ನವದೆಹಲಿ: ಈಗ ನೀವು ನಗರದಿಂದ ಹೊರಗೆ ಹೋಗಲು ಪ್ಲಾನ್ ಮಾಡಿದ್ದು, ನಿಮ್ಮ ಫಾಸ್ಟ್ಟ್ಯಾಗ್ನಲ್ಲಿ ಎಷ್ಟು ಹಣ ಉಳಿದಿದೆ ಎಂಬುದನ್ನು ನೀವು ಮರೆತಿದ್ದರೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಟೋಲ್ ಪ್ಲಾಜಾದಲ್ಲಿ ನಿಮ್ಮ ಪ್ರಯಾಣವನ್ನು ಸುಲಭಗೊಳಿಸಲು ಈಗ ಉತ್ತಮ ಸೌಲಭ್ಯ ಲಭ್ಯವಾಗಲಿದೆ. ಹೌದು, ಫಾಸ್ಟ್ಟ್ಯಾಗ್(FASTag) ಬಳಕೆದಾರರು ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.
ಈ ನಿಟ್ಟಿನಲ್ಲಿ, FASTag ಬಳಕೆದಾರರಿಗೆ ಸಂಬಂಧಿಸಿದ ಎನ್ಎಚ್ಎಐ ಪ್ರಿಪೇಯ್ಡ್ ವ್ಯಾಲೆಟ್ ಅನ್ನು ಗಮನದಲ್ಲಿರಿಸಿಕೊಳ್ಳುವ ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ (IHMCL) ಮಿಸ್ ಕಾಲ್ ಸೌಲಭ್ಯವನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ಗ್ರಾಹಕರು ತಮ್ಮ ರಿಜಿಸ್ಟ್ರಾರ್ ಮೊಬೈಲ್ನಿಂದ + 91-8884333331 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ FASTag ಬ್ಯಾಲೆನ್ಸ್ ಬಗ್ಗೆ ತಿಳಿದುಕೊಳ್ಳಬಹುದು.
ಪ್ರತಿ ಮೊಬೈಲ್ ಸಾಧನ ಮತ್ತು ಆಪರೇಟರ್ಗಳಿಗೆ ಸ್ನೇಹಪರವಾಗಿರುವ ಈ ಸೇವೆಯು 24X7 ಉಚಿತ ಸೌಲಭ್ಯವಾಗಿದೆ. ಅಲ್ಲದೆ ಇದಕ್ಕಾಗಿ ಇಂಟರ್ನೆಟ್ ಅಗತ್ಯವಿರುವುದಿಲ್ಲ.
ಒಂದಕ್ಕಿಂತ ಹೆಚ್ಚು ವಾಹನಗಳ ಸಂಖ್ಯೆಯನ್ನು ವಾಲೆಟ್ ಜೊತೆ ಜೋಡಿಸಿದರೆ ಏನು ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಿಸ್ಡ್ ಕಾಲ್ ನೀಡಿದ ನಂತರ ಎಲ್ಲಾ ವಾಹನಗಳ ಒಟ್ಟು ಬ್ಯಾಲೆನ್ಸ್ ಅನ್ನು ತಿಳಿಸಲಾಗುತ್ತದೆ. ಆದರೆ ಅದರ ನಂತರ, ಬ್ಯಾಲೆನ್ಸ್ ಕಡಿಮೆ ಇರುವ ವಾಹನದ ಬಗ್ಗೆ ನೋಂದಾಯಿತ ಮೊಬೈಲ್ಗೆ ಪ್ರತ್ಯೇಕ ಎಸ್ಎಂಎಸ್ ಕಳುಹಿಸಲಾಗುತ್ತದೆ. ಆದಾಗ್ಯೂ ಈ ಸೌಲಭ್ಯಗಳು ಅಂತಹ NHAI ಫಾಸ್ಟ್ಯಾಗ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತವೆ. ಅವರು NHAI ಪ್ರಿಪೇಯ್ಡ್ ವ್ಯಾಲೆಟ್ನೊಂದಿಗೆ ಸಂಬಂಧ ಹೊಂದಿದ್ದಾರೆ. ಇದರರ್ಥ ವಿವಿಧ ಬ್ಯಾಂಕುಗಳೊಂದಿಗೆ ಲಿಂಕ್ ಹೊಂದಿರುವಂತಹವರು NHAI FASTag ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.