ಗದಗ: ಇಂದು ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಟೋಜಿ, ನಿಡಗುಂದಿ, ಹಾಳಕೇರಿ, ಮಾದನಬಸರಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ದೇಶದಲ್ಲಿ ಮೋದಿಯವರು ದೊಡ್ಡ ಪ್ರಮಾಣದ ಬದಲಾವಣೆ ಮಾಡಿದ್ದಾರೆ. ಬೆಳೆ ಹಾನಿಯಾದಾಗ ಎಂ ಎಸ್ ಪಿ ಎರಡು ಮೂರು ಪಟ್ಟು ಹೆಚ್ಚಳ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ರೈತರಿಗೆ 10 ಸಾವಿ ರ ರೂ. ನೀಡಿದ್ದಾರೆ. ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಷ್ಟು ವರ್ಷ ಆಗಿದ್ದರೂ ಎಲ್ಲ ಮನೆಗಳಿಗೆ ನೀರು ಕೊಡುವ ಕೆಲಸ ಮಾಡಿರಲಿಲ್ಲ. ನಾನು ಸಿಎಂ ಆಗಿದ್ದಾಗ ಮನೆಗಳಿಗೆ ನಲ್ಲಿ ನೀರು ಕೊಡುವುದರಲ್ಲಿ ಕರ್ನಾಟಕ 20 ನೇ ಸ್ಥಾನದಲ್ಲಿತ್ತು. ನಾನು ಸಿಎಂ ಆದಮೇಲೆ ನಂಬರ್ ಒನ್ ಸ್ಥಾನಕ್ಕೆ ಬಂದಿದೆ.
ಪ್ರಧಾನಿಯವರು ಕೊವಿಡ್ ಸಂದರ್ಭದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಕೊಡಿಸಿದರು. ಕಾಂಗ್ರೆಸ್ ನವರೂ ಲಸಿಕೆ ತೆಗೆದುಕೊಂಡಿದ್ದಾರೆ. ಜೀವ ಉಳಿಸಿದ ನರೇಂದ್ರ ಮೊದಿಯವರ ಉಪಕಾರ ತೀರಿಸಲು ಮೋದಿಯವರಿಗೆ ಮತ ಹಾಕಬೇಕು. ಮನೆ ಮನೆಗೆ ನೀರು ಕೊಟ್ಟಿರುವ ಮೋದಿಯವರ ಋಣ ತೀರಿಸಲು ಮೋದಿಗೆ ಮತ ಹಾಕಬೇಕು. ಪ್ರತಿಕುಟುಂಬಕ್ಕೆ 5 ಕೆಜಿ ಅಕ್ಕಿ ಕೊಡುತ್ತಿರುವ ಮೋದಿಯವರ ಋಣ ತೀರಿಸಲು ಬಿಜೆಪಿಗೆ ಮತ ಹಾಕಬೇಕು. ಪ್ರತಿಯೊಂದ ಮತವೂ ಮೋದಿಯವರನ್ನು ಪ್ರಧಾನಿ ಮಾಡಲು ಹಾಕಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ-ಮಂಡ್ಯದಲ್ಲಿ ಕುಮಾರಸ್ವಾಮಿ ಮಣಿಸಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್!
ಇದು ದೇಶದ ಭವಿಷ್ಯ ಬರೆಯುವವರ ಕೈಯಲ್ಲಿ ಭಾರತದ ಚುಕ್ಕಾಣಿ ನೀಡುವ ಚುನಾವಣೆ ಯಾರ ಕೈಯಲ್ಲಿ ದೇಶ ಇದ್ದರೆ ಬಲಿಷ್ಠ ಭಾರತ ಆಗುತ್ತದೆ ಎನ್ನುವುದನ್ನು ನಿರ್ಧರಿಸುವ ಚುನಾವಣೆ. ದೇಶದಲ್ಲಿ ಶಾಂತಿ ಇದ್ದರೆ ಅಭಿವೃದ್ಧಿ ಮಾಡಲು ಸಾಧ್ಯ. ಹಿಂದೆ ಭಯೊತ್ಪಾದನೆ ಇತ್ತು ಈಗ ಭಯೊತ್ಪಾದನೆ ಇಲ್ಲ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತಿದೆ ಎಂದು ಹೇಳಿದರು.
ಬಡತನ ನಿರ್ಮೂಲನೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂಚೂಣಿಯಲ್ಲಿದ್ದಾರೆ. ಅವರ ನಾಯಕತ್ವದಲ್ಲಿ 12 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ ಎಂದರು.
ಬಿಜೆಪಿ ರೈತರ ಪರ
ಬಿಜೆಪಿ ಯಾವಾಗಲೂ ರೈತರ ಪರ ಇದೆ. ಯಡಿಯೂರಪ್ಪ ಸಿಎಂ ಆದ ತಕ್ಷಣ ರೈತರ ಹತ್ತು ಎಚ್ ಪಿವರೆಗೂ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದರು. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿದವರು ಯಡಿಯೂರಪ್ಪ. ಕಿಸಾನ್ ಸಮ್ಮಾನ್ ಯೋಜನೆ ಪ್ರತಿ ವರ್ಷ ರೈತರಿಗೆ 10 ಸಾವಿರ ಕೋಟಿ ರೂ. ನೀಡಿದ್ದಾರೆ. ಬೆಳೆ ಪರಿಹಾರವನ್ನು ಗದಗ ಜಿಲ್ಲೆಯಲ್ಲಿ ಸುಮಾರು 800 ಕೋಟಿ ರು. ನೀಡಲಾಗಿದೆ ಎಂದರು
ರಾಜ್ಯದಲ್ಲಿ ಬರ ಬಂದಿದೆ ರಾಜ್ಯ ಸರ್ಕಾರ ಇದುವರೆಗೂ ಬರ ಪರಿಹಾರ ನೀಡಿಲ್ಲ. ರೈತರ ಅಕೌಂಟ್ ಗೆ 2000 ಕೊಡುವುದಾಗಿ ಹೇಳಿದ್ದಾರೆ. ಎಲ್ಕರಿಗೂ ತಲುಪಿಲ್ಲ. ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿದ್ದಾರೆ. ಯಶಸ್ವಿನಿ ಯೋಜನೆ ನಿಲ್ಲಿಸಿದ್ದಾರೆ. ಮತ್ತೆ ರೈತರ ಪರ ಸರ್ಕಾರ ಬರಬೇಕೆಂದರೆ ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ರೋಣ ನರೆಗಲ್ ಕುಡಿಯುವ. ನೀರಿನ ಯೋಜನೆಗೆ ಬೇಡಿಕೆ ಇತ್ತು. ಕಳಕಪ್ಪ ಬಂಡಿ ಅವರ ಶ್ರಮದಿಂದ ಯೊಜನೆ ಜಾರಿಯಾಗಿದೆ. ಜನರ ಹೃದಯದಲ್ಲಿ ಕಳಕಪ್ಪ ಬಂಡಿ ಸ್ಥಾನ ಪಡೆದಿದ್ದಾರೆ. ಇಷ್ಟು ದೊಡ್ಡ ಬರ ಬಿದ್ದರೂ ಕುಡಿಯುವ ನೀರು ಕೊಡದಿರುವ ಈ ಸರ್ಕಾರಕ್ಕೆ ಪಾಠ ಕಲಿಸಲು ಬಿಜೆಪಿಗೆ ಮತ ಹಾಕಿಸಬೇಕು ಎಂದು ಹೇಳಿದರು.
ಇದನ್ನೂ ಓದಿ-ರಾಜ್ಯದಲ್ಲಿ ಮೈತ್ರಿಯಿಂದ ಬಿಜೆಪಿ ಗೆಲುವಿಗೆ ಅನುಕೂಲ ಆಗಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.