Sarkari Naukri: ಡಿಪ್ಲೊಮಾ ಇಂಜಿನಿಯರ್‌ಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ

Sarkari Naukri: RITES ಲಿಮಿಟೆಡ್‌ನಲ್ಲಿ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳಿಗಾಗಿ ಇಲ್ಲಿದೆ ಮಾಹಿತಿ. 

Written by - Yashaswini V | Last Updated : Apr 5, 2024, 01:26 PM IST
  • RITES ಲಿಮಿಟೆಡ್‌ನಲ್ಲಿ ಇಂಜಿನಿಯರ್ ಮತ್ತು ಸಹಾಯಕ ಸೆಕ್ಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ (ಏಪ್ರಿಲ್ 06) ಕೊನೆ ದಿನ
  • ಆಸಕ್ತ ಅಭ್ಯರ್ಥಿಗಳಿಗಾಗಿ ಅರ್ಜಿ ಸಲ್ಲಿಸಲು ಕಡ್ಡಾಯ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ವಿವರ
Sarkari Naukri: ಡಿಪ್ಲೊಮಾ ಇಂಜಿನಿಯರ್‌ಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ  title=

Sarkari Naukri: ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳಿಗಾಗಿ ಬಂಪರ್ ಉದ್ಯೋಗಾವಕಾಶವಿದೆ. ಅದರಲ್ಲೂ, ವಿಶೇಷವಾಗಿ ಡಿಪ್ಲೋಮಾ ಎಂಜಿನಿಯರಿಂಗ್ ಪದವೀಧರರಿಗೆ RITES ಲಿಮಿಟೆಡ್‌ನಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳಿಗಾಗಿ ಅರ್ಜಿ ಸಲ್ಲಿಸಲು ಕಡ್ಡಾಯ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ವಿವರ

ಒಟ್ಟು ಹುದ್ದೆಗಳು: 
RITES ಲಿಮಿಟೆಡ್‌ನಲ್ಲಿ ಇಂಜಿನಿಯರ್ ಮತ್ತು ಸಹಾಯಕ ಸೆಕ್ಷನ್ ಆಫೀಸರ್ ನ ಒಟ್ಟು 32 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 

ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು:- 
RITES ಲಿಮಿಟೆಡ್‌ನಲ್ಲಿ ಇಂಜಿನಿಯರ್ ಮತ್ತು ಸಹಾಯಕ ಸೆಕ್ಷನ್ ಆಫೀಸರ್  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2 ಏಪ್ರಿಲ್ 2024ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.  6 ಏಪ್ರಿಲ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

ಇದನ್ನೂ ಓದಿ- GK Quiz: 'ಮಾರ್ಷಲ್ ಲಾ' ಜಾರಿಗೊಳಿಸುವ ಅಧಿಕಾರ ಯಾರ ಕೈಯಲ್ಲಿ ಇದೆ?

ವಿದ್ಯಾರ್ಹತೆ: 
ಕ್ವಾಲಿಟಿ ಇಂಜಿನಿಯರ್ (ಸೈಟ್ ಇಂಚಾರ್ಜ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ  ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್ ಪದವಿಯಲ್ಲಿ ಡಿಪ್ಲೊಮಾ ಹೊಂದಿರಬೇಕು. ಅಲ್ಲದೆ, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.

ವಯೋಮಿತಿ: 
ಕ್ವಾಲಿಟಿ ಇಂಜಿನಿಯರ್ (ಸೈಟ್ ಇಂಚಾರ್ಜ್) ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಯ ವಯಸ್ಸು ಗರಿಷ್ಠ 45 ವರ್ಷಗಳು.

ಅರ್ಜಿ ಶುಲ್ಕ: 
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದ್ದು, ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ- ನಿಮ್ಮ ರೆಸ್ಯೂಮ್‌ನ ಮಾದರಿಯಿಂದಲೂ ಸಿಗುತ್ತೆ ಉತ್ತಮ ಜಾಬ್

ನೇಮಕಾತಿ ಪ್ರಕ್ರಿಯೆ: 
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೇಲ್ಕಂಡ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ಅರ್ಹತೆಯ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಇದಕ್ಕಾಗಿ, 2024ರ ಏಪ್ರಿಲ್ 12, ಏಪ್ರಿಲ್ 15 ಮತ್ತು ಏಪ್ರಿಲ್ 16ರಂದು ಸಂದರ್ಶನವನ್ನು ಆಯೋಜಿಸಲಾಗಿದೆ. 

ವೇತನ: 
ಈ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಮಾಸಿಕ 35,304 ರೂ.ವರೆಗೆ ಸಂಬಳವನ್ನು ನೀಡಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News