ಕ್ರಿಕೆಟೂ ಹೋಯ್ತು... ಬದುಕೂ ಬರ್ಬಾದ್‌ ಆಯ್ತು...!! ಕುಡಿತದ ಚಟಕ್ಕೆ ಬಿದ್ದು ಜೀವನವನ್ನೇ ನರಕವಾಗಿಸಿಕೊಂಡ ಆ ನತದೃಷ್ಟ ಕ್ರಿಕೆಟಿಗ ಯಾರು ಗೊತ್ತಾ?

Cricket players whose careers were affected by alcohol: ಕ್ರಿಕೆಟ್ ಅನ್ನು ಸಜ್ಜನರ ಆಟ ಎಂದು ಕರೆಯಲಾಗುತ್ತದೆ. ಆದರೆ, ಕೆಲ ಕ್ರಿಕೆಟಿಗರು ತಮ್ಮ ಮಿತಿಯನ್ನು ಮೀರಿ ಕುಡಿತದ ಚಟಕ್ಕೆ ಬಿದ್ದಿರುವುದು ಅಷ್ಟೇ ಅಲ್ಲದೆ, ಡ್ರಗ್ಸ್‌ ಸೇವಿಸಿ ಸಿಕ್ಕಿಹಾಕಿಕೊಂಡಿದ್ದರು. ಜೊತೆಗೆ ಈ ಚಟದಿಂದಾಗಿ ತಮ್ಮ ವೃತ್ತಿಜೀವನವನ್ನೇ ನರಕವನ್ನಾಗಿಸಿಕೊಂಡರು. ಅಂತಹ ಕ್ರಿಕೆಟಿಗರ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಕ್ರಿಕೆಟ್ ಅನ್ನು ಸಜ್ಜನರ ಆಟ ಎಂದು ಕರೆಯಲಾಗುತ್ತದೆ. ಆದರೆ, ಕೆಲ ಕ್ರಿಕೆಟಿಗರು ತಮ್ಮ ಮಿತಿಯನ್ನು ಮೀರಿ ಕುಡಿತದ ಚಟಕ್ಕೆ ಬಿದ್ದಿರುವುದು ಅಷ್ಟೇ ಅಲ್ಲದೆ, ಡ್ರಗ್ಸ್‌ ಸೇವಿಸಿ ಸಿಕ್ಕಿಹಾಕಿಕೊಂಡಿದ್ದರು. ಜೊತೆಗೆ ಈ ಚಟದಿಂದಾಗಿ ತಮ್ಮ ವೃತ್ತಿಜೀವನವನ್ನೇ ನರಕವನ್ನಾಗಿಸಿಕೊಂಡರು. ಅಂತಹ ಕ್ರಿಕೆಟಿಗರ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.

2 /5

ವಿನೋದ್ ಕಾಂಬ್ಳಿ: ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ ವಿನೋದ್ ಕಾಂಬ್ಳಿ. ಕ್ರಿಕೆಟ್‌ ಲೋಕದಲ್ಲಿ ಮಿಂಚುವ ಹಂಬಲದಲ್ಲಿದ್ದ ಈ ಆಟಗಾರ ತನ್ನ ಕೈಯಾರೆ ತನ್ನ ಭವಿಷ್ಯವನ್ನು ನಾಶಪಡಿಸಿಕೊಂಡಿದ್ದರು. ಅಶಿಸ್ತು ಮತ್ತು ಕೆಟ್ಟ ಅಭ್ಯಾಸಗಳಿಂದಲೇ ಕ್ರಿಕೆಟ್‌ ಜೀವನವನ್ನು ಕಳೆದುಕೊಂಡರು.  

3 /5

ಆಂಡ್ರ್ಯೂ ಸೈಮಂಡ್ಸ್: 21ನೇ ಶತಮಾನದ ಆರಂಭದಲ್ಲಿ ಪ್ರತಿಯೊಂದು ಮಾದರಿಯಲ್ಲೂ ಪ್ರಾಬಲ್ಯ ಮೆರೆದ ಆಸ್ಟ್ರೇಲಿಯನ್ ತಂಡದ ಪ್ರಬಲ ಆಟಗಾರರಾದ ಆಂಡ್ರ್ಯೂ ಸೈಮಂಡ್ಸ್ ಕುಡಿತದ ಚಟಕ್ಕೆ ಬಿದ್ದಿದ್ದರು. ಒಂದೇ ಬಾರಿಗೆ ಸಂಪೂರ್ಣ ವೈನ್ ಬಾಟಲಿಯನ್ನು ಕುಡಿಯುವ ಸಾಮರ್ಥ್ಯ ಹೊಂದಿದ್ದರಂತೆ ಇವರು. ಆದರೆ  2009ರ ನಂತರ ಅವರ ಕೆಟ್ಟ ದಿನಗಳು ಆರಂಭವಾಗಿ, ಅಶಿಸ್ತಿನ ಕಾರಣದಿಂದ ಆಸ್ಟ್ರೇಲಿಯಾ ತಂಡದಿಂದ ಹೊರಬಿದ್ದರು. ಇನ್ನು ಮೇ 2022 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು.  

4 /5

ಜೆಸ್ಸಿ ರೈಡರ್:‌ ಈ ಸ್ಫೋಟಕ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಅಬ್ಬರದಿಂದ ಪ್ರಾರಂಭಿಸಿದರು. 2009/10 ರಲ್ಲಿ ಭಾರತದ ನ್ಯೂಜಿಲೆಂಡ್ ಪ್ರವಾಸವು ಅವರ ವೃತ್ತಿಜೀವನದ ಮಹತ್ವದ ತಿರುವು. ಆದರೆ ಕುಡಿತದ ಚಟವು ಅವರನ್ನು ತಮ್ಮ ವೃತ್ತಿಜೀವನದಿಂದ ಸಂಪೂರ್ಣವಾಗಿ ಬೇರೆಡೆಗೆ ತಿರುಗಿಸಿತು. ಮಾರ್ಚ್ 2013 ರಲ್ಲಿ, ಕ್ರೈಸ್ಟ್‌ಚರ್ಚ್‌ನ ಬಾರ್‌ನಲ್ಲಿ ಕೆಲವರು ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಅದಾದ ನಂತರ ಅವರು ಹಲವಾರು ದಿನಗಳವರೆಗೆ ಕೋಮಾದಲ್ಲಿಯೇ ಇದ್ದರು. ತಲೆಗೆ ಆಗಿದ್ದ ಗಂಭೀರ ಗಾಯದಿಂದ ಚೇತರಿಸಿಕೊಂಡು ಶತಕ ಬಾರಿಸಿ ಕಮ್ ಬ್ಯಾಕ್ ಮಾಡಿದರೂ ಕುಡಿತದ ಚಟ ಬಿಡಲಾಗಲಿಲ್ಲ.  

5 /5

ಜೇಮ್ಸ್ ಫಾಕ್ನರ್: ಆಸ್ಟ್ರೇಲಿಯಾದ ಈ ಆಟಗಾರನಿಗೆ ಕ್ರಿಕೆಟ್ ಜಗತ್ತಿನ ಮುಂದಿನ ದೊಡ್ಡ ಆಲ್ ರೌಂಡರ್ ಆಗುವ ಎಲ್ಲಾ ಸಾಮರ್ಥ್ಯವಿತ್ತು. ಬ್ಯಾಟ್ ಮತ್ತು ಬಾಲ್‌ನಲ್ಲಿ ತೋರಿದ ಕೌಶಲ್ಯ ಅದ್ಭುತವಾಗಿತ್ತು. ಐಪಿಎಲ್‌ನಲ್ಲಿಯೂ ರಾಜಸ್ಥಾನ್ ರಾಯಲ್ಸ್‌ ಪರ ತಮ್ಮ ಛಾಪು ಮೂಡಿಸಿದ್ದರು. ಆದರೆ ಮದ್ಯದ ವ್ಯಸನಿಯಾಗಿದ್ದ ಫಾಕ್ನರ್‌ ಅವರ ಜೀವನದಲ್ಲಿ 2015 ಒಂದು ದುಃಸ್ವಪ್ನದಂತೆ ಬಂದಿತ್ತು. ಮ್ಯಾಂಚೆಸ್ಟರ್‌ʼನಲ್ಲಿ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಮ್ಯಾಂಚೆಸ್ಟರ್ ಪೋಲೀಸರಿಂದ ಬಂಧಿಸಲ್ಪಟ್ಟರು. ಈ ಘಟನೆ ಅವರ ದೇಶದ ಇಮೇಜ್‌ಗೆ ಅಪಖ್ಯಾತಿ ತಂದಿದ್ದಕ್ಕಾಗಿ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬಹುತೇಕ ನಿಷೇಧಿಸಿತ್ತು.