ಗಡಿಜಿಲ್ಲೆಯಲ್ಲಿ ದೊಡ್ಡ ಗಣಪತಿ ವಿಸರ್ಜನಾ ಮೆರವಣಿಗೆ: ನಗರದದಾದ್ಯಂತ ಖಾಕಿ ಸರ್ಪಗಾವಲು

ಗಣಪತಿ ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ಕೊಟ್ಟಿದ್ದು ಗಾರುಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಚಂಡೆ, ವಿವಿಧ ವೇಷದಾರಿಗಳು ಗಮನ ಸೆಳೆದವು.

Written by - Yashaswini V | Last Updated : Oct 4, 2024, 01:47 PM IST
  • ಹಿಂದೂಪರ ಸಂಘಟನೆಗಳ ದೊಡ್ಡ ಗಣಪತಿ ವಿಸರ್ಜನಾ ಮೆರವಣಿಗೆ
  • ಚಾಮರಾಜನಗರದ ರಥದ ಬೀದಿಯಿಂದ ಬೆಳಗ್ಗೆ 11 ಕ್ಕೆ ಆರಂಭಗೊಂಡ ಮೆರವಣಿಗೆ
  • ಮಧ್ಯರಾತ್ರಿವರೆಗೂ ನಡೆಯುವ ದೊಡ್ಡ ಗಣಪತಿ ಮೆರವಣಿಗೆ
ಗಡಿಜಿಲ್ಲೆಯಲ್ಲಿ  ದೊಡ್ಡ ಗಣಪತಿ ವಿಸರ್ಜನಾ ಮೆರವಣಿಗೆ: ನಗರದದಾದ್ಯಂತ ಖಾಕಿ ಸರ್ಪಗಾವಲು title=

ಚಾಮರಾಜನಗರ: ಚಾಮರಾಜನಗರದ ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ದೊಡ್ಡ ಗಣಪತಿ ಎಂಥಲೇ ಕರೆಯುವ "ಅಯೋಧ್ಯಾ ರಾಮ ಮಂದಿರ ಗಣಪತಿ" ನಿಮಜ್ಜನ ಮೆರವಣಿಗೆ ನಡೆಯುತ್ತಿದೆ.

ಚಾಮರಾಜನಗರದ ರಥದ ಬೀದಿಯಿಂದ ಬೆಳಗ್ಗೆ 11 ಕ್ಕೆ ಆರಂಭಗೊಂಡ ಮೆರವಣಿಗೆಯು ಇಂದು ಮಧ್ಯರಾತ್ರಿ ತನಕವೂ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಲಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಸರ್ಪಗಾವಲಿದ್ದು ಮೆರವಣಿಗೆ ಮಾರ್ಗ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ರೂಪಿಸಲಾಗಿದೆ. 

ಇದನ್ನೂ ಓದಿ- ಈ ಮೂರು ಗಣೇಶನ ದೇಗುಲಕ್ಕೆ ಬೇಡಿಕೊಳ್ಳಿ, ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ..!

ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದ ಮೇಲೆ ಕೂರುವುದು, ಪಟಾಕಿ ಸಿಡಿಸುವುದಕ್ಕೆ  ನಿರ್ಬಂಧ  ಹೇರಲಾಗಿದ್ದು ನಿನ್ನೆಯಿಂದಲೇ ಮದ್ಯ ಮಾರಾಟವನ್ನು ಜಿಲ್ಲಾ ಕೇಂದ್ರದಲ್ಲಿ ಬಂದ್ ಮಾಡಲಾಗಿದೆ.

ಗಣಪತಿ ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ಕೊಟ್ಟಿದ್ದು ಗಾರುಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಚಂಡೆ, ವಿವಿಧ ವೇಷದಾರಿಗಳು ಗಮನ ಸೆಳೆದವು.

ಪೊಲೀಸ್ ಗಣಪತಿ ಎಂಥಲೇ ಫೇಮಸ್: 
ಜನರಿಗಿಂತ ಹೆಚ್ಚು ಪೊಲೀಸರೇ ಇರುವುದರಿಂದ ಇದು ಪೊಲೀಸ್ ಗಣಪತಿ ಎಂಥಲೇ ಫೇಮಸ್ ಆಗಿದ್ದು ಆರ್ ಎಸ್ ಎಸ್ ಗಣಪತಿ, ದೊಡ್ಡ ಗಣಪತಿ ಎಂಥಲೂ ಕರೆಯಲಾಗುತ್ತದೆ.

ಇದನ್ನೂ ಓದಿ- ಸಂಕಷ್ಟಹರ ಚತುರ್ಥಿಯ ದಿನ ಈ ತಪ್ಪುಗಳನ್ನು ಮಾಡಲೇಬಾರದು!

ಈ ಬಾರಿ 6 ಡಿವೈಎಸ್ಪಿ, 28 ಪಿಐ, 48 ಮಂದಿ ಪಿಎಸ್ಐ ಸೇರಿ 750 ಮಂದಿ ಪೊಲೀಸರು, 100 ಮಂದಿ ಹೋಂ ಗಾರ್ಡ್ ಗಳು, 5 ಕೆಎಸ್ಆರ್ ಪಿ, 6 ಡಿಆರ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ‌.ಟಿ.ಕವಿತಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News