actress Abhinaya Childhood Photo: ಮೇಲಿನ ಫೋಟೋದಲ್ಲಿರುವ ಈ ಮುದ್ದಾದ ಹುಡುಗಿ ನಿಮಗೆ ಯಾರೆಂದು ತಿಳಿದಿದೆಯೇ? ಈ ಮಗು ಈಗ ದಕ್ಷಿಣ ಚಿತ್ರರಂಗದಲ್ಲಿ ಕ್ರೇಜಿ ಹೀರೋಯಿನ್. ತೆಲುಗು ಮತ್ತು ತಮಿಳು ಇಂಡಸ್ಟ್ರಿಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಒಂದೊಮ್ಮೆ ಕನ್ನಡದಲ್ಲೂ ಅಭಿನಯಿಸಿ ಸದ್ದು ಮಾಡಿದ್ದರು. ಅಂದಹಾಗೆ ತನ್ನ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕರ ಮನ ಗೆಲ್ಲುತ್ತಿರುವ ಈ ನಟಿಗೆ ಮಾತೂ ಬರಲ್ಲ, ಕಿವಿಯೂ ಕೇಳಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಮೇಲಿನ ಫೋಟೋದಲ್ಲಿರುವ ಈ ಮುದ್ದಾದ ಹುಡುಗಿ ನಿಮಗೆ ಯಾರೆಂದು ತಿಳಿದಿದೆಯೇ? ಈ ಮಗು ಈಗ ದಕ್ಷಿಣ ಚಿತ್ರರಂಗದಲ್ಲಿ ಕ್ರೇಜಿ ಹೀರೋಯಿನ್. ತೆಲುಗು ಮತ್ತು ತಮಿಳು ಇಂಡಸ್ಟ್ರಿಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಒಂದೊಮ್ಮೆ ಕನ್ನಡದಲ್ಲೂ ಅಭಿನಯಿಸಿ ಸದ್ದು ಮಾಡಿದ್ದರು. ಅಂದಹಾಗೆ ತನ್ನ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕರ ಮನ ಗೆಲ್ಲುತ್ತಿರುವ ಈ ನಟಿಗೆ ಮಾತೂ ಬರಲ್ಲ, ಕಿವಿಯೂ ಕೇಳಲ್ಲ.
"ಮೌನವೇ ಈಕೆಗೆ ಭಾಷೆ, ನಟನೆಯೇ ಈಕೆಗೆ ವೈಯ್ಯಾರ" ಎಂಬಂತೆ ತನ್ನ ಅತ್ಯದ್ಭುತ ನಟನೆಯಿಂದಲೇ ಜನಮನಗೆದ್ದಿರುವ ಈ ಮೋಹನಾಂಗಿ ಬೇರೆ ಯಾರೂ ಅಲ್ಲ ʼಅಭಿನಯಾʼ. ತೆಲುಗಿನ ಪ್ರಖ್ಯಾತ ಸಿನಿಮಾ ʼಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟುʼ ಸಿನಿಮಾದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಮಹೇಶ್ ಬಾಬು ಅವರ ಸಹೋದರಿಯಾಗಿ ನಟಿಸಿ ಮನಸೆಳೆದ ನಟಿ.
ಇದು ಅಭಿನಯ ಅವರ ಬಾಲ್ಯದ ಫೋಟೋ. ಇತ್ತೀಚೆಗಷ್ಟೇ ಅಭಿನಯಾ ಅವರ ತಾಯಿ ತೀರಿಕೊಂಡಿದ್ದರು. ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗಲೇ ಕೊನೆಯುಸಿರೆಳೆದಿದ್ದರು. ಈ ವಿಷಯವನ್ನು ಸ್ವತಃ ನಟಿ ಅಭಿನಯಾ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು.
ತಮಿಳುನಾಡು ಮೂಲದ ಅಭಿನಯಾಗೆ ಹುಟ್ಟಿನಿಂದಲೇ ಮಾತು ಬರಲ್ಲ, ಕಿವಿಯೂ ಕೇಳಲ್ಲ. ಹೀಗಿದ್ದರೂ ಆಕೆ ತನ್ನ ನಟನೆಯಿಂದ ದಕ್ಷಿಣ ಚಿತ್ರರಂಗದಲ್ಲಿ ವಿಶೇಷ ಮನ್ನಣೆ ಗಳಿಸಿದ್ದಾಳೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ರವಿತೇಜ ಅಭಿನಯದ "ನೆನಿಂತೆ" ಚಿತ್ರದ ಮೂಲಕ ಅಭಿನಯ ತೆಲುಗು ಪ್ರೇಕ್ಷಕರಿಗೆ ಪರಿಚಯವಾಯಿತು. ಆ ನಂತರ ತಮಿಳಿನಲ್ಲಿ ನಾಗಾರ್ಜುನ ಕಿಂಗ್ ಮತ್ತು ನಾಡೋಡಿಗಲ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಆದರೆ ಇವರು ಜನಮನ್ನಣೆ ಪಡೆದಿದ್ದು, ರವಿತೇಜ ಅಭಿನಯದ ಶಂಭೋ ಶಿವ ಶಂಭೋ ಚಿತ್ರದ ಮೂಲಕ. ಆ ನಂತರ ದಮ್ಮು, ಢಮ್ಮರುಗಂ, ಜೀನಿಯಸ್, ರಾಜುಗಾರಿ ಗಧಿ 2, ಧ್ರುವ ಮುಂತಾದ ಚಿತ್ರಗಳ ಮೂಲಕ ಉತ್ತಮ ಮನ್ನಣೆ ಗಳಿಸಿದಳು. ಇತ್ತೀಚೆಗೆ ಅಭಿನಯ ನಟಿಸಿದ ತೆಲುಗು ಸಿನಿಮಾಗಳಾದ ಸೀತಾರಾಮನ್, ಗಾಮಿ ಮತ್ತು ಫ್ಯಾಮಿಲಿ ಸ್ಟಾರ್ ಸೂಪರ್ ಹಿಟ್ ಆಗಿವೆ. ಅಲ್ಲದೆ, ಕಾಲಿವುಡ್‌ನಲ್ಲಿ ಮಾರ್ಕ್ ಆಂಟೋನಿ ಅವರ ಚಿತ್ರ ಒಟ್ಟಾಗಿ ರೂ. 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದು ಗಮನಾರ್ಹ.
ಇನ್ನೊಂದೆಡೆ ಅಭಿನಯ ಅವರು ಕನ್ನಡದಲ್ಲಿಯೂ ಅಭಿನಯಿಸಿದ್ದರು. ಆ ಸಿನಿಮಾ ಬೇರಾವುದೂ ಅಲ್ಲ ಹುಡುಗರು. ದಿವಂಗತ ನಟ ಡಾ.ಪುನೀತ್ ರಾಜ್‌ಕುಮಾರ್ ಅವರ ತಂಗಿಯಾಗಿ ಅಭಿನಯ ನಟಿಸಿದ್ದರು. ಇವರ ಈ ಎಲ್ಲಾ ಸಾಧನೆಗೆ ಅವರ ತಂದೆಯ ಪ್ರೇರೇಪಣೆಯೇ ಕಾರಣವಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅಭಿನಯ ಸಂಜ್ಞೆಗಳ ಮೂಲಕ ಬಹಿರಂಗಪಡಿಸಿದ್ದರು.