actress renu desai: ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಸೆಲೆಬ್ರಿಟಿಗಳು ಪ್ರೀತಿಸಿ ಮದುವೆಯಾಗುವುದು ಸಾಮಾನ್ಯ. ತೆರೆಯ ಮೇಲೆ ರೀಲ್ ಜೋಡಿಯಾಗಿ ನಟಿಸಿದ ಅನೇಕ ಸೆಲೆಬ್ರಿಟಿಗಳು ನಿಜವಾದ ಜೋಡಿಗಳಾಗಿ ಬದಲಾಗುತ್ತಿದ್ದಾರೆ. ಆದರೆ ಇವರ ದಾಂಪತ್ಯ ಜೀವನ ಎಷ್ಟು ದಿನ ಇರುತ್ತದೆ ಎಂಬುದು ಪ್ರಶ್ನೆ. ಕೆಲವರು ನೆಮ್ಮದಿಯಿಂದ ಬದುಕಿದರೆ, ಕೆಲವು ಸೆಲೆಬ್ರಿಟಿಗಳು ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದು ಬೇರೆಯಾಗುತ್ತಾರೆ. ಅಂತದ್ದೆ ಜೋಡಿ ಪವನ್ ಕಲ್ಯಾಣ್ - ರೇಣು ದೇಸಾಯಿ ಜೋಡಿ..
ತೆಲುಗು ಜನಪ್ರಿಯ ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ನಟಿ ರೇಣು ದೇಸಾಯಿ ಅವರ ಪ್ರಣಯವು ಬದ್ರಿ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದಾಗ ಅರಳಿ, ಅನೇಕ ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು.. ಬಳಿಕ ಮದುವೆಯಾಗಿದರು.. ಈ ದಂಪತಿಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳಿದ್ದಾರೆ..
ಇದನ್ನೂ ಓದಿ-Ramoji Rao Movies : ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲಿ ರಾಮೋಜಿ ರಾವ್ ಮೂಡಿಸಿದ ಛಾಪು ಅನನ್ಯ!
ಆದರೆ ಎರಡು ವರ್ಷಗಳ ನಂತರ, ಇಬ್ಬರೂ ಬೇರ್ಪಟ್ಟರು. ಸುಮಾರು 12 ವರ್ಷಗಳಿಂದ ಒಂಟಿಯಾಗಿರುವ ಅವರು ತಮ್ಮ ಮಗ ಅಕಿರಾ ನಂದನ್ ಮತ್ತು ಮಗಳು ಆಧ್ಯ ಅವರ ಪಾಲನೆ ಮತ್ತು ಶಿಕ್ಷಣವನ್ನು ನೋಡಿಕೊಳ್ಳುತ್ತಾರೆ.
ಈ ನಡುವೆ ರೇಣು ದೇಸಾಯಿ ಮತ್ತೆ ನಟನೆಯತ್ತ ಗಮನಹರಿಸಿದ್ದಾರೆ.. ಇತ್ತೀಚೆಗೆ 'ಟೈಗರ್ ನಾಗೇಶ್ವರ ರಾವ್' ಚಿತ್ರದಲ್ಲಿ ನಟಿಸಿದ್ದ ಅವರು ಟಿವಿ ಶೋಗಳಲ್ಲಿ ತೀರ್ಪುಗಾರರಾಗಿದ್ದಾರೆ. ರೇಣು ದೇಸಾಯಿ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ-ಈ ಬಾರಿ ಹಲವು ಬದಲಾವಣೆಗಳೊಂದಿಗೆ ಬರುತ್ತಿದೆ ರಾಜ ರಾಣಿ ಸೀಸನ್ 3
ಇತ್ತೀಚೆಗೆ ರೇಣು ದೇಸಾಯಿ ಜನಪ್ರಿಯ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಅದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಎರಡನೇ ಮದುವೆಯ ಪ್ರಶ್ನೆಗೆ ನಿರ್ದಿಷ್ಟವಾಗಿ ಉತ್ತರಿಸಿದ ಅವರು.. ತಾನು ಮದುವೆಯಾಗಲು ಸಿದ್ಧಳಿದ್ದೇನೆ.. ಖಂಡಿತವಾಗಿ ಎರಡನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.
"ನನ್ನ ಮಕ್ಕಳಿಗೆ ಆಗ ಕೇರ್ ಟೇಕರ್ ಬೇಕಾಗಿತ್ತು.. ನಾನು ಮತ್ತೊಂದು ಮದುವೆಯಾದರೇ ಆಗ ನನಗೆ ಅವರಿಗೆಂದು ಸಮಯವೇ ಇಲ್ಲದಂತಾಗುತ್ತಿತ್ತು.. ಈಗ ನನ್ನ ಮಕ್ಕಳು ದೊಡ್ಡವರಾಗುತ್ತಿದ್ದಾರೆ.. ಅವರು ಈಗ ಹೆಚ್ಚು ನನ್ನ ಮೇಲೆ ಅವಲಂಬಿತರಾಗಿರುವುದಿಲ್ಲ.. ಶಿಕ್ಷಣ.. ಸ್ನೇಹಿತರು.. ಹೀಗೆ ಜೀವನದ ಹಲವಾರು ಕೆಲಸದಲ್ಲಿ ಬ್ಯುಸಿಯಾಗುತ್ತಾರೆ.. ಇದು ನನಗೆ ಎರಡನೇ ಮದುವೆಯಾಗಲು ಸೂಕ್ತ ಸಮಯ. ಅದಕ್ಕಾಗಿಯೇ ಇಷ್ಟು ವರ್ಷ ಕಾಯುತ್ತಿದ್ದೆ. ಹಾಗಾಗಿ ಎರಡ್ಮೂರು ವರ್ಷದಲ್ಲಿ ಖಂಡಿತ ಮದುವೆಯಾಗುತ್ತೇನೆ, ನನಗೆ ವೈವಾಹಿಕ ಜೀವನ ಬೇಕು, ಎಲ್ಲರಂತೆ ವೈವಾಹಿಕ ಜೀವನವನ್ನು ಆನಂದಿಸಬೇಕು ಎನ್ನುವ ಆಸೆ ಇದೆ" ಎಂದು ಹೇಳಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.