OnePlus Diwali Sale : OnePlus ದೀಪಾವಳಿ ಸೇಲ್ ಆರಂಭಿಸಿದೆ. ಈ ಸೇಲ್ ನಲ್ಲಿ OnePlus ಫೋನ್ಗಳು ಮತ್ತು ಇತರ ಪರಿಕರಗಳನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.ಈ ಸೇಲ್ ನವೆಂಬರ್ 5 ರವರೆಗೆ ನಡೆಯಲಿದೆ. ಇದನ್ನು ರಿಲಯನ್ಸ್ ಡಿಜಿಟಲ್, ಬಜಾಜ್ ಎಲೆಕ್ಟ್ರಾನಿಕ್ಸ್, ಕ್ರೋಮಾ, ವಿಜಯ್ ಸೇಲ್ಸ್ ಮತ್ತು ಇತರ ಸ್ಟೋರ್ಗಳಲ್ಲಿ ಈ ಸೇಲ್ ನಡೆಯಲಿದೆ. ಈ ಸೇಲ್ ಅಡಿಯಲ್ಲಿ OnePlus ನ ಫೋನ್ಗಳ ಮೇಲೆ ದೊಡ್ಡ ಮೊತ್ತದ ರಿಯಾಯಿತಿ ನೀಡಲಾಗುತ್ತಿದೆ.
OnePlus Nord 4:
OnePlus Nord 4 ಅನ್ನು ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ, 2,000 ರೂಪಾಯಿಗಳ ರಿಯಾಯಿತಿ ಮತ್ತು 9 ತಿಂಗಳವರೆಗೆ ಉಚಿತ EMI ಪಡೆಯಬಹುದು. ಅಲ್ಲದೆ, ಕೆಲವು ಸಮಯದವರೆಗೆ ಈ ಫೋನ್ನ ಬೆಲೆಯನ್ನು ಕೂಡಾ 3,000 ರೂಪಾಯಿವರೆಗೆ ಇಳಿಸಲಾಗಿದೆ. ಹಾಗಾಗಿ ಈ ಫೋನ್ ಖರೀದಿ ಮೇಲೆ ಒಟ್ಟು 5,000 ರೂ.ವರೆಗೆ ಉಳಿತಾಯ ಮಾಡಬಹುದು. ಈ ಆಫರ್ OnePlus.in, Amazon.in ಮತ್ತು OnePlus ಸ್ಟೋರ್ಗಳಲ್ಲಿ ಚಾಲನೆಯಲ್ಲಿದೆ.
ಇದನ್ನೂ ಓದಿ : WhatsApp, Google ಡ್ರೈವ್ನಂತಹ ಅಪ್ಲಿಕೇಶನ್ಗಳ ಬಳಕೆ ಅಪಾಯಕಾರಿಯೇ? ಪ್ರಸಿದ್ಧ ಆ್ಯಪ್ಗಳು ಬ್ಯಾನ್
OnePlus Nord CE4 :
OnePlus Nord CE4 ಖರೀದಿ ಮೇಲೆ 2,500 ರುಪಾಯಿ ವರೆಗೆ ರಿಯಾಯಿತಿ ಸಿಗಲಿದೆ. ಅಲ್ಲದೆ, ಕೆಲವು ಬ್ಯಾಂಕ್ ಕಾರ್ಡ್ಗಳ ಮೂಲಕ ಖರೀದಿಸಿದಾಗ, 1,500 ರೂಪಾಯಿಯಷ್ಟು ರಿಯಾಯಿತಿ ಮತ್ತು 3 ತಿಂಗಳವರೆಗೆ ಉಚಿತ EMI ಸಹ ಲಭ್ಯವಿರುತ್ತದೆ.
OnePlus 12R :
OnePlus 12R ಅನ್ನು ಖರೀದಿಸುವುದಾದರೆ ಕೆಲವು ಬ್ಯಾಂಕ್ ಕಾರ್ಡ್ಗಳಿಂದ 6 ತಿಂಗಳವರೆಗೆ ಉಚಿತ EMI ಮತ್ತು 3,000 ರೂಪಾಯಿ ರಿಯಾಯಿತಿ ಪಡೆಯಬಹುದು. ಇದಲ್ಲದೇ ಕೆಲ ಕಾಲ ಫೋನ್ ಬೆಲೆಯೂ 5,000 ರೂಪಾಯಿಯಷ್ಟು ಇಳಿಕೆಯಾಗಿದೆ. OnePlus 12, Nord CE4 Lite, OnePlus Open ಮತ್ತು ಇತರ ಫೋನ್ಗಳ ಮೇಲೆ ಉತ್ತಮ ಆಫರ್ ನೀಡಲಾಗುತ್ತಿದೆ.
ಇದನ್ನೂ ಓದಿ : ಎಚ್ಚರ..! ಈ ಎರಡು ನಂಬರ್ ನಿಂದ ನಿಮಗೆ ಪೋನ್ ಬಂದರೆ ಸ್ವೀಕರಿಸಬೇಡಿ...! ಇಲ್ಲದಿದ್ದರೆ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿ!
ನಾರ್ಡ್ ಬಡ್ಸ್ 3 ಮೇಲೆಯೂ ರಿಯಾಯಿತಿ :
ನಿರ್ದಿಷ್ಟ ಬ್ಯಾಂಕ್ ಕಾರ್ಡ್ಗಳೊಂದಿಗೆ ನಾರ್ಡ್ ಬಡ್ಸ್ 3 ರ ಖರೀದಿ ಮೇಲೆ 200 ರುಪಾಯಿ ಮತ್ತು ನಾರ್ಡ್ ಬಡ್ಸ್ 3 ಪ್ರೊ ಖರೀದಿ ಮೇಲೆ 300 ರೂಪಾಯಿ ವಿನಾಯಿತಿ ಇರುತ್ತದೆ. Nord Buds 3 Pro ಮೇಲೆ ಕೆಲವು ಸಮಯದವರೆಗೆ 500 ರೂಪಾಯಿಯಷ್ಟು ರಿಯಾಯಿತಿ ಕೂಡ ಇದೆ. ವಿದ್ಯಾರ್ಥಿಗಳು ನಾರ್ಡ್ ಬಡ್ಸ್ 3 ಅಥವಾ ನಾರ್ಡ್ ಬಡ್ಸ್ 3 ಪ್ರೊ ಅನ್ನು ಖರೀದಿಸಿದರೆ 500 ರೂ.ಯ ವಿನಾಯಿತಿ ನೀಡಲಾಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.