Ather Rizta Family Electric Scooter: ಈ ಎಲೆಕ್ಟ್ರಿಕ್ ಸ್ಕೂಟರ್ 2.9kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು2.9kWh ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಮಾದರಿಯು 123KM ರೇಂಜ್ ಮತ್ತು 80KM ಟಾಪ್ ಸ್ಪೀಡ್ ಹೊಂದಿದೆ. ರಿಜ್ಟಾ S ರೂಪಾಂತರದ ಬೆಲೆಯು 1.09 ಲಕ್ಷ ರೂ.(ಎಕ್ಸ್ ಶೋರೂಂ)ವಾಗಿದೆ.
Ather Rizta: ಎಥರ್ ಎನರ್ಜಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 450 ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇದು ರಿಜ್ಟಾ(Ather Rizta) ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ 1,09,999 ರೂ. ಆಗಿದೆ. ಹೊಸದಾಗಿ ಬಿಡುಗಡೆಯಾದ ಎಥರ್ ರಿಜ್ಟಾದ ಉತ್ಪಾದನೆಯು ತಮಿಳುನಾಡಿನ ಹೊಸೂರಿನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಪ್ರಾರಂಭವಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಇ-ಸ್ಕೂಟರ್‌ಗಳ ಜೊತೆಗೆ ಈ ಸ್ಕೂಟರ್ ಸ್ಪರ್ಧಿಸಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಎಥರ್ ರಿಜ್ಟಾ ಫ್ಯಾಮಿಲಿ ಸ್ಕೂಟರ್ ಆಗಿದ್ದು, ಇದನ್ನು 450Xಗಿಂತ ಹೆಚ್ಚು ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್‌ನಲ್ಲಿ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆ ಇರುವಾಗಲೇ ಈ ಹೊಸ ಸ್ಕೂಟರ್ ಎಂಟ್ರಿ ಆಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ರಿಜ್ಟಾ S, ರಿಜ್ಟಾ Z ಮತ್ತು ರಿಜ್ಟಾ Z (ಲಾಂಗ್ ರೇಂಜ್) ಎಂಬ 3 ರೂಪಾಂತರಗಳಲ್ಲಿ ಲಭ್ಯವಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ 2.9kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು2.9kWh ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಮಾದರಿಯು 123KM ರೇಂಜ್ ಮತ್ತು 80KM ಟಾಪ್ ಸ್ಪೀಡ್ ಹೊಂದಿದೆ. ರಿಜ್ಟಾ S ರೂಪಾಂತರದ ಬೆಲೆಯು 1.09 ಲಕ್ಷ ರೂ.(ಎಕ್ಸ್ ಶೋರೂಂ)ವಾಗಿದೆ. ಈ ರೂಪಾಂತರವು ಪ್ಯಾಂಗೊಂಗ್ ಬ್ಲೂ, ಡೆಕ್ಕನ್ ಗ್ರೇ ಮತ್ತು ಸಿಯಾಚಿನ್ ವೈಟ್ ಎಂಬ 3 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 7-ಇಂಚಿನ ಸೆಗ್ಮೆಂಟ್ ಡಿಸ್ಪ್ಲೇ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನಂತಹ ಫೀಚರ್ಸ್ ಹೊಂದಿವೆ.
ಈ ಎಥರ್ ರಿಜ್ಟಾ Z ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ 1.25 ಲಕ್ಷ ರೂ.ವಾಗಿದೆ. ಈ ರೂಪಾಂತರದ ಕಾರ್ಯಕ್ಷಮತೆ, ರೇಂಜ್ & ಚಾರ್ಜಿಂಗ್ ರಿಜ್ಟಾ Sಗೆ ಹೋಲುತ್ತದೆ, ಆದರೆ ಇದು 7 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಮಾದರಿಯು 7-ಇಂಚಿನ LCD ಡಿಸ್ಪ್ಲೇ ಮತ್ತು ಪ್ರೊ ಪ್ಯಾಕ್ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಪ್ರೊ ಪ್ಯಾಕ್‌ನ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಅಥರ್ ರಿಜ್ಟಾ Sನಲ್ಲಿ ಕಾಣೆಯಾಗಿರುವ ಮೇಲಿನ ಎಲ್ಲಾ ವೈಶಿಷ್ಟ್ಯಗಳನ್ನು ರಿಜ್ಟಾ Z ರೂಪಾಂತರದಲ್ಲಿ ಕಂಡುಬರುತ್ತವೆ. ಸ್ಮಾರ್ಟ್‌ಇಕೋ ಮೋಡ್, ಬ್ಲೂಟೂತ್ ಕಾಲ್ ಮತ್ತು ಮ್ಯೂಸಿಕ್ ಕಂಟ್ರೋಲ್, ಆಟೋ ಹೋಲ್ಡ್, ಫಾಲ್ ಸೇಫ್, ಆಟೋ ಇಂಡಿಕೇಟರ್ ಕಟ್-ಆಫ್, ESS ಮುಂತಾದ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಗೂಗಲ್ ಮ್ಯಾಪ್, ಲೈವ್- ಚಾರ್ಜಿಂಗ್ ಸ್ಥಿತಿ, ಅಲೆಕ್ಸಾ ಮುಂತಾದವುಗಳನ್ನು ಹೊಂದಿದೆ.
ಕೊನೆಯದಾಗಿ ಎಥರ್ ರಿಜ್ಟಾ Z (ಲಾಂಗ್ ರೇಂಜ್) ರೂಪಾಂತರವು 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಂದಿದೆ. ಇದು 160KM ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು ಶೇ.80ರಷ್ಟು ಚಾರ್ಜ್ ಆಗಲು ಈಗ ದೊಡ್ಡ ಬ್ಯಾಟರಿ ಪ್ಯಾಕ್ ಹೊರತಾಗಿಯೂ ಕೇವಲ 4 ಗಂಟೆ ಮತ್ತು 30 ನಿಮಿಷ ತೆಗೆದುಕೊಳ್ಳುತ್ತದೆ. ಈ ಟಾಪ್ ರಿಜ್ಟಾ Z (ಲಾಂಗ್ ರೇಂಜ್) ರೂಪಾಂತರದ ಬೆಲೆಯು 1.45 ಲಕ್ಷ ರೂ. (ಎಕ್ಸ್-ಶೋ ರೂಂ) ಆಗಿದೆ. ಈ ಎಲ್ಲಾ ರೂಪಾಂತರಗಳು 3-ವರ್ಷ/30,000km ಸ್ಕೂಟರ್ ಮತ್ತು ಬ್ಯಾಟರಿ ವಾರಂಟಿಯೊಂದಿಗೆ ಬರುತ್ತವೆ. ಎಥರ್ ಬ್ಯಾಟರಿ ಪ್ರೊಟೆಕ್ಟ್‌ನೊಂದಿಗೆ ಗ್ರಾಹಕರು ತಮ್ಮ ಬ್ಯಾಟರಿ ವಾರಂಟಿಯನ್ನು 5-ವರ್ಷ/60,000kmಗೆ ಹೆಚ್ಚಿಸಬಹುದಾಗಿದೆ.