವಸ್ಥೆಗಳು ತುಂಬಾ ಚೆನ್ನಾಗಿ ನಡೆಯುತ್ತಿವೆ.

ಅಯೋಧ್ಯೆಯಲ್ಲಿ ಭಕ್ತರು ಪಾಲಿಸಬೇಕಾದ ನಿಯಮಗಳಿವು:

  • ಜನವರಿ 22 ರಂದು ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಹೋಗಬೇಕಾದರೆ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.
  • ದೇವಾಲಯದ ಆವರಣದೊಳಗೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅನುಮತಿಸಲಾಗುವುದಿಲ್ಲ. ಆದ್ದರಿಂದ ಅವುಗಳನ್ನು ತೆಗೆದುಕೊಂಡು ಹೋಗಬೇಡಿ.
  • ಮೊಬೈಲ್, ಎಲೆಕ್ಟ್ರಾನಿಕ್ ವಾಚ್, ಲ್ಯಾಪ್‌ಟಾಪ್, ಕ್ಯಾಮೆರಾ ಮುಂತಾದ ಯಾವುದೇ ವಸ್ತುಗಳನ್ನು ಒಯ್ಯಬೇಡಿ. ನಿಯಮದ ಉಲ್ಲಂಘನೆ ತೊಂದರೆಗೆ ಕಾರಣವಾಗುತ್ತದೆ.
  • ದೇವಾಲಯದ ಆವರಣದೊಳಗೆ ಯಾವುದೇ ಆಹಾರ ಮತ್ತು ಪಾನೀಯಗಳನ್ನು ಅನುಮತಿಸಲಾಗುವುದಿಲ್ಲ.
  • ದೇವಸ್ಥಾನದ ಒಳಗೆ ಯಾವುದೇ ಆಹಾರ ಅಥವಾ ಪಾನೀಯವನ್ನು ಅನುಮತಿಸಲಾಗುವುದಿಲ್ಲ.
  • ಬೂಟು, ಬೆಲ್ಟ್ ಮುಂತಾದ ವಸ್ತುಗಳನ್ನು ಧರಿಸಿ ದೇವಸ್ಥಾನ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಇವುಗಳನ್ನು ನೀವು ಪ್ರವೇಶದ್ವಾರದಲ್ಲಿ ಬಿಡಬೇಕು.
  • ದೇವಸ್ಥಾನಕ್ಕೆ ಭೇಟಿ ನೀಡುವಾಗ ಹಾರತಿ ತಟ್ಟೆ ಕೊಂಡೊಯ್ಯುವ ಪದ್ಧತಿ ಅನೇಕರಿಗೆ ಇದೆ. ಆದರೆ ಜನವರಿ 22ರಂದು ನಡೆಯುವ ಕಾರ್ಯಕ್ರಮಕ್ಕೆ ಇದನ್ನು ತೆಗೆದುಕೊಂಡು ಹೋಗುವಂತಿಲ್ಲ. ಏಕೆಂದರೆ ನಿಮಗೆ ಯಾವುದೇ ಪೂಜೆ ಮಾಡಲು ಅವಕಾಶವಿಲ್ಲ. 
  • ಆಮಂತ್ರಣ ಪತ್ರಿಕೆ ಇರುವವರಿಗೆ ಮಾತ್ರ ದೇವಸ್ಥಾನಕ್ಕೆ ಪ್ರವೇಶ. ಆಮಂತ್ರಣ ಪತ್ರವಿಲ್ಲದೆ ದೇವಾಲಯಕ್ಕೆ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ. ಹಾಗಾಗಿ ನಿಯಮ ಮೀರಿ ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸದಿರುವುದು ಉತ್ತಮ.
  • ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಸಾಂಪ್ರದಾಯಿಕ ಉಡುಗೆಯನ್ನು ಮಾತ್ರ ಧರಿಸಬೇಕು. ಅಂತಹವರಿಗೆ ಮಾತ್ರ ಅವಕಾಶ. ಡ್ರೆಸ್ ಕೋಡ್ ಬಗ್ಗೆ ವಿಶೇಷ ನಿಯಮವಿಲ್ಲ. ಆದರೆ, ಸಂಘಟಕರು ಸಾಂಪ್ರದಾಯಿಕ ಉಡುಗೆ ತೊಡುವಂತೆ ಮನವಿ ಮಾಡುತ್ತಿದ್ದಾರೆ.
  • ಜನವರಿ 22 ರಂದು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡುವುದು ತುಂಬಾ ಕಷ್ಟ. ವಿಐಪಿಗಳ ಆಗಮನದಿಂದ ಶ್ರೀಸಾಮಾನ್ಯನಿಗೆ ದರ್ಶನ ಭಾಗ್ಯ ಸಿಗುತ್ತಿಲ್ಲ. ಆದ್ದರಿಂದ.. ಇನ್ನೊಂದು ದಿನವನ್ನು ಆರಿಸಿಕೊಳ್ಳುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News