Anchor Anushree: ಆಂಕರ್‌ ಅನುಶ್ರೀ ಚಟಪಟ ಅಂತ ಅಚ್ಚಕನ್ನಡದಲ್ಲಿ ಮಾತನಾಡುವುದನ್ನು ಕಲಿತದ್ದು ʼಈʼ ವ್ಯಕ್ತಿಯಿಂದಲೇ! ಯಾರು ಗೊತ್ತಾ?

Anchor Anushree Life: ಪಟ ಪಟ ಪಟಾಕಿಯಂತೆ ಮಾತನಾಡುವ ಮೂಲಕ ಎಲ್ಲರಿಗೂ ಮೋಡಿ ಮಾಡಿದ ಕನ್ನಡದ ಚೆಲುವೆ ಆಂಕರ್‌ ಅನುಶ್ರೀ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ.. 
 

1 /8

ಕರಾವಳಿ ಬೆಡಗಿ ನಟಿ, ಆಂಕರ್‌ ಅನುಶ್ರೀ ಯಾರಿಗೆ ಗೊತ್ತಿಲ್ಲ ಹೇಳಿ.. ತಮ್ಮ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಿರುವ ಚೆಲುವೆ ಈಕೆ.. ಸ್ಟಾರ್‌ ಹಿರೋಯಿನ್‌ಗಳ ರೇಂಜ್‌ಗೆ ಕ್ರೇಜ್‌ ಪಡೆದುಕೊಂಡ ಜನಪ್ರಿಯ ನಿರೂಪಕಿ ಅನುಶ್ರೀ ಎಂದರೇ ತಪ್ಪಾಗುವುದಿಲ್ಲ..     

2 /8

ನಿರೂಪಕಿ ಅನುಶ್ರೀ ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿದ್ದಾರೆ.. ಅನೇಕ ಸಿನಿಮಾಗಳ ಆಡಿಯೋ ಲಾಂಚ್‌, ಫ್ರೀ ರಿಲೀಸ್‌ ಈವೆಂಟ್‌, ಹೀಗೆ ಹಲವಾರು ವೇದಿಕೆಗಳಲ್ಲಿ ತಮ್ಮ ಮಾತಿನಿಂದಲೇ ಎಲ್ಲರಿಗೂ ಮೋಡಿ ಮಾಡುತ್ತಿದ್ದಾರೆ..     

3 /8

ಇನ್ನು ನಟಿ, ಆಂಕರ್‌ ಅನುಶ್ರೀ ಯಾವುದೇ ಸಂದರ್ಶನಗಳಲ್ಲಿ ಭಾಗವಹಿಸುತ್ತಿರಲಿಲ್ಲ.. ಇತ್ತೀಚೆಗೆ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಅನುಶ್ರೀ ಭಾಗವಹಿಸಿದ್ದು ತಮ್ಮ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್‌ ವಿಚಾರಗಳನ್ನು ಹಂಚಿಕೊಂಡಿದ್ದಾರೆ..    

4 /8

ಸಂದರ್ಶನದಲ್ಲಿ ನೀವು ಹೆಚ್ಚು ಮಾತನಾಡುವುದನ್ನು ಕಲಿತದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ನೀಡಿದ ಅನುಶ್ರೀ ನನ್ನಪ್ಪನಿಂದ ಬಂದ ಒಂದೇ ಬಳುವಳಿ ಎಂದರೇ ಅದು ಹೆಚ್ಚು ಮಾತನಾಡುವುದು ಎಂದಿದ್ದಾರೆ.  

5 /8

"ನಾನು ಜಾಸ್ತಿ ಮಾತನಾಡುವುದನ್ನು ಕಲಿತದ್ದು ನನ್ನ ತಂದೆಯಿಂದ.. ಅವರು ಕಂಪನಿಯ ಮಾರ್ಕೆಟಿಂಗ್‌ನಲ್ಲಿ ಗೋಲ್ಡ್‌ ಮೆಡಲಿಸ್ಟ್‌ ಆಗಿದ್ದರು ಹೀಗಾಗಿ ಮಾತನಾಡುವ ಕಲೆ ಅವರಿಂದ ಒಲಿದಿದೆ" ಎಂದು ಅನುಶ್ರೀ ಹೇಳಿಕೊಂಡಿದ್ದಾರೆ..    

6 /8

ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಇತ್ತೀಚೆಗೆ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ..  

7 /8

ಈ ಹಿಂದೆಂದೂ ಎಲ್ಲಿಯೂ ಅನುಶ್ರೀ ತಮ್ಮ ತಂದೆಯ ಬಗ್ಗೆ ಮಾತನಾಡಿರಲಿಲ್ಲ.. ಅವರು ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ..     

8 /8

ಇನ್ನು ನಟಿ, ನಿರೂಪಕಿ ಅನುಶ್ರೀ ಅವರ ಮದುವೆ ಕುರಿತಾಗಿ ಸಾಕಷ್ಟು ಚರ್ಚೆಗಳು ಸೋಷಿಯಲ್‌ ಮಿಡಿಯಾದಲ್ಲಿ ನಡೆಯುತ್ತಿವೆ.. ಆದರೆ ಯಾವುದಕ್ಕೂ ನಟಿ ಪ್ರತಿಕ್ರಿಯೆ ನೀಡಿಲ್ಲ.. ಈ ಮಂಗಳೂರು ಚೆಲುವೆ ಯಾರನ್ನು ಮದುವೆ ಆಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ ಎಂದರೇ ತಪ್ಪಾಗುವುದಿಲ್ಲ.