Kannada Anchor Divya Alur Father Funeral: ಕನ್ನಡದ ಖ್ಯಾತ ನಿರೂಪಕಿ ದಿವ್ಯಾ ಆಲೂರು ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ತಾವೇ ನೆರವೇರಿಸಿದ್ದಾರೆ. ಹಿಂದೂ ಧರ್ಮದಲ್ಲಿ ಗಂಡು ಮಕ್ಕಳು ಮಾತ್ರ ಈ ಕಾರ್ಯ ಮಾಡುತ್ತಾರೆ. ಆದರೆ ದಿವ್ಯಾ ಅವರೇ ಅಂತ್ಯಕ್ರಿಯೆ ಮಾಡಿದ್ದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಗಂಡು ಮಕ್ಕಳಿಲ್ಲದ ಜಾನಪದ ಗಾಯಕ ಹಾಗೂ ಸಾಹಿತಿ ಆಲೂರು ನಾಗಪ್ಪನವರ ಅಂತ್ಯಸಂಸ್ಕಾರ ಮಾಡಿದ್ದು ಅವರ ಪುತ್ರಿ ನಿರೂಪಕಿ ಮತ್ತು ಗಾಯಕಿ ದಿವ್ಯಾ ಆಲೂರು. ತನ್ನ ಅಪ್ಪನ ಅಂತ್ಯಸಂಸ್ಕಾರ ನಾನೇ ಮಾಡಬೇಕು ಎಂದು ಹಠ ಹಿಡಿದು ಸಾಧಿಸಿದ ದಿವ್ಯಾರ ಬಗ್ಗೆ ಇದೀಗ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಇದನ್ನೂ ಓದಿ: 'ಆತ ತನ್ನ ಪ್ಯಾಂಟ್ ತೆಗೆದು.. ನನ್ನ ಕೈಯನ್ನು...' ಶಾಕಿಂಗ್ ಸಂಗತಿ ಬಿಚ್ಚಿಟ್ಟ ಖ್ಯಾತ ನಟಿ!!
ಜುಲೈ 23ರಂದು 74 ವರ್ಷದ ಆಲೂರು ನಾಗಪ್ಪನವರು ನಿಧನರಾಗಿದ್ದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಪ್ಪನವರು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಿಡದಿ ಪಕ್ಕದಶೆಟ್ಟಿ ಗೌಡನ ದೊಡ್ಡಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ದಿವ್ಯಾ ಅವರು, ʼಅಪ್ಪ ಇನ್ನಿಲ್ಲ ಎನ್ನೋ ಸತ್ಯ ಒಪ್ಪಿಕೊಳ್ಳಲು ಆಗ್ತಿಲ್ಲ. ಜನಪದ ಕ್ಷೇತ್ರದ ಬಹು ದೊಡ್ಡ ಕೊಂಡಿ ಕಳಚಿದೆ. ಎಚ್ಚರಾಗು ಕನ್ನಡಿಗ ಎಂದು ನಾಡಿನುದ್ದಕ್ಕೂ ಹಾಡಿದ್ದ, ಕನ್ನಡದ ಗಟ್ಟಿ ಧ್ವನಿ ಶಾಂತವಾಗಿದೆʼ ಎಂದು ಹೇಳಿದ್ದಾರೆ.
ʼಕಷ್ಟಕ್ಕೆ ಸುಖಕ್ಕೆ ಹೆಣ್ಣು ಮಕ್ಕಳು ಬೇಕು ಆದ್ರೆ.. ಅಂತ್ಯಸಂಸ್ಕಾರಕ್ಕೆ ಏಕೆ ಅಡ್ಡಿ... ಪಿಂಡ ಇಡದಕ್ಕಾದ್ರೂ ಗಂಡು ಮಗು ಬೇಕು ಅಂತಾನೇ ಹೆಣ್ಣು ಭ್ರೂಣ ಹತ್ಯೆ ಎಷ್ಟೋ ಕಡೆ ನಡೆದಿದೆ.. ಕಾಲ ಬದಲಾಗಿದೆ ನಾವು ಒಳ್ಳೆ ಬದಲಾವಣೆಗೆ ತೆರೆದುಕೊಳ್ಳೋಣ.. ನಾನು ಯಾವ ಸಂಪ್ರದಾಯದ ವಿರೋಧಿಯಲ್ಲ ಆದರೆ ನಮ್ಮಪ್ಪನ ಅಂತ್ಯ ಸಂಸ್ಕಾರ ಮಾಡೋದು ನನ್ನ ಹಕ್ಕು ಅನ್ನೋ ಧೃಡ ಭಾವನೆ ಉಳ್ಳವಳು ನಾನುʼ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ವೀರಕಪುತ್ರ ಶ್ರೀನಿವಾಸ್ ಪೋಸ್ಟ್
ʼತಂದೆಯ ಅಂತ್ಯಕ್ರಿಯೆ ನೆರವೇರಿಸಿದ ದಿವ್ಯಾ ಆಲೂರು ಅವರಿಗೆ ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಬೆಂಬಲ ನೀಡಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, ʼಗಂಡು ಮಕ್ಕಳಿಲ್ಲದ ಜಾನಪದ ಗಾಯಕ ಆಲೂರು ನಾಗಪ್ಪ ಅವರ ಅಂತ್ಯಸಂಸ್ಕಾರ ಮಾಡಿದ್ದು ಅವರ ಮಗಳು, ನಿರೂಪಕಿ, ಗಾಯಕಿ ದಿವ್ಯಾ ಆಲೂರು. ತನ್ನ ಅಪ್ಪನ ಅಂತ್ಯಸಂಸ್ಕಾರ ನಾನೇ ಮಾಡಬೇಕು ಎಂದು ಹಠ ಹಿಡಿದು ಸಾಧಿಸಿದ ದಿವ್ಯಾರ ಬಗ್ಗೆ ಗೌರವ ಬಂತು. ನೀ ಈ ಕೆಲಸ ಮಾಡಿದ್ರೆ ನಿನಗೆ ಕೆಟ್ಟದಾಗುತ್ತೆ ಅಂತ ಊರಿನ ಹಿರಿಯರು ಹೇಳಿದಾಗಲೂ, ಏನಾದ್ರೂ ಪರವಾಗಿಲ್ಲ ನಮ್ಮಪ್ಪನ ಅಂತ್ಯಸಂಸ್ಕಾರ ನಾನೇ ಮಾಡೋದು ಅಂತ ಹೇಳಿ ಮುಂದುವರಿದಿದ್ದಾರೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ʻಮೆಜೆಸ್ಟಿಕ್ 2ʼ ಸಿನಿಮಾದ ಐಟಂ ಸಾಂಗ್ ಶೂಟಿಂಗ್
ʼಹೆಣ್ಮಕ್ಕಳು ಅಂತ್ಯಸಂಸ್ಕಾರ ಕ್ರಿಯೆಗಳಲ್ಲಿ ಭಾಗವಹಿಸಬಾರದು ಅನ್ನೋ ಸಂಪ್ರದಾಯದ ಹಿಂದೆ ಅದೇನು ಕಾರಣ ಇದೆಯೋ ಕಾಣೆ; ಆದರೆ ಗಂಡು ಮಕ್ಕಳಿಲ್ಲದ ಕುಟುಂಬ ಇದೊಂದು ಕಾರಣಕ್ಕೆ ಹೆಚ್ಚಾಗಿ ಕೊರಗುವುದನ್ನು ಕಂಡಿದ್ದೇನೆ. ದಿವ್ಯಾರ ಈ ನಡೆ, ಅಂತಹ ಕುಟುಂಬಗಳಿಗೊಂದು ಧೈರ್ಯವಾಗಬಲ್ಲದು. ಈ ಹಿಂದೆಯೂ ಕೆಲವು ಹೆಣ್ಣುಮಕ್ಕಳು ಹೀಗೆ ಅಂತಿಮ ಸಂಸ್ಕಾರಕ್ಕೆ ಮುಂದಾಗಿದ್ದನ್ನು ಕಂಡಿದ್ದೇನೆ. ದಿವ್ಯಾರಂತಹ ಸಾರ್ವಜನಿಕ ಜೀವನದಲ್ಲಿರುವವರು ಇಂತಹ ಕೆಲಸಗಳಿಗೆ ಮುಂದಾದಾಗ ಅದು ಉಂಟುಮಾಡುವ ಸಾಮಾಜಿಕ ಪರಿಣಾಮ ಹೆಚ್ಚು. ಹೆತ್ತಪ್ಪನನ್ನು ಕಳೆದುಕೊಂಡ ದುಃಖದಲ್ಲಿರುವ ದಿವ್ಯಾ ಮತ್ತವರ ಕುಟುಂಬಕ್ಕೆ ಭಗವಂತ ಈ ದುಃಖ ಭರಿಸುವ ಶಕ್ತಿ ನೀಡಲಿ. ನಾಡಿನ ಹೆಮ್ಮೆಯ ಗಾಯಕರಾದ ಆಲೂರು ನಾಗಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿʼ ಎಂದು ಸಂತಾಪ ಸೂಚಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.