Curly Hair growth tips : ಗುಂಗುರು ಕೂದಲು ಹೊಂದಿರುವ ಜನರು ಸಾಕಷ್ಟು ಪ್ರಯತ್ನಗಳನ್ನ ಮಾಡಿದರೂ ಸಹ ಕೂದಲು ಸ್ವಲ್ಪವೂ ಬೆಳೆಯುವುದಿಲ್ಲ. ಆದರೆ ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಸುವ ಮೂಲಕ ನೀವು ಈ ಸಮಸ್ಯೆಯಿಂದ ಶಾಶ್ವತ ಪರಿಹಾರ ಪಡೆಯಬಹುದು..
ನೇರ ಕೂದಲು ಬಹಳ ವೇಗವಾಗಿ ಸರಳವಾಗಿ ಬೆಳೆಯುತ್ತಲೇ ಇರುತ್ತವೆ. ಆದರೆ ಗುಂಗುರು ಕೂದಲು ಬೆಳೆಯುವುದೇ ಇಲ್ಲ. ಗುಂಗುರು ಕೂದಲು ಬೆಳೆಯಲು ವಿವಿಧ ಶ್ಯಾಂಪೂಗಳು ಮತ್ತು ಎಣ್ಣೆಗಳನ್ನು ಬಳಸುತ್ತಾರೆ. ಆದರೂ ಫಲಿತಾಂಶ ಬರುವುದಿಲ್ಲ. ಈ ಕೆಲವು ಸರಳ ಸಲಹೆಗಳನ್ನು ನೀವು ಪಾಲಿಸಿದರೆ ಗುಂಗುರು ಕೂದಲು ವೇಗವಾಗಿ ಬೆಳೆಯುತ್ತವೆ. ವಿಶೇಷವಾಗಿ ಸಾಸಿವೆ ಎಣ್ಣೆ ಗುಂಗುರು ಕೂದಲು ಬೆಳೆಯಲು ಸಹಾಯ ಮಾಡುತ್ತದೆ..
ಗುಂಗುರು ಕೂದಲು ಬೆಳೆಯಲು ಬೇಕಾಗುವ ಸಾಮಾಗ್ರಿಗಳು : 2 ಚಮಚ ಸಾಸಿವೆ ಎಣ್ಣೆ, 3 ಚಮಚ ಮೊಸರು. ಈ ಹೇರ್ ಮಾಸ್ಕ್ ಅನ್ನು ಅನ್ವಯಿಸುವ ಮೊದಲು ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ನಂತರ 2 ಚಮಚ ಸಾಸಿವೆ ಎಣ್ಣೆಯನ್ನು 3 ಚಮಚ ಮೊಸರಿಗೆ ಬೆರೆಸಿ ಕೂದಲಿಗೆ ಹಚ್ಚಿ. 45 ನಿಮಿಷಗಳ ನಂತರ ಸ್ನಾನ ಮಾಡಿ.
ವಾರಕ್ಕೆ ಎರಡು ಬಾರಿ : ಈ ಹೇರ್ ಮಾಸ್ಕ್ ಕೂದಲಿನ ಬೇರುಗಳನ್ನು ಗಟ್ಟಿಯಾಗಿ ಮಾಡಲು ಮತ್ತು ಕೂದಲನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಈ ಹೇರ್ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಹಚ್ಚಿಕೊಳ್ಳಿ. ಇದು ನೆತ್ತಿಯ ಮೇಲಿನ ಸತ್ತ ಚರ್ಮದ ಕೋಶಗಳನ್ನು ನಾಶಪಡಿಸುತ್ತದೆ. ಕೂದಲು ಬೆಳೆಯುತ್ತದೆ ಮತ್ತು ಗುಂಗುರು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ
ಕೂದಲಿಗೆ ಸಾಸಿವೆ ಎಣ್ಣೆಯ ಪ್ರಯೋಜನಗಳು : ಸಾಸಿವೆ ಎಣ್ಣೆಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದನ್ನು ಬಳಸುವುದರಿಂದ ಕೂದಲಿಗೆ ಹಲವು ವಿಧದಲ್ಲಿ ಲಾಭವಾಗುತ್ತದೆ. ಈ ಎಣ್ಣೆಯಲ್ಲಿರುವ ವಿಟಮಿನ್ ಇ, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅಲ್ಲದೆ ಕೂದಲು ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ.
ಕೂದಲಿಗೆ ಮೊಸರಿನ ಪ್ರಯೋಜನಗಳು : ಮೊಸರು ನಮ್ಮ ಆರೋಗ್ಯಕ್ಕೆ ಮಾತ್ರವಲ್ಲ ಕೂದಲಿಗೆ ಒಳ್ಳೆಯದು. ಮೊಸರು ವಿಟಮಿನ್ ಬಿ ಯಲ್ಲಿ ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಪ್ರಮುಖ ಅಂಶವಾಗಿದೆ. ಇದು ಕೂದಲು ಉದುರುವಿಕೆಯನ್ನು ಸಹ ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ.