12 ದ್ವಿಶತಕ... 2 ತ್ರಿಶತಕ... ಟೆಸ್ಟ್‌ ಕ್ರಿಕೆಟ್‌ ಬಿಟ್ಟರೆ ಬೇರಾವ ಸ್ವರೂಪವನ್ನೂ ಆಡದ ಈತ ಇಂದು ಕ್ರಿಕೆಟ್‌ ಲೋಕಕ್ಕೇ ʼರಾಜʼ! ಯಾರೆಂದು ತಿಳಿಯಿತೇ?

Sir Donald Bradman Record: ಆಸ್ಟ್ರೇಲಿಯಾದ ಮಾಜಿ ದಂತಕಥೆ ಸರ್ ಡಾನ್ ಬ್ರಾಡ್ಮನ್ ತಮ್ಮ ಅದ್ಭುತ ಬ್ಯಾಟಿಂಗ್‌ಗೆ ಇಂದಿಗೂ ಪ್ರಸಿದ್ಧರಾಗಿದ್ದಾರೆ. ಬ್ರಾಡ್ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 99.94 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ, ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 52 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 29 ಶತಕಗಳನ್ನು ಕೂಡ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

1 /7

ಆಸ್ಟ್ರೇಲಿಯಾದ ಮಾಜಿ ದಂತಕಥೆ ಸರ್ ಡಾನ್ ಬ್ರಾಡ್ಮನ್ ತಮ್ಮ ಅದ್ಭುತ ಬ್ಯಾಟಿಂಗ್‌ಗೆ ಇಂದಿಗೂ ಪ್ರಸಿದ್ಧರಾಗಿದ್ದಾರೆ. ಬ್ರಾಡ್ಮನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 99.94 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ, ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 52 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 29 ಶತಕಗಳನ್ನು ಕೂಡ ಗಳಿಸಿದ್ದಾರೆ.

2 /7

ಅಂದಹಾಗೆ ಈ ಶತಕಗಳಲ್ಲಿ 12 ದ್ವಿಶತಕ ಮತ್ತು 2 ತ್ರಿಶತಕಗಳೂ ಸೇರಿವೆ. ನಿಮಗೆ ಆಶ್ಚರ್ಯಕರವಾದ ಮತ್ತೊಂದು ವಿಷಯವನ್ನು ನಿಮ್ಮ ಮುಂದಿಡಲಿದ್ದೇವೆ. ಅದೇನೆಂದರೆ ಡಾನ್‌ ಬ್ರಾಡ್ಮನ್‌ ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಕೇವಲ 6 ಸಿಕ್ಸರ್‌ಗಳನ್ನಷ್ಟೇ ಬಾರಿಸಿದ್ದರು.  

3 /7

ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಕೇವಲ 6 ಸಿಕ್ಸರ್ ಬಾರಿಸಿದ್ದ ಡಾನ್ ಬ್ರಾಡ್ಮನ್ ಕೇವಲ ಎರಡು ಇನ್ನಿಂಗ್ಸ್‌ನಲ್ಲಿ ಸಿಕ್ಸರ್ ಬಾರಿಸಿದ್ದರು. ಒಮ್ಮೆ ಇಂಗ್ಲೆಂಡ್ ವಿರುದ್ಧ ಆಡುವಾಗ, ಮತ್ತೊಮ್ಮೆ ಭಾರತದ ವಿರುದ್ಧ 1 ಸಿಕ್ಸರ್ ಬಾರಿಸಿದ್ದರು.

4 /7

ಈ ಮೂಲಕ ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 6 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನು ಬೌಂಡರಿಗಳ ಬಗ್ಗೆ ಮಾತನಾಡುವುದಾದರೆ, ಡಾನ್ ಬ್ರಾಡ್ಮನ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 681 ಬೌಂಡರಿಗಳನ್ನು ಹೊಡೆದಿದ್ದಾರೆ.  

5 /7

ಸರ್ ಡಾನ್ ಬ್ರಾಡ್ಮನ್ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 80 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ಅವರು 99.94 ಸರಾಸರಿಯಲ್ಲಿ 6996 ರನ್ ಗಳಿಸಿದ್ದಾರೆ. ಇದರಲ್ಲಿ 12 ದ್ವಿಶತಕ ಹಾಗೂ 13 ಅರ್ಧ ಶತಕಗಳ ಜೊತೆಗೆ 29 ಶತಕಗಳು ಅವರ ಹೆಸರಿನಲ್ಲಿವೆ. ಅವರ ಗರಿಷ್ಠ ಸ್ಕೋರ್ 334 ರನ್.  

6 /7

ಅಂತರಾಷ್ಟ್ರೀಯ ವೃತ್ತಿಜೀವನದ ಹೊರತಾಗಿ, ಡಾನ್ ಬ್ರಾಡ್ಮನ್ ಅವರ ಪ್ರಥಮ ದರ್ಜೆಯ ವೃತ್ತಿಜೀವನವು ತುಂಬಾ ಅದ್ಭುತವಾಗಿತ್ತು. ಅವರು ಒಟ್ಟು 234 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ 338 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಬ್ರಾಡ್‌ಮನ್ 95.14 ಸರಾಸರಿಯಲ್ಲಿ 28067 ರನ್ ಗಳಿಸಿದರು.  

7 /7

ಅಚ್ಚರಿಯ ಸಂಗತಿ ಎಂದರೆ ಫಸ್ಟ್ ಕ್ಲಾಸ್ ಕೆರಿಯರ್ ನಲ್ಲೂ ಸಿಕ್ಸರ್ ಬಾರಿಸಿರಲಿಲ್ಲ. ಅವರು 117 ಶತಕಗಳು ಮತ್ತು 69 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಇದರಲ್ಲಿ ಅವರ ಅತ್ಯಧಿಕರ ಸ್ಕೋರ್ ಎಂದರೆ 452* ರನ್ ಆಗಿದೆ.