ಕಾಂಗ್ರೆಸ್‌ಗೆ ಮತ ಹಾಕುವಂತೆ ನಟ ರಣವೀರ್ ಮನವಿ..! ವಿಡಿಯೋ ವೈರಲ್‌, ದೂರು ದಾಖಲು

Ranveer Singh viral video : ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾದ ಡೀಪ್ ಫೇಕ್ ವೀಡಿಯೋ ಒಂದು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ಕುರಿತು ನಟ ದೂರು ದಾಖಲಿಸಿದ್ದಾರೆ. 

Written by - Krishna N K | Last Updated : Apr 25, 2024, 03:43 PM IST
    • ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ ವಿಡಿಯೋ ವೈರಲ್‌
    • ನಟ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾದ ಡೀಪ್ ಫೇಕ್ ವೀಡಿಯೋ
    • ರಣವೀರ್ ಸಿಂಗ್ ನೀಡಿರುವ ಹೇಳಿಕೆ ಸಂಚಲನ ಮೂಡಿಸುತ್ತಿದೆ.
ಕಾಂಗ್ರೆಸ್‌ಗೆ ಮತ ಹಾಕುವಂತೆ ನಟ ರಣವೀರ್ ಮನವಿ..! ವಿಡಿಯೋ ವೈರಲ್‌, ದೂರು ದಾಖಲು title=

Ranveer Singh deepfake video: ನಟ ನಟಿಯರು ನೀಡುವ ರಾಜಕೀಯ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದೀಗ ಲೋಕಸಭೆ ಚುನಾವಣೆಯ ಆರಂಭದಲ್ಲೆ ಬಾಲಿವುಡ್‌ ಸೂಪರ್‌ ಸ್ಟಾರ್‌ ನಟ ರಣವೀರ್ ಸಿಂಗ್ ನೀಡಿರುವ ಹೇಳಿಕೆ ಸಂಚಲನ ಮೂಡಿಸುತ್ತಿದೆ.

ಹೌದು.. ಬಾಲಿವುಡ್‌ ನಟ ರಣ್‌ವೀರ್‌ ಸಿಂಗ್‌ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾದ ಡೀಪ್ ಫೇಕ್ ವೀಡಿಯೋ ಒಂದು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿದೆ. ಅಲ್ಲದೆ ಈ ಕುರಿತು ನಟ ದೂರು ದಾಖಲಿಸಿದ್ದಾರೆ. ವಾರಾಣಸಿಗೆ ತೆರಳಿದ್ದಾಗ ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದ ವೀಡಿಯೋಗೆ, ದುಷ್ಕರ್ಮಿ ಗಳು ಎ.ಐ. ಮೂಲಕ ಫೇಕ್‌ ಆಡಿಯೋ ಸೇರಿಸಿದ್ದಾರೆ ಎಂದು ನಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:  ʻಒಂದು ರಾತ್ರಿಗೆ ನಿನ್ನ ರೇಟ್‌ ಎಷ್ಟು?ʼ : ಖಡಕ್‌ ಆಗಿ ಉತ್ತರಿಸಿದ ಬಿಗ್‌ ಬಾಸ್‌ ಪ್ರಿಯಾಂಕಾ!

ಇನ್ನು ವೈರಲ್‌ ಆದ ವೀಡಿಯೋದಲ್ಲಿ ಸಿಂಗ್‌ ಅವರು, ಆಡಳಿತಾರೂಢ ಕೇಂದ್ರ ಬಿಜೆಪಿ ಸರಕಾರವನ್ನು ಟೀಕಿಸಿ, ಕಾಂಗ್ರೆಸ್‌ಗೆ ಮತನೀಡಿ ಎಂದು ಮನವಿ ಮಾಡಿರುವಂತೆ ಬಿಂಬಿಸಲಾಗಿದೆ. ಸಧ್ಯ ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ರಣವೀರ್‌ ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಸದ್ಯ ಡೀಪ್‌ ಫೇಕ್‌ ತಂತ್ರಜ್ಞಾನಕ್ಕೆ ನಟ ನಟಿಯರು ಬಲಿಯಾಗುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವಾರು ನಟಿಯರ ಅಶ್ಲೀಲ ವಿಡಿಯೋಗಳು ವೈರಲ್‌ ಆಗಿದ್ದರು. ರಶ್ಮಿಕಾ ಬೆಂಬಲಕ್ಕೆ ಭಾರತೀಯ ನಟ ನಟಿಯರು ಧ್ವನಿ ಎತ್ತಿದ್ದರು. ಆರೋಪಿಗಳ ಬಂಧನವೂ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News