Xiaomi X Pro QLED : Xiaomi ಭಾರತೀಯ ಮಾರುಕಟ್ಟೆಯಲ್ಲಿ Xiaomi X Pro QLED ಸರಣಿಯನ್ನು ಬಿಡುಗಡೆ ಮಾಡಿದೆ.ಈ ಶ್ರೇಣಿಯು 43 ಇಂಚು,55 ಇಂಚು ಮತ್ತು 65 ಇಂಚಿನ ಟಿವಿಗಳನ್ನು ಒಳಗೊಂಡಿದೆ.ಉತ್ತಮ ಗುಣಮಟ್ಟದ ಚಿತ್ರಕ್ಕಾಗಿ ಈ ಸ್ಮಾರ್ಟ್ ಟಿವಿಗಳಲ್ಲಿ ಕ್ವಾಂಟಮ್ ತಂತ್ರಜ್ಞಾನವನ್ನು ಒದಗಿಸಲಾಗಿದೆ.ಈ ಸ್ಮಾರ್ಟ್ ಟಿವಿಗಳು ಶಕ್ತಿಯುತ ಸ್ಪೀಕರ್ಗಳನ್ನು ಹೊಂದಿದ್ದು, ಇದರಿಂದ ಸೂಪರ್ ಸೌಂಡ್ ಹೊರ ಹೊಮ್ಮುತ್ತದೆ. Xiaomiಯ ಹೊಸ ಸ್ಮಾರ್ಟ್ ಟಿವಿಗಳ ವೈಶಿಷ್ಟ್ಯಗಳು ಮತ್ತು ಬೆಲೆಯ ಸಂಪೂರ್ಣ ವಿವರ ಇಲ್ಲಿದೆ.
Xiaomi X Pro QLED ಸೀರಿಸ್ ವಿಶೇಷಣಗಳು :
Xiaomi X Pro QLED ಸರಣಿಯು 43,55 ಮತ್ತು 65 ಇಂಚಿನ ಟಿವಿಗಳನ್ನು ಹೊಂದಿದೆ.ಈ ಎಲ್ಲಾ ಟಿವಿಗಳ ಡಿಸ್ಪ್ಲೇ ರೆಸಲ್ಯೂಶನ್ 3840 × 2160 ಪಿಕ್ಸೆಲ್ಗಳು. ಈ ಶ್ರೇಣಿಯ 43 ಮತ್ತು 55-ಇಂಚಿನ ಟಿವಿಗಳು ವಿವಿಡ್ ಪಿಕ್ಚರ್ ಎಂಜಿನ್ ಹೊಂದಿದ್ದರೆ, 65-ಇಂಚಿನ ಮಾದರಿಯು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ.
ಇದನ್ನೂ ಓದಿ : ಪಾತಾಳಕ್ಕೆ ಇಳಿಯಿತು iPhone 15 Plus ಬೆಲೆ ! 18 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್
ಸುಗಮ ಕಾರ್ಯನಿರ್ವಹಣೆಗಾಗಿ,ಹೊಸ ಸ್ಮಾರ್ಟ್ ಟಿವಿ ಕ್ವಾಡ್ ಕೋರ್ ಪ್ರೊಸೆಸರ್ ಮತ್ತು Mali G52 MC1 GPU ಅನ್ನು ಹೊಂದಿದೆ.ಇವು 2GB RAM ಮತ್ತು 32GB ಸ್ಟೋರೇಜ್ ಹೊಂದಿವೆ.ಈ ಟಿವಿಗಳು ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತವೆ.
ಕನೆಕ್ಟಿವಿಟಿ ಮತ್ತು ಇತರ ವಿವರಗಳು :
Xiaomiನ ಹೊಸ ಸ್ಮಾರ್ಟ್ ಟಿವಿ ಸರಣಿಯು ವೈ-ಫೈ, 2×2 MIMO, ಬ್ಲೂಟೂತ್ 5.0, 3 HDMI, USB 2.0 ಮತ್ತು ಈಥರ್ನೆಟ್ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.Mi Voice Remote, Netflix, Prime Video, Hotstar, YouTube ಮತ್ತು Sony Liv ನಂತಹ OTT ಅಪ್ಲಿಕೇಶನ್ಗಳು ಈ ಸರಣಿಗಳ ಟಿವಿಗಳಲ್ಲಿ ಕಂಡು ಬರುತ್ತವೆ. ಇದು ಡಾಲ್ಬಿ ಆಡಿಯೋ, DTS-X ಮತ್ತು ವರ್ಚುವಲ್ X ಅನ್ನು ಬೆಂಬಲಿಸುವ ಎರಡು ಸ್ಪೀಕರ್ಗಳನ್ನು ಹೊಂದಿದೆ.
ಇದನ್ನೂ ಓದಿ : BSNL 4G: ಏರ್ಟೆಲ್, ಜಿಯೋಗೆ ಟಕ್ಕರ್, ₹ 150ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಬಿಎಸ್ಎನ್ಎಲ್ ಜಬರ್ದಸ್ತ್ ಪ್ಲಾನ್!
ಸ್ಮಾರ್ಟ್ ಟಿವಿಯ ಬೆಲೆ :
ಟೆಕ್ ದೈತ್ಯ Xiaomi ಪ್ರಕಾರ,43 ಇಂಚಿನ ಮತ್ತು 55 ಇಂಚಿನ Xiaomi X Pro QLED ಟಿವಿಯ ಬೆಲೆಯನ್ನು ಕ್ರಮವಾಗಿ 34,999 ಮತ್ತು 49,999 ರೂಪಾಯಿ ಎಂದು ನಿಗದಿಪಡಿಸಲಾಗಿದೆ.ಇದರ 65 ಇಂಚಿನ ಟಿವಿಯ ಬೆಲೆ 62,999 ರೂ. ಆಗಿದೆ. ಆಗಸ್ಟ್ 30,2024 ರಿಂದ ಆನ್ಲೈನ್ ಶಾಪಿಂಗ್ ವೆಬ್ಸೈಟ್ Amazon India ಮತ್ತು ಅಧಿಕೃತ ವೆಬ್ಸೈಟ್ನಲ್ಲಿ ಈ ಟಿವಿಯ ಮಾರಾಟ ಪ್ರಾರಂಭವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.