ನವದೆಹಲಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ ನೇಮಕಗೊಂಡಿರುವ ಮುಸ್ಲಿಂ ಪ್ರಾಧಾಪಕನ ಬೆಂಬಲಕ್ಕೆ ಈಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಧಾವಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ನಮ್ಮ ಭಾಷೆಗಳು ಮತ್ತು ಸಂಸ್ಕೃತಿ ನಮ್ಮ ವಿಶೇಷತೆ, ನಮ್ಮ ಶಕ್ತಿ" ಎಂದು ಟ್ವೀಟ್ ಮಾಡಿದ್ದಾರೆ. "ಸಂಸ್ಕೃತ ಭಾಷೆಯಲ್ಲಿ ವಿಶಾಲತೆ ಇದೆ. ನಮ್ಮ ದೇಶದ ಸಂವಿಧಾನವು ವಿಶಾಲತೆಯನ್ನು ಹೊಂದಿದೆ. ಯಾವುದೇ ಶಿಕ್ಷಕರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತವನ್ನು ಕಲಿಸಬಹುದು" ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
हमारी भाषाएँ और संस्कृति हमारी विशेषता है, हमारी मजबूती है। संस्कृत भाषा में ही लिखा गया है, “सर्वे भवन्तु सुखिनः। सर्वे सन्तु निरामयाः।
इस भाषा में विशालता है। हमारे देश के संविधान में विशालता है। विश्वविद्यालय में संस्कृत कोई भी अध्यापक पढ़ा सकते हैं।https://t.co/OvlFGH2l7n
— Priyanka Gandhi Vadra (@priyankagandhi) November 21, 2019
ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಕೂಡ ಗುರುವಾರ ವಿವಾದಕ್ಕೆ ಸರ್ಕಾರವನ್ನು ದೂರಿದ್ದು, ಶಿಕ್ಷಣ ಅಥವಾ ಧರ್ಮ ಅಥವಾ ಜಾತಿಯ ರಾಜಕೀಯವನ್ನು ಜೋಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಫಿರೋಜ್ ಖಾನ್ ಅವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡುವುದನ್ನು ವಿದ್ಯಾರ್ಥಿಗಳ ಗುಂಪು ವಿರೋಧಿಸುತ್ತಿದ್ದರೆ, ಕೆಲವರು ಶಿಕ್ಷಕರನ್ನು ಬೆಂಬಲಿಸಿದ್ದಾರೆ.