ಗಂಟೆಯೊಳಗೆ ಟ್ರೆಂಡ್ ಚೇಂಜ್: ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಶೋಕ, ದುಃಖ ಆವರಿಸಿದ್ದ ಬಿಜೆಪಿ ಕಚೇರಿಯಲ್ಲಿ ಸಂಭ್ರಮ!

Election Result 2024: ಹರಿಯಾಣದಲ್ಲಿ ಗಂಟೆಯೊಳಗೆ ಟ್ರೆಂಡ್ ಚೇಂಜ್ ಆಗಿದ್ದು, ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಶೋಕ, ದುಃಖ ಆವರಿಸಿದರೆ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆದಿದೆ.

Written by - Puttaraj K Alur | Last Updated : Oct 8, 2024, 04:39 PM IST
  • ಹರಿಯಾಣ ವಿಧಾಸನಭಾ ಚುನಾವಣಾ ಫಲಿತಾಂಶದಲ್ಲಿ ಗಂಟೆಯೊಳಗೆ ಟ್ರೆಂಡ್ ಚೇಂಜ್
  • ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಶೋಕ, ದುಃಖ ಆವರಿಸಿದ್ದ ಬಿಜೆಪಿ ಕಚೇರಿಯಲ್ಲಿ ಸಂಭ್ರಮ!
  • ಜಮ್ಮು-ಕಾಶ್ಮೀರದಲ್ಲಿ 10 ವರ್ಷದ ನಂತರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ?
ಗಂಟೆಯೊಳಗೆ ಟ್ರೆಂಡ್ ಚೇಂಜ್: ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಶೋಕ, ದುಃಖ ಆವರಿಸಿದ್ದ ಬಿಜೆಪಿ ಕಚೇರಿಯಲ್ಲಿ ಸಂಭ್ರಮ! title=
ಗಂಟೆಯೊಳಗೆ ಟ್ರೆಂಡ್ ಚೇಂಜ್!

Election Result 2024: ಹರಿಯಾಣ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಎರಡೂ ರಾಜ್ಯಗಳ ಫಲಿತಾಂಶದ ಚಿತ್ರಣ ಸ್ಪಷ್ಟವಾಗಿದೆ. ಅದರಲ್ಲೂ ಹರಿಯಾಣದ ಫಲಿತಾಂಶದಲ್ಲಿ ಅನಿರೀಕ್ಷಿತ ಬದಲಾವಣೆಯಾಗಿದ್ದು, ಕೇವಲ ಒಂದೇ ಒಂದು ಗಂಟೆಯಲ್ಲಿ ರಿಸಲ್ಟ್‌ ಉಲ್ಟಾಪಲ್ಟಾ ಆಗಿದೆ.

ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಸ್ಥಾನಗಳು ನೋಡ ನೋಡುತ್ತಿದ್ದಂತೆಯೆ ಒಂದೇ ಸಮನೇ ಏರಿಕೆಯಾಗಿತ್ತು. ಮತ ಎಣಿಕೆ ಆರಂಭಗೊಂಡ ಕೆಲ ಗಂಟೆಗಳಲ್ಲಿ 50ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡು ಕ್ಲೀನ್‌ ಸ್ವೀಪ್‌ನತ್ತ ಸಾಗುತ್ತಿತ್ತು. ಸರಳ ಬಹುಮತ ಪಡೆದು ಕಾಂಗ್ರೆಸ್‌ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವುದು ಖಚಿತ ಅನ್ನೋವಾಗಲೇ ಫಲಿತಾಂಶ ಸಂಪೂರ್ಣ ತಲೆಕೆಳಗಾಗಿದೆ. ಈ ಮೂಲಕ ಗಂಟೆಯೊಳಗೆ ಟ್ರೆಂಡ್ ಚೇಂಜ್ ಆಗಿದ್ದು, ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಶೋಕ, ದುಃಖ ಆವರಿಸಿದರೆ, ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆದಿದೆ.

ಇದನ್ನೂ ಓದಿ: The first selfie of India: 1880 ರಲ್ಲಿಯೇ ಭಾರತದಲ್ಲಿ ತೆಗೆದ ಸೆಲ್ಫಿ ಫೋಟೋ ಹೇಗಿದೆ ಗೊತ್ತಾ? ಇದರ ಹಿಂದಿದೆ ರೋಚಕ ಕಹಾನಿ...!

ಸದ್ಯ ಹರಿಯಾಣದಲ್ಲಿ ಬಿಜೆಪಿ 50, ಕಾಂಗ್ರೆಸ್‌ 35, INLD 2 ಮತ್ತು ಸ್ವತಂತ್ರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದು ಹ್ಯಾಟ್ರಿಕ್‌ ಗೆಲುವಿನ ಕನಸು ಹೊತ್ತಿರುವ ಬಿಜೆಪಿಗೆ ಕೊಂಚ ನಿರಾಳವೆನಿಸಿದೆ. ಒಟ್ಟು 90 ಕ್ಷೇತ್ರಗಳಿರುವ ಹರಿಯಾಣದಲ್ಲಿ ಬಹುಮತಕ್ಕೆ 46ಸ್ಥಾನಗಳು ಬೇಕಾಗಿದ್ದು, ಈಗಾಗಲೇ ಬಿಜೆಪಿ ಅಷ್ಟೂ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವ ಕಾಂಗ್ರೆಸ್‌ ಕನಸು ಭಗ್ನವಾಗುವ ಆತಂಕವಿದೆ.   

ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್‌ ಮೈತ್ರಿಕೂಟ ಭಾರೀ ಮುನ್ನಡೆ!

ಇನ್ನು ಜಮ್ಮು ಕಾಶ್ಮೀರದಲ್ಲಿ 10 ವರ್ಷದ ನಂತರ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟವು 50 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಸರಳ ಬಹುಮತದತ್ತ ದಾಪುಗಾಲಿಟ್ಟಿದ್ದು,  ಸರ್ಕಾರ ರಚನೆ ಬಹುತೇಕ ಖಚಿತ ಆಗಿದೆ. ಸದ್ಯದ ಮಾಹಿತಿ ಪ್ರಕಾರ ನ್ಯಾಷನಲ್ ಕಾನ್ಫರೆನ್ಸ್ 42, ಬಿಜೆಪಿ 29, ಕಾಂಗ್ರೆಸ್‌ 6, JKPDP 3, JPC 1, AAAP 1, CPI(M) 1 ಮತ್ತು ಸ್ವತಂತ್ರ ಅಭ್ಯರ್ಥಿಳು 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 

ಇದನ್ನೂ ಓದಿ: Jammu Kashmir Election: ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಗೆ ವಿಜಯಮಾಲೆ: ಕಣಿವೆ ರಾಜ್ಯದ ಗದ್ದುಗೆ ಏರಲಿರುವ ನೂತನ ಸಿಎಂ ಇವರೇ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News