Money Making Tips: ನಿಮ್ಮ ಮನೆಯ ಮೇಲ್ಛಾವಣಿಯ ಖಾಲಿಯಾಗಿದ್ದರೆ ಆ ಜಾಗ ಅಥವಾ ತೆರೆದ ಸ್ಥಳವೇ ಅಮೂಲ್ಯ ಆಸ್ತಿಯಾಗಬಲ್ಲದು. ಆ ಸ್ಥಳಗಳನ್ನು ಬಳಸಿಕೊಂಡು, ಕಡಿಮೆ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಗಳಿಸಬಹುದು. ಆ ಸ್ಥಳಗಳಲ್ಲಿ ಮೊಬೈಲ್ ಟವರ್ಗಳನ್ನು ಸ್ಥಾಪಿಸುವ ಮೂಲಕ ಪ್ರತಿ ತಿಂಗಳು 10 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಬಾಡಿಗೆ ರೂಪದಲ್ಲಿ ಹಣ ಗಳಿಸಬಹುದು.
ನೀವು ನೇರವಾಗಿ ಮೊಬೈಲ್ ಟವರ್ ಸ್ಥಾಪನೆ (Installation of Mobile Tower) ಕಂಪನಿಗಳನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಆಸ್ತಿಯಲ್ಲಿ ಮೊಬೈಲ್ ಟವರ್ಗಳನ್ನು ನೀವೇ ಸ್ವತಃ ಸ್ಥಾಪಿಸಬಹುದು. ನೀವು ಎಷ್ಟು ಹಣವನ್ನು ಪಡೆಯುತ್ತೀರಿ ಎಂಬುದು ಆ ಜಾಗದ ಗಾತ್ರ ಮತ್ತು ಸ್ಥಳದಿಂದ ನಿರ್ಧಾರಿತವಾಗುತ್ತದೆ. ಒಂದೊಮ್ಮೆ ಅಲ್ಲಿ ಯಾವುದೇ ರೀತಿಯ ಅಪಾಯಕಾರಿ ಪರಿಸ್ಥಿತಿ ಇಲ್ಲದಿದ್ದರೆ ನಿಮಗೆ ಹೆಚ್ಚಿನ ದುಡ್ಡು ಲಭಿಸುತ್ತದೆ.
ಇದನ್ನೂ ಓದಿ- Post Office Scheme: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000ಕ್ಕೂ ಅಧಿಕ ಆದಾಯ ಸಿಗುತ್ತೆ!
ಎಷ್ಟು ವಿಸ್ತಿರ್ಣದ ಜಾಗ ಇರಬೇಕು?:
2000 ಚದರ ಅಡಿ ಖಾಲಿ ಜಾಗದಲ್ಲಿ ಮೊಬೈಲ್ ಟವರ್ ಅಳವಡಿಸಬಹುದು. ನಿಮ್ಮ ಕಟ್ಟಡದ ಮೇಲ್ಛಾವಣಿಯ ಮೇಲೆ ಟವರ್ ಅನ್ನು ಸ್ಥಾಪಿಸಬೇಕಾದರೆ, ಕನಿಷ್ಠ 500 ಚದರ ಅಡಿ ಜಾಗದ ಅಗತ್ಯವಿದೆ. ನೀವು ವಸತಿ ಆಸ್ತಿಯಲ್ಲಿ ಮೊಬೈಲ್ ಟವರ್ (Mobile Tower) ಅನ್ನು ಸ್ಥಾಪಿಸಲು ಬಯಸಿದರೆ, ಕಟ್ಟಡವು ರಚನಾತ್ಮಕ ಸುರಕ್ಷತಾ ಪ್ರಮಾಣಪತ್ರವನ್ನು ಹೊಂದಿರುವುದು ಅವಶ್ಯಕ. ಇದಕ್ಕೂ ಮೊದಲು ನೀವು ನಿರ್ಮಿಸಲು ಉದ್ದೇಶಿಸಿರುವ ಟವರ್, ಆಸ್ಪತ್ರೆಗಳು, ಶಾಲೆಗಳು ಅಥವಾ ಸಂಸ್ಥೆಗಳ 100 ಮೀಟರ್ಗಳ ಒಳಗೆ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
ದೇಶಾದ್ಯಂತ ತಮ್ಮ ಸೇವೆಗಳನ್ನು ವಿಸ್ತರಿಸಲು ಬಯಸುವ ಟೆಲಿಕಾಂ ಸೇವಾ ಪೂರೈಕೆದಾರರು ಮೊಬೈಲ್ ಟವರ್ (Mobile Tower) ಸ್ಥಾಪನೆ ಸೇವೆಗಳನ್ನು ಒದಗಿಸುತ್ತಾರೆ. ನೀವು ನೇರವಾಗಿ ಈ TSP ಕಂಪನಿಗಳನ್ನು ಸಂಪರ್ಕಿಸಬಹುದು ಮತ್ತು ಮೊಬೈಲ್ ಟವರ್ಗಳನ್ನು ಸ್ಥಾಪಿಸಲು ನಿಮ್ಮ ಆಸ್ತಿಯನ್ನು ಬಾಡಿಗೆಗೆ ನೀಡಲು ಪ್ರಸ್ತಾಪಿಸಬಹುದು. MTNL, Tata Communication, GTL Infrastructure, Indus Towers, American Tower Company India Limited, HFCL Connect Infrastructure ನಂತಹ ಕಂಪನಿಗಳಲ್ಲಿ ಇಂತಹ ಅವಕಾಶ ಇದೆ ಎನ್ನುವುದು ತಿಳಿದುಬಂದಿದೆ.
ಇದನ್ನೂ ಓದಿ- ಭಾರತೀಯ ರೈಲ್ವೇ: ಪ್ಯಾಸೆಂಜರ್ ರೈಲಿನಿಂದ ಸೂಪರ್ಫಾಸ್ಟ್ವರೆಗೆ ಯಾವ ಬಣ್ಣ ಏನನ್ನು ಸೂಚಿಸುತ್ತೆ? ಯಾವುದು ಹೆಚ್ಚು ಸೇಫ್!
ಟವರ್ ನಿರ್ಮಿಸುವ ಪ್ರಕ್ರಿಯೆ ಹೇಗಿರಲಿದೆ?
ಟೆಲಿಕಾಂ ಕಂಪನಿಗಳಿಗೆ ನಿಮ್ಮ ಆಸ್ತಿಯ ಬಗ್ಗೆ ಮಾಹಿತಿಯನ್ನು ಒದಗಿಸಿ ಮತ್ತು ತಪಾಸಣೆಗೆ ಅವರನ್ನು ಆಹ್ವಾನಿಸಬೇಕು. ರೇಡಿಯೋ ತರಂಗಾಂತರದ ದೃಷ್ಟಿಕೋನದಿಂದ ನಿಮ್ಮ ಆಸ್ತಿ ಸೂಕ್ತ ಸ್ಥಳವಾಗಿದ್ದರೆ ತಪಾಸಣೆ ನಡೆಸಲು ಕಂಪನಿಗಳು ಕೂಡ ನಿಮ್ಮನ್ನು ಸಂಪರ್ಕಿಸಬಹುದು. ಸೈಟ್ ಪರಿಶೀಲನೆಯ ನಂತರ ಮತ್ತು ಕೆಲವು ಒಪ್ಪಂದಕ್ಕೆ (MoUs) ಸಹಿ ಹಾಕಬೇಕಾಗುತ್ತದೆ ಮತ್ತು ನಂತರ ನಿಮ್ಮ ಆಸ್ತಿಯನ್ನು TSP ಗೆ ಬಾಡಿಗೆಗೆ ನೀಡಲಾಗುತ್ತದೆ.
ವೆಚ್ಚ ಮತ್ತು ಲಾಭ:
ಮೊಬೈಲ್ ಟವರ್ ಅನ್ನು ಸ್ಥಾಪಿಸಲು ನೀವು ಯಾವುದೇ ಹೂಡಿಕೆ ಮಾಡಬೇಕಾಗಿಲ್ಲ. ನಿಮ್ಮ ಆಸ್ತಿಯ ಸ್ಥಳ, ಎತ್ತರ ಮತ್ತು ಗಾತ್ರವನ್ನು ಅವಲಂಬಿಸಿ, ನೀವು ಗ್ರಾಮೀಣ ಅಥವಾ ನಗರ ಸ್ಥಳಗಳಲ್ಲಿ ತಿಂಗಳಿಗೆ ರೂ 10,000 ರಿಂದ ರೂ 1 ಲಕ್ಷದವರೆಗೆ ಬಾಡಿಗೆ ಪಡೆಯಬಹುದು. ಮೆಟ್ರೋ ನಗರಗಳಲ್ಲಿ ಮೊಬೈಲ್ ಟವರ್ ಬಾಡಿಗೆ ಪ್ರಮಾಣವು ಹೆಚ್ಚಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.