ಅಯೋಧ್ಯೆ ಭೂ ವಿವಾದ ಪ್ರಕರಣ: ಅಕ್ಟೋಬರ್ 17ಕ್ಕೆ ವಿಚಾರಣೆ ಮುಕ್ತಾಯ - ಸುಪ್ರೀಂಕೋರ್ಟ್

ಅಕ್ಟೋಬರ್ 17 ರೊಳಗೆ ಅಯೋಧ್ಯೆಯಲ್ಲಿ ರಾಜಕೀಯವಾಗಿ ಸೂಕ್ಷ್ಮವಾಗಿರುವ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ವಿಚಾರಣೆಯನ್ನು ಮುಕ್ತಾಯಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.

Last Updated : Oct 4, 2019, 06:28 PM IST
ಅಯೋಧ್ಯೆ ಭೂ ವಿವಾದ ಪ್ರಕರಣ: ಅಕ್ಟೋಬರ್ 17ಕ್ಕೆ ವಿಚಾರಣೆ ಮುಕ್ತಾಯ - ಸುಪ್ರೀಂಕೋರ್ಟ್  title=
file photo

ನವದೆಹಲಿ: ಅಕ್ಟೋಬರ್ 17 ರೊಳಗೆ ಅಯೋಧ್ಯೆಯಲ್ಲಿ ರಾಜಕೀಯವಾಗಿ ಸೂಕ್ಷ್ಮವಾಗಿರುವ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ವಿಚಾರಣೆಯನ್ನು ಮುಕ್ತಾಯಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.

ವಿಚಾರಣೆಯ 37 ನೇ ದಿನದ ಮುಕ್ತಾಯದಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠವು ಸುದೀರ್ಘ ವಾದಗಳ ಅಂತಿಮ ಹಂತದ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಅಕ್ಟೋಬರ್ 14 ರಂದು ಮುಸ್ಲಿಂ ಕಡೆಯವರು ವಾದಗಳನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಅದರ ನಂತರ, ಹಿಂದೂ ಪಕ್ಷಗಳಿಗೆ ಅಕ್ಟೋಬರ್ 16 ರೊಳಗೆ ತಮ್ಮ ಪುನರ್ವಿಮರ್ಶೆಯನ್ನು ಒಟ್ಟುಗೂಡಿಸಲು ಎರಡು ದಿನಗಳ ಕಾಲಾವಕಾಶ ನೀಡಲಾಗುವುದು. ಒಟ್ಟಾರೆಯಾಗಿ ವಿಚಾರಣೆ ಅಕ್ಟೋಬರ್ 17ಕ್ಕೆ ಕೊನೆಯ ದಿನವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಎ ನಜೀರ್ ಅವರನ್ನೊಳಗೊಂಡ ನ್ಯಾಯಪೀಠ, ಈ ಮೊದಲು ವಿಚಾರಣೆಯನ್ನು ಮುಕ್ತಾಯಗೊಳಿಸಲು ಅಕ್ಟೋಬರ್ 18 ರ ಗಡುವನ್ನು ನಿಗದಿಪಡಿಸಿತ್ತು.

Trending News