ಜೆಎನ್‌ಯು ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ ನಂತರ ತ್ವರಿತ ಕ್ರಮಕ್ಕೆ ಮುಂದಾದ ಕೇಂದ್ರ

ಜೆಎನ್‌ಯು ವಿಶ್ವವಿದ್ಯಾನಿಲಯವು ಹಾಸ್ಟೆಲ್ ಶುಲ್ಕವನ್ನು ಸುಮಾರು ಶೇ 300 ರಷ್ಟು ಹೆಚ್ಚಿಸಿರುವುದನ್ನು ವಿರೋಧಿಸಿ ನಡೆಸಿದ ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದ್ದು ಈಗ ತ್ವರಿತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ.

Last Updated : Nov 11, 2019, 06:38 PM IST
ಜೆಎನ್‌ಯು ವಿದ್ಯಾರ್ಥಿಗಳ ಭಾರಿ ಪ್ರತಿಭಟನೆ ನಂತರ ತ್ವರಿತ ಕ್ರಮಕ್ಕೆ ಮುಂದಾದ ಕೇಂದ್ರ  title=
Photo courtesy: Twitter

ನವದೆಹಲಿ: ಜೆಎನ್‌ಯು ವಿಶ್ವವಿದ್ಯಾನಿಲಯವು ಹಾಸ್ಟೆಲ್ ಶುಲ್ಕವನ್ನು ಸುಮಾರು ಶೇ 300 ರಷ್ಟು ಹೆಚ್ಚಿಸಿರುವುದನ್ನು ವಿರೋಧಿಸಿ ನಡೆಸಿದ ವಿದ್ಯಾರ್ಥಿಗಳ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದ್ದು ಈಗ ತ್ವರಿತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ.

ಇಂದು ವಿದ್ಯಾರ್ಥಿಗಳು ಹಾಸ್ಟೆಲ್ ಮಾಸಿಕ ಶುಲ್ಕವನ್ನು 2,500 ರೂ ದಿಂದ 7,000 ರೂ ಗೆ ಏರಿಸಿದ ವಿವಿ ಕ್ರಮವನ್ನು ವಿರೋಧಿಸಿ ಬೆಳಿಗ್ಗೆ ವಸಂತ್ ಕುಂಜ್ ನಲ್ಲಿರುವ ಅಖಿಲ ಭಾರತ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ)  ನಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ವಿವಿಯ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಈಗ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ನಂತರ ಪ್ರತಿಕ್ರಿಯಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ  ಟ್ವೀಟ್ ಮಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಜೆಎನ್‌ಯು ವಿದ್ಯಾರ್ಥಿಗಳೊಂದಿಗೆ ತಮ್ಮ ಸಮಸ್ಯೆಗಳ ಬಗ್ಗೆ ಇಂದು ಎಐಸಿಟಿಇ ಕ್ಯಾಂಪಸ್‌ನಲ್ಲಿ ಸಕಾರಾತ್ಮಕ ಮಾತುಕತೆ ನಡೆಸಿದರು. ಅವರ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು ' ಎಂದು ಹೇಳಿದೆ. 
 

Trending News