RCB : ಹೆಂಗಸರು ಕಪ್​ ಗೆದ್ದು ಬಿಟ್ರು.. ಗಂಡಸರು..? RCB ಗೆಲುವಿನ ಬೆನ್ನಲ್ಲೆ ಪ್ರಶ್ನೆ ಮಾಡಿದ ವಿಕಟಕವಿ

RCB song : ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯ ನಡೆಯಿತು. 7 ವಿಕೆಟ್​ಗಳಿಂದ ಡೆಲ್ಲಿ ತಂಡವನ್ನು ಮಣಿಸಿದ ಆರ್​ಸಿಬಿ ಮೊದಲ ಬಾರಿಗೆ ಕಪ್‌ ಎತ್ತಿ ಹಿಡಿದಿದೆ. ಇದರ ಬೆನ್ನಲ್ಲೆ ಯೋಗರಾಜ್‌ ಭಟ್‌ ಅವರು ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.

Written by - Krishna N K | Last Updated : Mar 18, 2024, 05:21 PM IST
    • ಕೊನೆಗೂ ಕಪ್‌ ಗೆದ್ದ ಆರ್‌ಸಿಬಿ ಮಹಿಳಾ ತಂಡ.
    • ಕಪ್‌ ಗೆದ್ದ ಖುಷಿಯಲ್ಲಿ ಆರ್‌ಸಿಬಿ ಅಭಿಮಾನಿಗಳು.
    • ಆರ್‌ಸಿಬಿ ಗೆಲುವಿಗೆ ಸಾಂಗ್‌ ಗೀಚಿದ ಯೋಗರಾಜ್‌ ಭಟ್‌.
RCB : ಹೆಂಗಸರು ಕಪ್​ ಗೆದ್ದು ಬಿಟ್ರು.. ಗಂಡಸರು..? RCB ಗೆಲುವಿನ ಬೆನ್ನಲ್ಲೆ ಪ್ರಶ್ನೆ ಮಾಡಿದ ವಿಕಟಕವಿ title=
WPL RCB

Yogaraj bhat RCB song : ಕೊನೆಗೂ ಕಪ್‌ ನಮ್ದಾಗಿದೆ.. ಇದರಿಂದಾಗಿ ಇಷ್ಟು ದಿನ ಈ ಸಲ ಕಪ್‌ ನಮ್ದೆ ಎನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ. WPL 2024 RCB ಗೆಲುವಿನ ಬೆನ್ನಲ್ಲೆ ನಿರ್ದೇಶಕ ಯೋಗರಾಜ್‌ ಅವರು ಹಾಡೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಬಾರಿ ಹೆಂಗಸರು ಕಪ್‌ ಗೆದ್ರು, ಗಂಡಸರು..? ಅಂತ ಪ್ರಶ್ನೆ ಮಾಡಿದ್ದಾರೆ..

ಹೌದು.. ನಿನ್ನೆ ದೆಹಲಿಯ ಆರುಣ್ ಜೇಟ್ಲಿ ಮೈದಾನದಲ್ಲಿ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯ ನಡೆಯಿತು. 7 ವಿಕೆಟ್​ಗಳಿಂದ ಡೆಲ್ಲಿ ತಂಡವನ್ನು ಮಣಿಸಿದ ಆರ್​ಸಿಬಿ ಮೊದಲ ಬಾರಿಗೆ ಕಪ್‌ ಎತ್ತಿ ಹಿಡಿದಿದೆ. ಇದರಿಂದಾಗಿ ಆರ್​ಸಿಬಿ ಅಭಿಮಾನಿಗಳ ಸಖತ್‌ ಖುಷಿಯಾಗಿದ್ದು, ಸಂಭ್ರಮಾಚರಣೆ ಮಾಡುತ್ತಿದ್ದಾರೆ. 

ಇದನ್ನೂ ಓದಿ: RCB : ಕಿಂಗ್‌‌ ಕೊಹ್ಲಿ ದಾಖಲೆ ಮುರಿದ RCBಯ ಆ ಒಂದು ಪೋಸ್ಟ್‌..!

ಈ ಪೈಕಿ ಸ್ಯಾಂಡಲ್‌ವುಡ್‌ ನಿರ್ದೇಶಕ ವಿಕಟಕವಿ ಯೋಗರಾಜ್ ಭಟ್ ಅವರು RCB ಗೆದ್ದ ಖುಷಿಯಲ್ಲಿ ಸಾಂಗ್‌ ಒಂದನ್ನು ಬರೆದು ಹಾಡಿದ್ದಾರೆ. ʼಆರ್​ಸಿಬಿಕಾ ಅಚ್ಚಾ ಟೈಮ್ ಆಗಯಾ, ಹೆಂಗಸರು ಕಪ್​ ಗೆದ್ದು ಬಿಟ್ರು..ʼ ಎನ್ನುವ ಸಾಂಗ್‌ ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ತಂಡ 18.3 ಓವರ್​ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆರ್​ಸಿಬಿ ಕೇವಲ 3 ವಿಕೆಟ್ ನಷ್ಟಕ್ಕೆ 4 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News