Vodafone-Ideaದಿಂದ ಸ್ವಾತಂತ್ರ್ಯ ದಿನದ ಆಫರ್: 50GB ಡಾಟಾ ಜೊತೆಗೆ Amazon Prime, Disney Plus Hotstar ಫುಲ್ ಫ್ರೀ

Vodafone Idea Offer: ಜನಪ್ರಿಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೋಡಾಫೋನ್-ಐಡಿಯಾ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. ಈ ಯೋಜನೆಗಳಲ್ಲಿ ಅನೇಕ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆ ಸಂಪೂರ್ಣವಾಗಿ ಉಚಿತವಾಗಿದೆ. 

Written by - Yashaswini V | Last Updated : Aug 15, 2024, 03:56 PM IST
  • ವೊಡಾಫೋನ್ ಐಡಿಯಾ ತನ್ನ ಬಳಕೆದಾರರಿಗಾಗಿ ಪರಿಚಯಿಸಿರುವ ಈ ಸ್ವಾತಂತ್ರ್ಯ ದಿನದ ಕೊಡುಗೆಯು ಆಗಸ್ಟ್ 13ರಿಂದ ಆರಂಭವಾಗಿದೆ
  • ಬಳಕೆದಾರರು ಆಗಸ್ಟ್ 28, 2024ರವರೆಗೆ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.
  • ಇದರ ಅಡಿಯಲ್ಲಿ ಬಳಕೆದಾರರು ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಹಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.
Vodafone-Ideaದಿಂದ ಸ್ವಾತಂತ್ರ್ಯ ದಿನದ ಆಫರ್: 50GB ಡಾಟಾ ಜೊತೆಗೆ Amazon Prime, Disney Plus Hotstar ಫುಲ್ ಫ್ರೀ  title=

Vodafone Idea Independence Day Offer: ಇಂದು ಭಾರತದಾದ್ಯಂತ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಭಾರತದ ಪ್ರಸಿದ್ಧ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೋಡಾಫೋನ್-ಐಡಿಯಾ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದು, "ಇಂಡಿಪೆಂಡೆನ್ಸ್ ಡೇ ಆಫರ್" ಪರಿಚಯಿಸಿದೆ. ಇದರ ಅಡಿಯಲ್ಲಿ ಬಳಕೆದಾರರು ಅಮೆಜಾನ್ ಪ್ರೈಮ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಹಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಆದಾಗ್ಯೂ, ಕಂಪನಿಯ ಈ ಆಫರ್ ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. 

ವೊಡಾಫೋನ್ ಐಡಿಯಾ ಇಂಡಿಪೆಂಡೆನ್ಸ್ ಡೇ ಆಫರ್ (Vodafone Idea Independence Day Offer): 
ವೊಡಾಫೋನ್ ಐಡಿಯಾ ತನ್ನ ಬಳಕೆದಾರರಿಗಾಗಿ ಪರಿಚಯಿಸಿರುವ ಈ ಸ್ವಾತಂತ್ರ್ಯ ದಿನದ ಕೊಡುಗೆಯು ಆಗಸ್ಟ್ 13ರಿಂದ ಆರಂಭವಾಗಿದ್ದು, ಬಳಕೆದಾರರು ಆಗಸ್ಟ್ 28, 2024ರವರೆಗೆ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. 

ಪ್ರಿಪೇಯ್ಡ್ ಯೋಜನೆಗಳು (Prepaid Plans): 
ಇನ್ನೂ ವೋಡಾಫೋನ್-ಐಡಿಯಾದ ಇಂಡಿಪೆಂಡೆನ್ಸ್ ಡೇ ಕೊಡುಗೆ (Vodafone-Idea's Independence Day Offer) ಅಡಿಯಲ್ಲಿ ರೂ. 1749, ರೂ. 3499, ರೂ. 3624 ಮತ್ತು ರೂ. 3699 ರ ನಾಲ್ಕು ಪ್ರೀಪೆಯ್ಡ್ ಯೋಜನೆಗಳನ್ನು ಸೇರಿಸಲಾಗಿವೆ. ವಿಶೇಷವೆಂದರೆ ಇವೆಲ್ಲವೂ ಸಹ ದೀರ್ಘಾವಧಿಯ ಯೋಜನೆಗಳು. 

ಇದನ್ನೂ ಓದಿ- BSNL 4G:ಮೋದಿ ಸರ್ಕಾರದಿಂದ ಬಹು ದೊಡ್ಡ ಘೋಷಣೆ :ಬಿಎಸ್ಎನ್ಎಲ್ 4G ನೆಟ್ ವರ್ಕ್ ಆರಂಭ!

ವೊಡಾಫೋನ್ ಐಡಿಯಾ ಇಂಡಿಪೆಂಡೆನ್ಸ್ ಡೇ ಆಫರ್ ಪ್ರಯೋಜನಗಳು (Vodafone Idea Independence Day Offer Benefits) : 
* ವೊಡಾಫೋನ್ ಐಡಿಯಾ ರೂ. 1749 ಯೋಜನೆ (Vodafone Idea Rs. 1749 Plan) : 

ವೊಡಾಫೋನ್ ಐಡಿಯಾದ (Vodafone-Idea)  ರೂ. 1749 ರ ಯೋಜನೆಯು ಆರು ತಿಂಗಳವರೆಗೆ ಅರ್ಥಾತ್ 180 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಬಳಕೆದಾರರಿಗೆ ಅನ್ಲಿಮಿಟೆಡ್ ಕರೆ, ನಿತ್ಯ 100 ಉಚಿತ ಎಸ್‌ಎಮ್‌ಎಸ್, ಪ್ರತಿದಿನ 1.5ಜಿಬಿ ಡೇಟಾ ಲಭ್ಯವಿರುತ್ತದೆ. ಇದಲ್ಲದೆ, ಈ ವಿಶೇಷ ಕೊಡುಗೆಯಲ್ಲಿ 30ಜಿಬಿ ಹೆಚ್ಚುವರಿ ಡೇಟಾ ಸೌಲಭ್ಯವೂ ಲಭ್ಯವಾಗಲಿದೆ. 

*  ವೊಡಾಫೋನ್ ಐಡಿಯಾ ರೂ. 3499 ಯೋಜನೆ (Vodafone Idea Rs. 3499 Plan): 
ವೊಡಾಫೋನ್ ಐಡಿಯಾದ ರೂ. 3499ಪ್ಲಾನ್‌ನ ಮಾನ್ಯತೆ 365 ದಿನಗಳು. ಈ ಯೋಜನೆಯಲ್ಲಿ, ಬಳಕೆದಾರರು ಅನಿಯಮಿತ ಕರೆಯೊಂದಿಗೆ ಪ್ರತಿದಿನ 100 ಫ್ರೀ ಎಸ್‌ಎಮ್‌ಎಸ್ ಮತ್ತು ದೈನಂದಿನ 1.5ಜಿಬಿ ಡೇಟಾವನ್ನು ಆನಂದಿಸಬಹುದು. ಸ್ವಾತಂತ್ರ್ಯ ದಿನದ ವಿಶೇಷ ಸಂದರ್ಭದಲ್ಲಿ ವಿಐ ಕಂಪನಿಯು ಈ ಯೋಜನೆಯೊಂದಿಗೆ ತನ್ನ ಬಳಕೆದಾರರಿಗೆ 50ಜಿಬಿ ಹೆಚ್ಚುವರಿ ಡೇಟಾ ಸೌಲಭ್ಯವನ್ನು ನೀಡುತ್ತಿದೆ. ಇದು 90 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.

*  ವೊಡಾಫೋನ್ ಐಡಿಯಾ ರೂ. 3624 ಯೋಜನೆ (Vodafone Idea Rs. 3624 Plan): 
ಈವೊಡಾಫೋನ್ ಐಡಿಯಾದ ರೂ. 3624 ಯೋಜನೆ ಕೂಡ ವಾರ್ಷಿಕ ಯೋಯಿಜನೆಯಾಗಿದ್ದು ಇದರ ಮಾನ್ಯತೆ 365 ದಿನಗಳು. ಇದರಲ್ಲಿ ಬಳಕೆದಾರರಿಗೆ ಅನ್ಲಿಮಿಟೆಡ್ ಕರೆ, ನಿತ್ಯ 100 ಉಚಿತ ಎಸ್‌ಎಮ್‌ಎಸ್, ಪ್ರತಿದಿನ 1.5ಜಿಬಿ ಡೇಟಾ ಲಭ್ಯವಿರುತ್ತದೆ.ಜೊತೆಗೆ ಹೆಚ್ಚುವರಿಯಾಗಿ ಮೂರು ತಿಂಗಳವರೆಗೆ  50 ಜಿಬಿ ಡೇಟಾ ಕೂಡ ದೊರೆಯಲಿದೆ. ಅಷ್ಟೇ ಅಲ್ಲದೆ, ಬಳಕೆದಾರರು ಒಂದು ವರ್ಷದವರೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಮೊಬೈಲ್ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತಾರೆ.

ಇದನ್ನೂ ಓದಿ- ವಿಶ್ವದಲ್ಲೇ ಅತಿ ವೇಗದ ಮೊಬೈಲ್ ಇಂಟರ್ನೆಟ್ ಹೊಂದಿರುವ ಟಾಪ್‌ 10 ದೇಶಗಳಿವು: ಭಾರತ ಎಷ್ಟನೇ ಸ್ಥಾನದಲ್ಲಿದೆ?

* ವೊಡಾಫೋನ್ ಐಡಿಯಾ ರೂ. 3699 ಯೋಜನೆ (Vodafone Idea Rs. 3699 Plan): 
ವೊಡಾಫೋನ್ ಐಡಿಯಾ ರೂ. 3699 ರ ಪ್ಲಾನ್‌ ಕೂಡ ವಾರ್ಷಿಕ ಯೋಜನೆಯಾಗಿದೆ. ಇದರ ಮಾನ್ಯತೆಯು 365 ದಿನಗಳು. ಸ್ವಾತಂತ್ರ್ಯದ ಸಂದರ್ಭದಲ್ಲಿ, ಕಂಪನಿಯು 90 ದಿನಗಳ ಮಾನ್ಯತೆಯೊಂದಿಗೆ ಈ ಯೋಜನೆಯೊಂದಿಗೆ ತನ್ನ ಬಳಕೆದಾರರಿಗೆ 50ಜಿಬಿ  ಹೆಚ್ಚುವರಿ ಡೇಟಾವನ್ನು ಒದಗಿಸುತ್ತಿದೆ. ಇದಲ್ಲದೆ, ಬಳಕೆದಾರರು ಒಂದು ವರ್ಷದವರೆಗ್ ಅಮೆಜಾನ್ ಪ್ರೈಮ್ ವೀಡಿಯೊದ ಮೊಬೈಲ್ ಚಂದಾದಾರಿಕೆಯನ್ನು ಉಚಿತವಾಗಿ ಆನಂದಿಸಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News