ನವದೆಹಲಿ: ಭಾನುವಾರದಂದು ಅಡಿಲೇಡ್ನಲ್ಲಿ ನಡೆದ ಮೊದಲ ಟಿ 20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 134 ರನ್ಗಳ ಜಯ ಸಾಧಿಸಿದ ನಂತರ ಗ್ಲೆನ್ ಮ್ಯಾಕ್ಸ್ವೆಲ್ ಮಾನಸಿಕ ಆರೋಗ್ಯ ಖಿನ್ನತೆಯಿಂದಾಗಿ ಕ್ರಿಕೆಟ್ನಿಂದ ಅಲ್ಪವಿರಾಮ ತೆಗೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ 20 ಸರಣಿಯಿಂದ ಹಿಂದೆ ಸರಿಯುವ ಗ್ಲೆನ್ ಮ್ಯಾಕ್ಸ್ವೆಲ್ ಅವರ ನಿರ್ಧಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಮತ್ತು ಅವರ ಬದಲಿಯಾಗಿ ಡಿಆರ್ಸಿ ಶಾರ್ಟ್ ಅವರನ್ನು ಆಯ್ಕೆ ಮಾಡಿದೆ. ಕ್ರಿಕೆಟ್ ಡಾಟ್ ಕಾಮ್ ನಲ್ಲಿ ಪ್ರಕಟವಾದ ವರದಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಟೀಮ್ ನ ಮನಶ್ಶಾಸ್ತ್ರಜ್ಞ ಡಾ. ಮೈಕೆಲ್ ಲಾಯ್ಡ್ ಮಾತನಾಡಿ ' ಗ್ಲೆನ್ ಮ್ಯಾಕ್ಸ್ ವೆಲ್ ಅವರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಅವರು ಅಲ್ಪ ಸಮಯ ಆಟದಿಂದ ದೂರ ಕಳೆಯುತ್ತಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯ ನಿರ್ವಾಹಕ ಜನರಲ್ ಮ್ಯಾನೇಜರ್ ಬೆನ್ ಆಲಿವರ್ ಈ ವಿಚಾರವಾಗಿ ಪ್ರತಿಕ್ರಿಯಿಸಿ ' ಮಂಡಳಿಯಿಂದ ಮ್ಯಾಕ್ಸ್ವೆಲ್ಗೆ ಸಂಪೂರ್ಣ ಬೆಂಬಲ ಸಿಗಲಿದೆ. 'ನಮ್ಮ ಆಟಗಾರರು ಮತ್ತು ಸಿಬ್ಬಂದಿಗಳ ಯೋಗಕ್ಷೇಮವು ನಮ್ಮ ಪ್ರಾಶಸ್ತ್ಯವಾಗಿದೆ. ಗ್ಲೆನ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ' ಎಂದು ಅವರು ಹೇಳಿದರು.