ಪತ್ನಿಗೆ ವಿಚ್ಛೇದನ ನೀಡಿ ಭಾರತೀಯ ನಟಿಯನ್ನು ಮದುವೆಯಾದ ಪಾಕಿಸ್ತಾನಿ ಕ್ರಿಕೆಟಿಗ !

Cricketer love story: ಈ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೆ ಬೇರೆ ದೇಶಗಳ ಕ್ರಿಕೆಟಿಗರೂ ಭಾರತೀಯ ನಟಿಯ ಪ್ರೀತಿಯಲ್ಲಿ ಬಿದ್ದ ಉದಾಹರಣೆಗಳಿವೆ.

Written by - Chetana Devarmani | Last Updated : Oct 19, 2024, 12:47 PM IST
ಪತ್ನಿಗೆ ವಿಚ್ಛೇದನ ನೀಡಿ ಭಾರತೀಯ ನಟಿಯನ್ನು ಮದುವೆಯಾದ ಪಾಕಿಸ್ತಾನಿ ಕ್ರಿಕೆಟಿಗ ! title=

Zaheer Abbas love story: ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ನಡುವಿನ ಪ್ರೀತಿಯ ಸುದ್ದಿ ಹೊಸದೇನಲ್ಲ. ಅನೇಕ ನಟಿಯರ ಅಂದಕ್ಕೆ ಮನಸೋತ ಭಾರತೀಯ ಕ್ರಿಕೆಟಿಗರು ಅನೇಕರಿದ್ದಾರೆ. ಇಂತಹ ಜೋಡಿಯ ಮಾತು ಬಂದಾಗಲೆಲ್ಲ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹೆಸರು ನೆನಪಿಗೆ ಬರುತ್ತದೆ. ಆದರೆ ಈ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೆ ಬೇರೆ ದೇಶಗಳ ಕ್ರಿಕೆಟಿಗರೂ ಭಾರತೀಯ ನಟಿಯ ಪ್ರೀತಿಯಲ್ಲಿ ಬಿದ್ದ ಉದಾಹರಣೆಗಳಿವೆ.

ಭಾರತೀಯ ನಟಿಯನ್ನು ಪ್ರೀತಿಸಿದ ಪಾಕಿಸ್ತಾನಿ ಕ್ರಿಕೆಟಿಗನ ಪ್ರೇಮಕಥೆ ಇಲ್ಲಿದೆ. ಪಾಕಿಸ್ತಾನಿ ಕ್ರಿಕೆಟಿಗ ಜಹೀರ್ ಅಬ್ಬಾಸ್ ಲವ್‌ ಸ್ಟೋರಿ ಬಗ್ಗೆ ಇಂದು ನಾವು ಮಾತನಾಡುತ್ತಿದ್ದೇವೆ. ಜಹೀರ್ ಅಬ್ಬಾಸ್ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿ ಭಾರತೀಯ ನಟಿಯನ್ನು ಮದುವೆಯಾದರು. ಆ ನಟಿ ಕೂಡ ಪ್ರೀತಿಗಾಗಿ ತನ್ನ ಧರ್ಮವನ್ನು ಬದಲಿಸಿದರು. 

ಇದನ್ನೂ ಓದಿ: IPL 2025: ಇದು RCB ರಿಟೇನ್ ಲಿಸ್ಟ್.. ಕೊಹ್ಲಿ ಅಲ್ಲ.. ʼಈʼ ಸ್ಟಾರ್‌ ಆಟಗಾರನಿಗೆ ಒಲಿದ ಬೆಂಗಳೂರು ತಂಡದ ನಾಯಕತ್ವ!?

ಜಹೀರ್ ಅಬ್ಬಾಸ್ ಮತ್ತು ರೀಟಾ ಲುಥ್ರಾ 1980 ರಲ್ಲಿ ಭೇಟಿಯಾದರು. ಜಹೀರ್ ಮತ್ತು ರೀಟಾ ಕೌಂಟಿ ಕ್ರಿಕೆಟ್ ಸಂದರ್ಭದಲ್ಲಿ ಭೇಟಿಯಾದರು. ಜಹೀರ್ ರೀಟಾಳನ್ನು ನೋಡಿದ ಕೂಡಲೇ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರು. ಆದರೆ ಜಹೀರ್ ರೀಟಾಳನ್ನು ಭೇಟಿಯಾದಾಗ ಆಗಲೇ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದರು. ಇದಾದ ನಂತರವೂ ಜಹೀರ್ ರೀಟಾಳನ್ನು ಮದುವೆಯಾಗಲು ಮನಸ್ಸು ಮಾಡಿದರು. 

ಜಹೀರ್ ಅಬ್ಬಾಸ್ ಅವರ ಮೊದಲ ಪತ್ನಿ ನಸ್ರೀನ್. ಅವರಿಗೆ ಮೂರು ಹೆಣ್ಣು ಮಕ್ಕಳಿದ್ದರು. ಜಹೀರ್ ರೀಟಾಳನ್ನು ಮದುವೆಯಾಗಲು ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರು. ಅದರ ನಂತರ ರೀಟಾ ಲುಥ್ರಾ ಕೂಡ ತನ್ನ ಧರ್ಮವನ್ನು ಬದಲಾಯಿಸಿದರು. 1988 ರಲ್ಲಿ ಇಬ್ಬರೂ ಮದುವೆ ಆದರು. ಇಬ್ಬರಿಗೂ ಸೋನಾಲ್ ಎಂಬ ಮುದ್ದಾದ ಮಗಳಿದ್ದಾಳೆ.

ಇದನ್ನೂ ಓದಿ: ಸರ್ಫರಾಜ್-ವಿರಾಟ್ ಸ್ಫೋಟಕ ಬ್ಯಾಟಿಂಗ್! ಹಲವು ದಾಖಲೆಗಳಬ್ಬರಕ್ಕೆ ಇತಿಹಾಸದ ಪುಟಗಳನ್ನೇ ಸೇರಿತು ಬೆಂಗಳೂರು ಟೆಸ್ಟ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News