Manisha Koirala : ಸೌಂದರ್ಯ ಮತ್ತು ನಟನೆಯಿಂದ ಜನರ ಮನ ಗೆದ್ದಿರುವ ಈ ನಟಿ ನೇಪಾಳದ ಮಾಜಿ ಪ್ರಧಾನಿ ಬಿಶೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಮೊಮ್ಮಗಳು. ಈ ನಟಿ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1991 ರಲ್ಲಿ ಸುಭಾಷ್ ಘಾಯ್ ನಿರ್ದೇಶನದ ಸೌದಾಗರ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಮನಿಶಾ ಕೊಯಿರಾಲಾ ಒಂದು ಕಾಲದಲ್ಲಿ ಬಾಲಿವುಡ್ ಆಳಿದ ನಟಿ. ಮೊದಲ ಚಿತ್ರದಿಂದಲೇ ರಾತ್ರೋರಾತ್ರಿ ಸೂಪರ್ಸ್ಟಾರ್ ಆದರು. ಸಂಜಯ್ ಲೀಲಾ ಬನ್ಸಾಲಿಯವರ ಖಾಮೋಶಿ ಚಿತ್ರದಿಂದ ಮನಿಷಾ ಉದ್ಯಮದಲ್ಲಿ ಅಗ್ರ ನಾಯಕಿ ಆದರು.
ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಸಿನಿಮಾದಿಂದಲೇ ಮನಿಷಾ ಲವ್ ಲೈಫ್ ಕೂಡ ಶುರುವಾಗಿತ್ತು. ಸುಭಾಷ್ ಘಾಯ್ ಅವರ 'ಸೌದಾಗರ್' ಚಿತ್ರದ ಸೆಟ್ನಲ್ಲಿ ವಿವೇಕ್ ಮತ್ತು ಮನಿಷಾ ಹತ್ತಿರವಾಗಿದ್ದರು ಎನ್ನಲಾಗುತ್ತದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತದೆ ಆದರೆ ಸ್ವಲ್ಪ ಸಮಯದ ನಂತರ ಈ ಸಂಬಂಧ ಕೊನೆಗೊಂಡಿತು.
ಹಿಂದಿ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಮತ್ತು ಮನಿಷಾ ನಡುವಿನ ಸಂಬಂಧದ ಸುದ್ದಿಯೂ ಚರ್ಚೆಯಲ್ಲಿತ್ತು. ವರದಿಗಳ ಪ್ರಕಾರ, ನಾನಾ ಪಾಟೇಕರ್ ಈ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು ಎನ್ನಲಾಗುತ್ತದೆ. ಆದರೆ ನಂತರ ಈ ಸಂಬಂಧ ಮುರಿದು ಬಿತ್ತು.
ನಾನಾ ಪಾಟೇಕರ್ ನಂತರ ಡಿಜೆ ಹುಸೇನ್ ಮನಿಷಾ ಜೀವನಕ್ಕೆ ಕಾಲಿಟ್ಟರು. ಡಿಜೆ ಕೂಡ ಮನಿಷಾಗೆ ಮದುವೆ ಪ್ರಸ್ತಾಪ ಮಾಡಿದ್ದರು ಆದರೆ ಕಾರಣಾಂತರಗಳಿಂದ ಬೇರ್ಪಟ್ಟರು. ಆ ಬಳಿಕ ಮನೀಶಾ ಲಂಡನ್ ಮೂಲದ ನೈಜೀರಿಯಾದ ಉದ್ಯಮಿ ಸೆಸಿಲ್ ಆಂಥೋನಿ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗುತ್ತದೆ. ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.
ಸೆಸಿಲ್ ನಂತರ ಮನಿಷಾ ಹೆಸರು ನಟ ಆರ್ಯನ್ ವೈದ್ ಜೊತೆ ತಳಕು ಹಾಕಿಕೊಂಡಿತು. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಆ ಬಳಿಕ ಪ್ರಶಾಂತ್ ಚೌಧರಿ ಜತೆ ಮನಿಷಾ ಸಂಬಂಧದ ವದಂತಿ ಹಬ್ಬಿತು. ಇದು ಕೂಡ ಅರ್ಧಕ್ಕೆ ಮುರಿದು ಬಿತ್ತು.
ನೇಪಾಳದಲ್ಲಿರುವ ಆಸ್ಟ್ರೇಲಿಯಾದ ರಾಯಭಾರಿ ಕ್ರಿಸ್ಪಿನ್ ಕಾನ್ರಾಯ್ ಅವರ ಹೆಸರೂ ಈ ಪಟ್ಟಿಯಲ್ಲಿ ಸೇರಿದೆ. ಮನೀಶಾ ಹೆಸರೂ ಕ್ರಿಸ್ಪಿನ್ ಕಾನ್ರಾಯ್ ಅವರನ್ನು ಪ್ರೀತಿಸುತ್ತಿದ್ದರು ಎನ್ನಲಾಗುತ್ತದೆ.
ಅಜೀಂ ಪ್ರೇಮ್ಜಿ ಅವರ ಮಗ ತಾರಿಕ್ ಪ್ರೇಮ್ಜಿಯೊಂದಿಗೆ ಮನಿಷಾ ಸಂಬಂಧವನ್ನು ಹೊಂದಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆ ಈ ಸಂಬಂಧವೂ ಯಶಸ್ವಿಯಾಗಲಿಲ್ಲ.
ಮನೀಶಾ ಮಾಡೆಲ್ ರಾಜೀವ್ ಮೂಲಚಂದನಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗುತ್ತದೆ. ಆದರೆ ಈ ಸಂಬಂಧವೂ ಹೆಚ್ಚು ದಿನ ನಡೆಯಲಿಲ್ಲ.
ಮನೀಶಾ ಸಂಗೀತ ಸಂಯೋಜಕ ಸಂದೀಪ್ ಚೌತಾ ಅವರೊಂದಿಗೆ ಡೇಟಿಂಗ್ ನಡೆಸಿದ್ದರು ಎನ್ನಲಾಗುತ್ತದೆ. ಸಂದೀಪ್ನಿಂದ ಬೇರ್ಪಟ್ಟ ತಕ್ಷಣ ಮನೀಶಾ ಕ್ರಿಸ್ಟೋಫರ್ ಡೋರಿಸ್ನನ್ನು ಪ್ರೀತಿಸುತ್ತಿದ್ದರು ಎನ್ನಲಾಗುತ್ತದೆ. ಕೆಲವು ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ, ಈ ಸಂಬಂಧವನ್ನು ಸಹ ಕೊನೆಗೊಂಡಿತು.
ಮನಿಶಾ ಕೊಯಿರಾಲಾ ನೇಪಾಳಿ ಉದ್ಯಮಿ ಸಾಮ್ರಾಟ್ ದಹಾಲ್ ಅವರನ್ನು 19 ಜೂನ್ 2010 ರಂದು ವಿವಾಹವಾದರು. ಆದರೆ ಈ ಮದುವೆಯು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ. 2012 ರಲ್ಲಿ ಮನೀಶಾ ಕೊಯಿರಾಲಾ ಮತ್ತು ಸಾಮ್ರಾಟ್ ವಿಚ್ಛೇದನ ಪಡೆದರು. ಇದೀಗ 52 ವರ್ಷದ ನಟಿ ಮನಿಶಾ ಕೊಯಿರಾಲಾ ಒಂಟಿ ಜೀವನ ನಡೆಸುತ್ತಿದ್ದಾರೆ.