ತುಟ್ಟಿಭತ್ಯೆ ಹೆಚ್ಚಳದ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮುನ್ನ ಮತ್ತೊಂದು ಶುಭ ಸುದ್ದಿ ಸಿಗಬಹುದು ಎನ್ನಲಾಗಿದೆ.
ದೇಶದ ಸುಮಾರು 50 ಲಕ್ಷ ಉದ್ಯೋಗಿಗಳಿಗೆ ಉಡುಗೊರೆ ನೀಡಲು ಹಣಕಾಸು ಇಲಾಖೆ ನಿರ್ಧರಿಸಿದೆ. ನೌಕರರ ವೇತನವನ್ನು 8000 ರೂ.ಗಳಷ್ಟು ಹೆಚ್ಚಿಸುವ ಕಡತ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.ಅಂದರೆ ಈಗ ಇರುವ 18000 ರೂ. ಮೂಲ ವೇತನವನ್ನು 26,000 ರೂಪಾಯಿಗೆ ಹೆಚ್ಚಿಸುವ ಚಿಂತನೆ ನಡೆದಿದೆ.
ಆದರೆ, ಮೂಲ ವೇತನ ಹೆಚ್ಚಳದ ಕುರಿತು ಸರ್ಕಾರ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.ಬಜೆಟ್ ನಲ್ಲಿ ಈ ಕುರಿತು ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಉದ್ಯೋಗಿಗಳ ವೇತನ ಹೆಚ್ಚಳವು ಫಿಟ್‌ಮೆಂಟ್ ಅಂಶವನ್ನು ಆಧರಿಸಿರುತ್ತದೆ. ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಮೂಲಕ ಮೂಲ ವೇತನವನ್ನು ಸಹ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ.ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶ ಹೆಚ್ಚಿಸಿದರೆ ಇನ್ ಹ್ಯಾಂಡ್ ಸ್ಯಾಲರಿ ಕೂಡಾ ಹೆಚ್ಚುತ್ತದೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶ ಶೇ.2.57ರಷ್ಟಿದೆ.ಇದರ ಆಧಾರದ ಮೇಲೆ ನೌಕರರಿಗೆ ವೇತನ ನೀಡಲಾಗುತ್ತದೆ.ಇದನ್ನು ಶೇ.3.68ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.2.57 ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನೌಕರರ ಕನಿಷ್ಠ ವೇತನ ರೂ.18,000. ಒಂದು ವೇಳೆ ಇದು 3.68ಕ್ಕೆ ಈರಿಕೆಯಾದರೆ ಕನಿಷ್ಠ ಮೂಲ ವೇತನವನ್ನು 26,000 ರೂಪಾಯಿಗೆ ಏರಿಸಲಾಗುವುದು.
ಫಿಟ್ ಮೆಂಟ್ ಫ್ಯಾಕ್ಟರ್ ಅನ್ನು 3.68 ಕ್ಕೆ ಹೆಚ್ಚಿಸಿದರೆ, ನೌಕರರ ಮೂಲ ವೇತನ 26,000 ರೂಪಾಯಿಗೆ ಏರಿಕೆಯಾಗಲಿದೆ.ಪ್ರಸ್ತುತ, ಉದ್ಯೋಗಿಯ ಕನಿಷ್ಠ ವೇತನವು 18,000 ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ 2.57 ರ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ 46,260 ರೂಪಾಯಿ (18,000 X 2.57 = 46,260) ಪಡೆಯುತ್ತಾನೆ. ಫಿಟ್‌ಮೆಂಟ್ ಅಂಶವನ್ನು 3.68 ಕ್ಕೆ ಹೆಚ್ಚಿಸಿದರೆ ವೇತನವು 95,680 ರೂ.ಗೆ ಏರುತ್ತದೆ (26000X3.68 = 95,680).
ಮೂಲಗಳ ಪ್ರಕಾರ, ಜುಲೈ 2024 ರಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ 4% ರಷ್ಟು ಹೆಚ್ಚಾಗುತ್ತದೆ. AICPI ಸೂಚ್ಯಂಕ ಡೇಟಾವನ್ನು ಆಧರಿಸಿ ಈ ಲೆಕ್ಕಾಚಾರ ನೀಡಲಾಗುತ್ತದೆ.
ಇದೇ ವೇಳೆ ಉದ್ಯೋಗಿಗಳಿಗೆ ಮತ್ತೊಂದು ಸಂತಸದ ಸುದ್ದಿ ಬಂದಿದೆ. ಕೊರೊನಾ ಅವಧಿಯಲ್ಲಿ ಸ್ಥಗಿತಗೊಂಡಿದ್ದ 18 ತಿಂಗಳ ಡಿಎ ಬಾಕಿ ಬಗ್ಗೆಯೂ ಮಾತುಕತೆ ಮತ್ತೆ ಆರಂಭವಾಗಿದೆ.ಕಾರ್ಮಿಕ ಸಂಘಟನೆಗಳ ಪರವಾಗಿ ಪ್ರಧಾನಿಗೆ ಪತ್ರ ನೀಡಲಾಗಿದೆ.
ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಪ್ರೀಮಿಯಂನಲ್ಲಿ ಯಾವುದೇ ಹೆಚ್ಚಳ ಅಥವಾ ವೇತನ ಹೆಚ್ಚಳದ ಯಾವುದೇ ಗ್ಯಾರಂಟಿ ಇಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.