Mahindra Thar ROXX Features : 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ,ಮಹೀಂದ್ರಾ ಥಾರ್ ಪ್ರಿಯರಿಗೆ ಉಡುಗೊರೆ ಸಿಕ್ಕಿದೆ. ಬಹಳ ದಿನಗಳಿಂದ ಜನರು 5 ಡೋರ್ ಥಾರ್ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದರು.ಜನರ ನಿರೀಕ್ಷೆ ಇದೀಗ ಮುಕ್ತಾಯವಾಗಿದೆ. ಜನರ ಮನ ಗೆದ್ದಿರುವ 5 ಡೋರ್ ಥಾರ್ ಅನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.ಹಾಗಿದ್ದರೆ ಥಾರ್ ರಾಕ್ಸ್ ಅನ್ನು ಖರೀದಿಸಲು ನೀವು ಎಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಹೀಂದ್ರಾ ಥಾರ್ ಬಿಡುಗಡೆ:
5 ಡೋರ್ ಥಾರ್ಗಾಗಿ ಜನರು ಬಹಳ ಸಮಯದಿಂದ ಕಾತರದಿಂದ ಕಾಯುತ್ತಿದ್ದರು. ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಹೀಂದ್ರಾ ಮಹೀಂದ್ರ ಥಾರ್ ROXX ಅನ್ನು ಬಿಡುಗಡೆ ಮಾಡಿದೆ. ಹೊಸ ಮಹೀಂದ್ರ ಥಾರ್ ಅನ್ನು ಸಂಪೂರ್ಣವಾಗಿ ಹೊಸ ಪ್ಲಾಟ್ಫಾರ್ಮ್ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಐಷಾರಾಮಿ ಮತ್ತು ಕಾರ್ಯಕ್ಷಮತೆಯೊಂದಿಗೆ ನಿರ್ಮಿಸಲಾಗಿದೆ.ಮಹೀಂದ್ರ ಥಾರ್ ಶಕ್ತಿಯುತ ಎಂಜಿನ್ ಜೊತೆಗೆ, ವಿಶ್ವ ದರ್ಜೆಯ NHV ಮತ್ತು ರಿಫೈನ್ಡ್ ರೈಡ್ ಕ್ವಾಲಿಟಿಯನ್ನು ಕಾಣಬಹುದು.
ಇದನ್ನೂ ಓದಿ : ಒಂದೇ ಏಟಿನಲ್ಲಿ Jio,Airtelನ ನಿದ್ದೆಗೆಡಿಸಿದ ಕಂಪನಿ !ಅಗ್ಗದ ಬೆಲೆಯಲ್ಲಿ ಸಿಗುತ್ತಿದೆ BSNL 4G
ಇದು ಥಾರ್ ರೋಕ್ಸ್ನ ಹೊಸ ಬೆಲೆ :
ಜನರು ಮಹೀಂದ್ರ ಥಾರ್ ಆರ್ಒಎಕ್ಸ್ಎಕ್ಸ್ನ ಬೆಲೆಯನ್ನು ತಿಳಿದುಕೊಳ್ಳುವ ಬಗ್ಗೆ ಹೆಚ್ಚು ಉತ್ಸಾಹಿತರಾಗಿದ್ದಾರೆ. ಥಾರ್ ರಾಕ್ಸ್ SUV ಯ ಹೊಸ ಬೆಲೆಯ ಕುರಿತು ಮಾತನಾಡುವುದಾದರೆ MX1 ಪೆಟ್ರೋಲ್ ಮ್ಯಾನುವಲ್ ರಿಯರ್ ವೀಲ್ ಡ್ರೈವ್ ರೂಪಾಂತರದ ಆರಂಭಿಕ ಎಕ್ಸ್ ಶೋ ರೂಂ ಬೆಲೆ 12.99 ಲಕ್ಷ ರೂ. ಇನ್ನು ಡೀಸೆಲ್ ಮ್ಯಾನುವಲ್ ರಿಯರ್ ವೀಲ್ ಡ್ರೈವ್ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 13.99 ಲಕ್ಷ ರೂ.ಮಹೀಂದ್ರ ಥಾರ್ ರಾಕ್ಸ್ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ.
ಹೊಸ ವೈಶಿಷ್ಟ್ಯ :
ಮಹೀಂದ್ರ ಥಾರ್ ರಾಕ್ಸ್ ಮೂರು ಎಂಜಿನ್ಗಳೊಂದಿಗೆ ಲಭ್ಯವಿದೆ. ಮೊದಲ ಎಂಜಿನ್ 2.2L mHawk ಡೀಸೆಲ್, ಎರಡನೇ ಎಂಜಿನ್ 2.0L mStallion ಮತ್ತು ಮೂರನೇ ಎಂಜಿನ್ 1.5L ಡೀಸೆಲ್. ಮಹೀಂದ್ರಾದ ಅಧಿಕೃತ ಮಾಹಿತಿಯ ಪ್ರಕಾರ, ಈ ಎಲ್ಲಾ ಎಂಜಿನ್ಗಳು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಪ್ರಸರಣ ಆಯ್ಕೆಯೊಂದಿಗೆ ಲಭ್ಯವಿರುತ್ತವೆ. ಇದರ ಹೊರತಾಗಿ, ಮಹೀಂದ್ರ ಥಾರ್ ROXX ನಲ್ಲಿ ಸನ್ರೂಫ್ ಮತ್ತು ಸ್ವಯಂಚಾಲಿತ ಹವಾಮಾನ ನಿಯಂತ್ರಣ, 360 ಡಿಗ್ರಿ ಕ್ಯಾಮೆರಾ, ಎಲ್ಲಾ ನಾಲ್ಕು ಬಾಗಿಲುಗಳಲ್ಲಿ ಪವರ್ ವಿಂಡೋ, ತ್ರೀ ಪಾಯಿಂಟ್ ಸೀಟ್ಬೆಲ್ಟ್ ಮತ್ತು 6 ಏರ್ಬ್ಯಾಗ್ಗಳನ್ನು ಹೊಂದಿದೆ.
ಇದನ್ನೂ ಓದಿ : ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.