ತೆರೆಗೆ ಬರಲು ಸಿದ್ಧವಾದ ಕಿಡ್ನಾಪ್ ಕಹಾನಿ.. ‘ಹೈಡ್ ಅಂಡ್ ಸೀಕ್’ ರಿಲೀಸ್‌ ಡೇಟ್‌ ಫಿಕ್ಸ್‌..!

Hide and Seek Movie: ಸ್ಯಾಂಡಲ್ವುಡ್ ನಲ್ಲಿ ಒಳ್ಳೊಳ್ಳೆ ಸಬ್ಜೆಕ್ಟ್ ಇರೋ ಹಾಗೂ ಆಡಿಯನ್ಸ್ ಗೆ ಇಷ್ಟ ಆಗೋ ಕಂಟೆಂಟ್ ಗಳ ಸಿನಿಮಾ ಬರುತ್ತಿವೆ. ಅದರಲ್ಲಿ ಇದೀಗ ಮಾರ್ಚ್ 15ಕ್ಕೆ ನಿಮ್ಮ ಮನಸ್ಸನ್ನ ಗೆಲ್ಲೋಕೆ ಬರುತ್ತಿರೋ ಸಿನಿಮಾ ಹೈಡ್ ಅಂಡ್ ಸೀಕ್.  

Written by - YASHODHA POOJARI | Last Updated : Feb 26, 2024, 11:52 AM IST
  • ʼಹೈಡ್ ಆ್ಯಂಡ್ ಸೀಕ್’ ಸಿನಿಮಾದಲ್ಲಿ ಕಿಡ್ನಾಪ್ ಕಹಾನಿ ಇದೆ
  • ಈ ಸಿನಿಮಾದಲ್ಲಿ ಧನ್ಯಾ ರಾಮ್ ಕುಮಾರ್ ಮತ್ತು ಅನೂಪ್ ರೇವಣ್ಣ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ
  • ಪುನೀತ್ ನಾಗರಾಜು ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ.
ತೆರೆಗೆ ಬರಲು ಸಿದ್ಧವಾದ ಕಿಡ್ನಾಪ್ ಕಹಾನಿ.. ‘ಹೈಡ್ ಅಂಡ್ ಸೀಕ್’ ರಿಲೀಸ್‌ ಡೇಟ್‌ ಫಿಕ್ಸ್‌..!  title=

Sandalwood: ʼಹೈಡ್ ಆ್ಯಂಡ್ ಸೀಕ್’ ಸಿನಿಮಾದಲ್ಲಿ ಕಿಡ್ನಾಪ್ ಕಹಾನಿ ಇದೆ. ಈ ಸಿನಿಮಾದಲ್ಲಿ ಧನ್ಯಾ ರಾಮ್ ಕುಮಾರ್ ಮತ್ತು ಅನೂಪ್ ರೇವಣ್ಣ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಪುನೀತ್ ನಾಗರಾಜು ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ.

 ಕನ್ನಡದ ‘ಹೈಡ್ ಆ್ಯಂಡ್ ಸೀಕ್ ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಶೀರ್ಷಿಕೆಯ ಕಾರಣದಿಂದಲೇ ಈ ಚಿತ್ರ ಕೌತುಕ ಮೂಡಿಸಿತ್ತು. ಈಗ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಹೈಡ್ ಆ್ಯಂಡ್ ಸೀಕ್ ’ ಚಿತ್ರದಲ್ಲಿ ಅನೂಪ್ ರೇವಣ್ಣ ಅವರು ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಧನ್ಯಾ ರಾಮ್ ಕುಮಾರ್ ಅಭಿನಯಿಸಿದ್ದಾರೆ. 

ಮೋಷನ್ ಪೋಸ್ಟರ್ ನಲ್ಲಿ ಇವರಿಬ್ಬರ ಗೆಟಪ್ ಹೈಲೈಟ್ ಆಗಿದೆ. ಬಹಳ ದಿನಗಳಿಂದ ಈ ಚಿತ್ರಕ್ಕಾಗಿ ಸಿನಿಪ್ರಿಯರು ಕಾದಿದ್ದರು. ಕಡೆಗೂ ಈ ಸಿನಿಮಾವನ್ನು ಚಿತ್ರಮಂದಿರಕ್ಕೆ ತರಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಮಾರ್ಚ್ 15ರಂದು ‘ಹೈಡ್ ಆ್ಯಂಡ್ ಸೀಕ್ ’ ಬಿಡುಗಡೆ ಆಗಲಿದೆ

ಇದನ್ನೂ ಓದಿ-Hide And Seek: ‘ಹೈಡ್​ ಆ್ಯಂಡ್​ ಸೀಕ್​’ ಮೋಷನ್‌ ಪೋಸ್ಟರ್‌ ಔಟ್!

ಹೈಡ್ ಆ್ಯಂಡ್ ಸೀಕ್ ’ ಸಿನಿಮಾಗೆ ಪುನೀತ್ ನಾಗರಾಜು ನಿರ್ದೇಶನ ಮಾಡಿದ್ದಾರೆ. ವಸಂತ್ ಎಂ. ರಾವ್ ಕುಲಕರ್ಣಿ, ಪುನೀತ್ ನಾಗರಾಜು ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ಸುನೇರಿ ಆರ್ಟ್ ಕ್ರಿಯೇಷನ್ಸ್ ’ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ. ಪಿಜೋ ಪಿ. ಜಾನ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. 

ಮಧು ತುಂಬೆಕೆರೆ ಅವರು ಸಂಕಲನ ಮಾಡಿದ್ದಾರೆ. ‘ಹೈಡ್ ಆ್ಯಂಡ್ ಸೀಕ್ ’ ಚಿತ್ರಕ್ಕೆ ಸ್ಯಾಂಡಿ ಅಡ್ಡಂಕಿ ಅವರು ಸಂಗೀತ ನೀಡಿದ್ದಾರೆ. ಡಾ. ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಈ ಸಿನಿಮಾದಲ್ಲಿ ಉದ್ಯಮಿಯ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಅವರು ಒಪ್ಪಿಕೊಂಡ ಎರಡನೇ ಸಿನಿಮಾ. 

ರಿವರ್ಸ್ ಸ್ಕ್ರೀನ್ ಪ್ಲೇ ಈ ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡದವರು ಹೇಳಿರುವುದು ಕೌತುಕ ಮೂಡಿಸಿದೆ. ಕಥೆಯಲ್ಲಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳು ಇವೆ. ಈ ಕಾರಣದಿಂದ ಅನೂಪ್ ರೇವಣ್ಣ ಮತ್ತು ಧನ್ಯಾ ರಾಮ್ ಕುಮಾರ್ ಅವರು ಈ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಮಾರ್ಚ್ 15ರಂದು ‘ಹೈಡ್ ಆ್ಯಂಡ್ ಸೀಕ್ ’ ತೆರೆಕಾಣಲಿದೆ. ಸಿನಿಪ್ರಿಯರು ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಸಿನಿಮಾದ ಪ್ರಮೋಷನ್ ಕಾರ್ಯ ಭರದಿಂದ ಸಾಗುತ್ತಿದೆ.

ಇದನ್ನೂ ಓದಿ-Hide And Seek: ‘ಹೈಡ್​ ಆ್ಯಂಡ್​ ಸೀಕ್​’ ಮೋಷನ್‌ ಪೋಸ್ಟರ್‌ ಔಟ್!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News