ನವದೆಹಲಿ: ಹೊಸ ವರ್ಷ 2020ರ ಪಾರ್ಟಿ-ಸಮಯ ಮುಗಿದಿದೆ ಮತ್ತು ಮುಂದಿನ 12 ತಿಂಗಳುಗಳವರೆಗೆ ನಿಮ್ಮ ಆರ್ಥಿಕ ಜೀವನವನ್ನು ಯೋಜಿಸಲು ಸಮಯವಿದೆ. ಯಾವಾಗಲೂ ಹಾಗೆ, ಹೊಸ ವರ್ಷ ಬರುತ್ತಿದ್ದಂತೆ ಬಹಳಷ್ಟು ವಿಷಯಗಳು ಬದಲಾಗುತ್ತವೆ. ಹಲವಾರು ಸೇವೆಗಳು ದುಬಾರಿಯಾಗುತ್ತದೆ ಮತ್ತು ನೀವು ಹೆಚ್ಚು ಪಾವತಿಸಬೇಕಾಗುತ್ತದೆ. ಭಾರತೀಯ ರೈಲ್ವೆ ರೈಲು ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇನ್ನೊಂದೆಡೆ ಕಾರು ದರವನ್ನು ಹೆಚ್ಚಿಸುವುದಾಗಿ ಕಾರು ತಯಾರಕರು ಖಚಿತಪಡಿಸಿದ್ದಾರೆ. 2020 ರಲ್ಲಿ ನಿಮಗೆ ಹೆಚ್ಚು ವೆಚ್ಚವಾಗುವ ಮೂರು ಸೇವೆಗಳ ನೋಟ ಇಲ್ಲಿದೆ -
1. ರೈಲು ಟಿಕೆಟ್ಗಳು - ರೈಲು ಶುಲ್ಕ ಹೆಚ್ಚಿಸುವುದಾಗಿ ಭಾರತೀಯ ರೈಲ್ವೆ ಮಂಗಳವಾರ ಪ್ರಕಟಿಸಿದೆ. ಇದು ಸಾಮಾನ್ಯ ರೈಲುಗಳಿಗೆ 1 ಪೈಸಾ / ಕಿಮೀ ಹೆಚ್ಚಳ, ಎಸಿ ಅಲ್ಲದ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ದರದಲ್ಲಿ 2 ಪೈಸೆ / ಕಿಮೀ ಹೆಚ್ಚಳವನ್ನು ಘೋಷಿಸಿದೆ. ಎಸಿ ತರಗತಿಗಳ ಶುಲ್ಕದಲ್ಲಿ 4 ಪೈಸೆ / ಕಿಮೀ ಹೆಚ್ಚಿಸುವುದಾಗಿ ಘೋಷಿಸಲಾಗಿದೆ. ಹೆಚ್ಚಳವು ಶತಾಬ್ದಿ ಮತ್ತು ರಾಜಧಾನಿ ರೈಲುಗಳಿಗೂ ಅನ್ವಯಿಸುತ್ತದೆ ಎಂದು ರೈಲ್ವೆ ತಿಳಿಸಿದೆ. ಜನವರಿ 1, 2020 ರ ಮೊದಲು ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ರೈಲು ಶುಲ್ಕವನ್ನು (ಶುಲ್ಕದ ವ್ಯತ್ಯಾಸ) ವಿಧಿಸಲಾಗುವುದಿಲ್ಲ.
2. ಎಲ್ಪಿಜಿ - ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಅಥವಾ ಎಲ್ಪಿಜಿ ಸತತ ಐದನೇ ತಿಂಗಳು ಬೆಲೆ ಏರಿಕೆ ಕಂಡಿದೆ. ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆಯನ್ನು ದೆಹಲಿಯಲ್ಲಿ 2019 ರ ಡಿಸೆಂಬರ್ನಲ್ಲಿ 695 ರೂ. ಇದ್ದ ದರವನ್ನು 714 ರೂ.ಗೆ ಏರಿಸಲಾಗಿದೆ. 19 ಕೆಜಿ ಸಿಲಿಂಡರ್ನ ಬೆಲೆ ಹಿಂದಿನ ತಿಂಗಳಲ್ಲಿ 1,211.50 ರೂ. ಇತ್ತು. ಇದರ ಬೆಲೆಯನ್ನು 29.50 ರೂ. ಏರಿಸಲಾಗಿದ್ದು 1,241 ರೂ.ಗೆ ಏರಿದೆ. ಮುಂಬೈಯಲ್ಲಿ, 14.2 ಕೆಜಿ ಎಲ್ಪಿಜಿ ಸಿಲಿಂಡರ್ಗೆ ಈಗ 695 ರೂಗಳ ಬದಲು 684.50 ರೂ. ಪಾವತಿಸಬೇಕಿದೆ.
3. ಕಾರುಗಳು - ಕೇವಲ ಅಗತ್ಯವಲ್ಲ, ಐಷಾರಾಮಿ ವಾಹನ ನಿಮಗೆ ಹೆಚ್ಚು ವೆಚ್ಚವಾಗುತ್ತದೆ. ಬಿಎಸ್-ವಿ ಅನುಷ್ಠಾನದಿಂದಾಗಿ ಮಾರುತಿ, ಟಾಟಾ ಮತ್ತು ಹ್ಯುಂಡೈ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ. ಮಹೀಂದ್ರಾ ಸಹ ಬೆಲೆಗಳನ್ನು ಹೆಚ್ಚಿಸಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಸೇವೆಗಳ ಹೊರತಾಗಿ, ಜನವರಿ 1, 2020 ರ ನಂತರ ಫಾಸ್ಟ್ಟ್ಯಾಗ್ ಇಲ್ಲದೆ ಚಲಿಸುವ ಪ್ರಯಾಣಿಕರಿಗೆ ಟೋಲ್ ಗೇಟ್ಗಳಲ್ಲಿ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚು ದಂಡ ವಿಧಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ ಹಾದಿಗಳಲ್ಲಿ ಫಾಸ್ಟ್ಯಾಗ್ ಅನ್ನು ಪೂರ್ಣವಾಗಿ ಜಾರಿಗೆ ತರಲು ಜನವರಿ 15, 2020 ರ ವರೆಗೆ ಗಡುವು ನಿಗದಿಪಡಿಸಲಾಗಿದೆ.
ರೆಫ್ರಿಜರೇಟರ್ಗಳು ಮತ್ತು ಎಸಿಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳು ಸಹ ದುಬಾರಿಯಾಗಲು ಸಜ್ಜಾಗಿದೆ. 5-ಸ್ಟಾರ್ ರೆಫ್ರಿಜರೇಟರ್ಗಳಲ್ಲಿ ನಿರ್ವಾತ ಫಲಕವನ್ನು ಅಳವಡಿಸಬೇಕಾಗಿರುವುದರಿಂದ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘದ ಸಿಯಾಮಾ ಪ್ರಕಾರ, ಬೆಲೆಗಳು ಕನಿಷ್ಠ 5,000 ರಿಂದ 6,000 ರೂ.ಗಳಷ್ಟು ಹೆಚ್ಚಾಗಬಹುದು.