2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್!‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್

Akashdeep 2 wickets for 2 balls: ಆಕಾಶ್ ದೀಪ್ ಚೆಪಾಕ್ʼನಲ್ಲಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ್ದು ಸುಳ್ಳಲ್ಲ. ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ʼನಲ್ಲಿ ಸತತ ಎರಡು ಎಸೆತಗಳಲ್ಲಿ ಜಾಕಿರ್ ಹಸನ್ ಮತ್ತು ಮೊಮಿನುಲ್ ಹಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದರು.  

Written by - Bhavishya Shetty | Last Updated : Sep 20, 2024, 12:21 PM IST
    • ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಸರಣಿ ಆರಂಭ
    • ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾಗೆ ಡಬಲ್‌ ಶಾಕ್‌
    • ಬುಮ್ರಾ ನಂತರ ಆಕಾಶ್ ದೀಪ್ ಬಾಂಗ್ಲಾದೇಶದ ಅಗ್ರ ಬ್ಯಾಟಿಂಗ್‌ʼಗೆ ಸಿಂಹಸ್ವಪ್ನವಾಗಿ ಕಾಡಿದರು
2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್!‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್  title=
Akash Deep

Akash Deep 2 Wickets in 2 Ball: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಸರಣಿ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯ ಚೆನ್ನೈ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ʼನಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್‌ʼಗೆ ಇಳಿದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಮೊದಲ ಇನ್ನಿಂಗ್ಸ್ 376 ರನ್‌ʼಗಳಿಗೆ ಕೊನೆಗೊಂಡಿತು. ಆರು ವಿಕೆಟ್‌ʼಗೆ 339 ರನ್‌ʼಗಳ ಮುನ್ನಡೆಯೊಂದಿಗೆ ಎರಡನೇ ದಿನ ಅಂದರೆ ಇಂದು ಶುಕ್ರವಾರ ಆಟ ಆರಂಭಿಸಿದ ಟೀಮ್ ಇಂಡಿಯಾ 37 ರನ್ ಗಳಿಸುವಷ್ಟರಲ್ಲಿ ಉಳಿದ ನಾಲ್ಕು ವಿಕೆಟ್‌ʼಗಳನ್ನು ಕಳೆದುಕೊಂಡಿತು.

ಇದನ್ನೂ ಓದಿ:  6 ಎಸೆತಕ್ಕೆ 6 ಸಿಕ್ಸರ್‌... ಟೆಸ್ಟ್‌ ಕ್ರಿಕೆಟ್‌ʼನಲ್ಲಿ ವಿಶ್ವದಾಖಲೆ ಬರೆದ ಆರ್‌ ಅಶ್ವಿನ್! ಈ ದಿಗ್ಗಜನ ಸಮ ನಿಂತೇಬಿಟ್ರು ಭಾರತದ ಸ್ಪಿನ್ ಮಾಸ್ಟರ್

ಆಕಾಶ್ ದೀಪ್ ಅಬ್ಬರ
ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಅನ್ನು ಆರಂಭಿಕರಾದ ಶದ್ಮನ್ ಇಸ್ಲಾಂ ಮತ್ತು ಜಾಕಿರ್ ಹಸನ್ ಆರಂಭಿಸಿದರು. ಭಾರತ ಪರ ಜಸ್ಪ್ರೀತ್ ಬುಮ್ರಾ ಮೊದಲ ಓವರ್ ಬೌಲ್ ಮಾಡಿ, ಬಾಂಗ್ಲಾ ಆಟಗಾರರಿಗೆ ನಡುಕ ಹುಟ್ಟಿಸಿದ್ದರು. ಅಷ್ಟೇ ಅಲ್ಲದೆ, ಬುಮ್ರಾ ಓವರ್‌ʼನ ಕೊನೆಯ ಎಸೆತದಲ್ಲಿ ಶದ್ಮನ್ ಇಸ್ಲಾಂ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಬುಮ್ರಾ ನಂತರ ಆಕಾಶ್ ದೀಪ್ ಬಾಂಗ್ಲಾದೇಶದ ಅಗ್ರ ಬ್ಯಾಟಿಂಗ್‌ʼಗೆ ಸಿಂಹಸ್ವಪ್ನವಾಗಿ ಕಾಡಿದರು.

ಆಕಾಶ್ ದೀಪ್ ಚೆಪಾಕ್ʼನಲ್ಲಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ್ದು ಸುಳ್ಳಲ್ಲ. ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ʼನಲ್ಲಿ ಸತತ ಎರಡು ಎಸೆತಗಳಲ್ಲಿ ಜಾಕಿರ್ ಹಸನ್ ಮತ್ತು ಮೊಮಿನುಲ್ ಹಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದರು.

ಇನ್ನು ಟೆಸ್ಟ್‌ ಆರಂಭದ ದಿನ ನಾಯಕ ರೋಹಿತ್ ಶರ್ಮಾ (6), ಶುಭಮನ್ ಗಿಲ್ (0), ಮತ್ತು ವಿರಾಟ್ ಕೊಹ್ಲಿ (6) ಕಳಪೆ ಪ್ರದರ್ಶನ ತೋರಿದ್ದರು. ಯುವ ಬೌಲರ್ ಹಸನ್ ಮಹಮೂದ್ ಇವರನ್ನೆಲ್ಲಾ ಪೆವಿಲಿಯನ್ʼಗೆ ಕಳುಹಿಸುವ ಮೂಲಕ ಟೀಂ ಇಂಡಿಯಾಗೆ ಆಘಾತ ನೀಡಿದ್ದರು. ಇದಾದ ಬಳಿಕ ಯಶಸ್ವಿ ಜೈಸ್ವಾಲ್ (56) ಮತ್ತು ರಿಷಬ್ ಪಂತ್ (39) ಇನಿಂಗ್ಸ್ ಕೈಗೆತ್ತಿಕೊಂಡು ಅರ್ಧಶತಕದ ಜೊತೆಯಾಟ ನೀಡಿದರೂ ಭಾರತ ತಂಡ 144 ರನ್ʼಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಎಲ್ ರಾಹುಲ್ ಕೂಡ ಕೇವಲ 16 ರನ್ ಗಳಿಸಿ ವಿಫಲರಾದರು.

ಇದನ್ನೂ ಓದಿ: ಟಿ20 ಕ್ರಿಕೆಟ್ʼನಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಒಬ್ಬನೇ ಒಬ್ಬ ಆಟಗಾರ ಯಾರು ಗೊತ್ತಾ? ಈತ ಭಾರತದವನೇ... 39 ಸಿಕ್ಸರ್‌, 14 ಬೌಂಡರಿ ಬಾರಿಸಿದ್ದ ಸ್ಟಾರ್‌ ಕ್ರಿಕೆಟಿಗನೀತ

ಬಳಿಕ ರವೀಂದ್ರ ಜಡೇಜಾ (86) ಹಾಗೂ ರವಿಚಂದ್ರನ್ ಅಶ್ವಿನ್ (113) ಅಮೋಘ ಬ್ಯಾಟಿಂಗ್ ನಡೆಸಿ 195 ರನ್ ಗಳ ದಾಖಲೆ ಜತೆಯಾಟದ ಮೂಲಕ ತಂಡವನ್ನು 300ರ ಗಡಿ ದಾಟಿಸಿದರು. ಮೊದಲ ದಿನ ಅಶ್ವಿನ್ ಶತಕ ಸಿಡಿಸಿದರೆ, ಎರಡನೇ ದಿನ ಜಡೇಜಾ 86 ರನ್ ಗಳಿಸಿ ಔಟಾದರು. ಇದರೊಂದಿಗೆ ಭಾರತದ ಇನ್ನಿಂಗ್ಸ್ 91.2 ಓವರ್‌ʼಗಳಲ್ಲಿ 376 ರನ್‌ʼಗಳಿಗೆ ಅಂತ್ಯಗೊಂಡಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News