ಲಕ್ಷ್ಮಿ ಆಶೀರ್ವಾದ, ಕೈ ತುಂಬಾ ಹಣಕ್ಕಾಗಿ ದೀಪಾವಳಿಗೂ ಮೊದಲೇ ಈ 5 ವಸ್ತುಗಳನ್ನು ಮನೆಯಿಂದ ಹೊರಹಾಕಿ!

Diwali Tips: ಸಂಪತ್ತಿನ ದೇವತೆ ಲಕ್ಷ್ಮಿ ಆಶೀರ್ವಾದ ಸಿಗಲೆಂದು ಪ್ರತಿಯೊಬ್ಬರೂ ಬಯಸುತ್ತಾರೆ. 

Tips To Get Maa Laxmi Blessing: ನಿಮ್ಮ ಮನೆಯಲ್ಲೂ ಲಕ್ಷ್ಮಿ ಆಗಮನವಾಗಬೇಕು ಎಂದು ನೀವು ಬಯಸುವುದಾದರೆ ಮೊದಲು ನಿಮ್ಮ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಮನೆಯಿಂದ ಹೊರಹಾಕಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಲಕ್ಷ್ಮಿ ಆಶೀರ್ವಾದವನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ನೀವು ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಬಯಸಿದರೆ ದೀಪಾವಳಿಗೂ ಮೊದಲು ಈ ಐದು ವಸ್ತುಗಳನ್ನು ಮನೆಯಿಂದ ಹೊರಹಾಕಿ. 

2 /8

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪಗಳ ಹಬ್ಬ ದೀಪಾವಳಿಯಲ್ಲಿ ಸಂಪತ್ತಿನ ದೇವತೆ ಮಹಾಲಕ್ಷ್ಮೀಯ ಆಗಮನವಾಗುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿರುವ ಕೆಲವು ವಸ್ತುಗಳು ಲಕ್ಷ್ಮಿ ಮನೆ ಪ್ರವೇಶಿಸದಂತೆ ತಡೆಯಬಹುದು. ಇದನ್ನು ತಪ್ಪಿಸಲು ದೀಪಾವಳಿಗೂ ಮೊದಲೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು. 

3 /8

ಮನೆಯಲ್ಲಿ ಹಾಳಾಗಿರುವ ಎಲೆಕ್ಟ್ರಾನಿಕ್ ಸಾಧನಗಳಿದ್ದರೆ ಅವುಗಳಿಂದ ರಾಹು ಪ್ರಭಾವ ಹೆಚ್ಚಾಗುತ್ತದೆ. ಅಂತಹ ಮನೆಯಲ್ಲಿ ಮಹಾಲಕ್ಷ್ಮೀ ನೆಲೆಸುವುದಿಲ್ಲ. ಮೊದಲು ಇಂತಹ ಸಾಧನಗಳನ್ನು ಮನೆಯಿಂದ ಹೊರಹಾಕಿ. 

4 /8

ಹೊಡೆದ ಕನ್ನಡಿ ಮನೆಯಲ್ಲಿದ್ದರೆ ಲಕ್ಷ್ಮಿ ಮನೆಯನ್ನು ಪ್ರವೇಶಿಸಿದಾಗ ಇದರಲ್ಲಿ ತನ್ನ ಮುಖವನ್ನು ನೋಡಿದರೆ ದರಿದ್ರ ಲಕ್ಷ್ಮಿ ಗೋಚರಿಸುತ್ತಾಳೆ. ಇದನ್ನು ತಪ್ಪಿಸಲು ಈಗಲೇ ಹೊಡೆದ ಕನ್ನಡಿಯನ್ನು ಮನೆಯಿಂದ ಆಚೆ ಬಿಸಾಡಿ. 

5 /8

ಪೀಠೋಪಕರಣಗಳು ಆರಾಮದಾಯಕವಾಗಿರುವುದನ್ನು ಪ್ರತಿನಿಧಿಸುತ್ತವೆ. ಮನೆಯಲ್ಲಿ ಮುರಿದ ಪೀಠೋಪಕರಣಗಳಿದ್ದರೆ ಇದು ದಾರಿದ್ರ್ಯವನ್ನು ಪ್ರತಿನಿಧಿಸುತ್ತದೆ. ಇಂತಹ ವಸ್ತುಗಳಿರುವ ಕಡೆ ಲಕ್ಷ್ಮಿ ಪ್ರವೇಶಿಸುವುದಿಲ್ಲ. 

6 /8

ಮುರಿದ ದೇವರ ಮೂರ್ತಿಗಳು ಮನೆಯಲ್ಲಿದ್ದರೆ ದೀಪಾವಳಿಗೂ ಮೊದಲೇ ಅವುಗಳನ್ನು ನೀರಿನಲ್ಲಿ ವಿಸರ್ಜನೆ ಮಾಡಿ. ಇಂತಹ ವಸ್ತುಗಳು ಲಕ್ಷ್ಮಿಯ ಕೋಪಕ್ಕೆ ಕಾರಣವಾಗಬಹುದು. 

7 /8

ಮನೆಯಲ್ಲಿ ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು ಶನಿ ದೋಷಕ್ಕೆ ಕಾರಣವಾಗುತ್ತದೆ. ನೀವು ಶನಿ ಕಾಟದಿಂದ ಮುಕ್ತಿ ಹೊಂದಿ, ಲಕ್ಷ್ಮಿ ಆಶೀರ್ವಾದವನ್ನು ಬಯಸಿದರೆ ಈಗಿಂದೀಗಲೇ ಕೆಲಸಕ್ಕೆಬಾರದ, ತುಕ್ಕಿಡಿದ ಕಬ್ಬಿಣದ ವಸ್ತುಗಳನ್ನು ಮನೆಯಿಂದ ಹೊರ ಬಿಸಾಡಿ. 

8 /8

ಮೇಲೆ ತಿಳಿಸಿದ ವಸ್ತುಗಳು ನಿಮ್ಮ ಮನೆಯಲ್ಲೂ ಇದ್ದರೆ ದೀಪಾವಳಿಗೂ ಮೊದಲೇ ಇವುಗಳನ್ನು ಮನೆಯಿಂದ ಹೊರಹಾಕುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿ ಸದಾ ವಾಸಿಸುತ್ತಾಳೆ. ಹಣಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.