ನವದೆಹಲಿ: ಆದಿವಾಸಿ ವಿದ್ವಾಂಸ ಮತ್ತು ಸಾಮಾಜಿಕ ಹೋರಾಟಗಾರ ಅಭಯ್ ಫ್ಲೇವಿಯನ್ ಕ್ಸಾಕ್ಸಾ ಶನಿವಾರದಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.37 ವರ್ಷದ ಅಭಯ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದರು. ಛತ್ತೀಸ್ ಗಡ್ ದ ಜಶ್ಪುರ ಜಿಲ್ಲೆಯಲ್ಲಿ ಅಭಯ್ ಕ್ಸಾಕ್ಸಾ ಹುಟ್ಟಿ ಬೆಳೆದಿದ್ದರು.
My dear friend Abhay Xaxa, a fierce intellectual and activist is no more with us. Please help me in connecting with his family.
I can't believe this pic.twitter.com/Dxws239wp6— Sushmita (@Sushmitav1) March 14, 2020
ಆದಿವಾಸಿ ಹಕ್ಕುಗಳ ಕಾರ್ಯಕರ್ತ ಮತ್ತು ಸಮಾಜಶಾಸ್ತ್ರಜ್ಞ, ಅಭಯ್ ಮಧ್ಯ ಭಾರತದಲ್ಲಿ ಆದಿವಾಸಿ ಭೂ ಹಕ್ಕುಗಳ ವಿಷಯದಲ್ಲಿ ತಳಮಟ್ಟದ ಸಂಸ್ಥೆಗಳು, ಅಭಿಯಾನಗಳು, ಎನ್‌ಜಿಒಗಳು, ಮಾಧ್ಯಮಗಳು,ಸಂಶೋಧನಾ ಸಂಸ್ಥೆಗಳೊಂದಿಗೆ ವಿವಿಧ ಸಾಮರ್ಥ್ಯಗಳಲ್ಲಿ ಕೆಲಸ ಮಾಡಿದ್ದಾರೆ.ಆದಿವಾಸಿ ಹಕ್ಕುಗಳ ರಾಷ್ಟ್ರೀಯ ಅಭಿಯಾನದಲ್ಲಿ ಅವರು ರಾಷ್ಟ್ರೀಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಫಸ್ಟ್‌ಪೋಸ್ಟ್, ಇಂಡಿಯಾಸ್ಪೆಂಡ್, ದಲಿತ ಕ್ಯಾಮೆರಾ ಮತ್ತು ಆದಿವಾಸಿ ರಿಸರ್ಜನ್ಸ್ ಸೇರಿದಂತೆ ವಿವಿಧ ಪ್ರಕಟಣೆಗಳಲ್ಲಿ ಅವರ ಅಂಕಣಗಳು ಕಾಣಿಸಿಕೊಂಡಿವೆ. ಅಭಯ್ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಅನುಭವಿಸುವ ಜಾತಿ ತಾರತಮ್ಯವನ್ನು ಕೇಂದ್ರೀಕರಿಸುವ ಉನ್ನತ ಶಿಕ್ಷಣ ಅಭಿಯಾನವಾಗಿ ಕಾರ್ಯ ನಿರ್ವಹಿಸಿದ್ದರು.
ವಿದೇಶದಲ್ಲಿ ಅಧ್ಯಯನಕ್ಕಾಗಿ ಫೋರ್ಡ್ ಫೆಲೋಶಿಪ್ ಪಡೆದ ಮೊದಲ ಆದಿವಾಸಿ ಎನ್ನುವ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.