ಬೆಂಗಳೂರು: ಮಹಾದಾಯಿ ನೀರು ಹಂಚಿಕೆ ಸಂಬಂಧಿಸಿದಂತೆ ಕರ್ನಾಟಕ ಇದುವರೆಗೂ ಸುಳ್ಳು ಹೇಳಿಕೊಂಡೆ ಬಂದಿದೆ. 'ನೀರು ಹಂಚಿಕೆ ವಿವಾದದಲ್ಲಿ ಸಾಕ್ಷ್ಯ ಹೇಳಲು ಕರ್ನಾಟಕದವರು ಸಾಕ್ಷಿಗಳಿಗೆ ಹಣ ಪಾವತಿಸಿದ್ದಾರೆ' ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಟ್ವೀಟ್ ಮಾಡುವ ಮೂಲಕ ಆರೋಪಿಸಿದ್ದಾರೆ.
Goa never paid for its witnesses. Our witnesses worked keeping in mind #GoemGoemkarGoemkarponn in #Mahadayi matter. Unlike Karnataka witness AK Gosain who had confessed in tribunal that he was paid 50k per day by Karnataka for being the witness & 5 lakhs to prepare report.
— Vinod Palyekar (@vinod_palyekar) January 16, 2018
ಗೋವಾ ಜಲಸಂಪನ್ಮೂಲ ಸಚಿವರ ಹೇಳಿಕೆಗೆ ಟಾಂಗ್ ನೀಡಿರುವ ಕರ್ನಾಟಕ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ವಿನೋದ್ ಪಾಲ್ಯೇಕರ್ ಅವರಿಗೆ ತಲೆಕೆಟ್ಟಿರಬೇಕು. ಗೋವಾ ಮುಖ್ಯಮಂತ್ರಿ ಮಹಾನಾಟಕವಾಡಿದರು, ಅದರಿಂದ ರಾಜಕೀಯವಾಗಿ ತೀವ್ರ ಹಿನ್ನಡೆಯಾಗಿದೆ. ಅದನ್ನು ಮರೆಮಾಚಲು ಈ ರೀತಿಯ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ: ಗೋವಾ ಸಚಿವರ ಹೇಳಿಕೆ ಗರಂ ಆದ ಸಿದ್ದರಾಮಯ್ಯ
ಅಷ್ಟೇ ಅಲ್ಲದೆ, ಟ್ವಿಟ್ಟರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹಚ್ಚಿದ ಬೆಂಕಿಯೇ ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೀ ಯಡಿಯೂರಪ್ಪನವರೇ-@BSYBJP , ನೀವು ಒಬ್ಬ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ
ಬೇಕಾಗಿತ್ತಾ ಇದೆಲ್ಲಾ ? ನೀವು ಹಚ್ಚಿದ ಬೆಂಕಿ ನೋಡಿ ಸ್ವಾಮಿ
ನೀವು ಬದಲಾಗುತ್ತಿರೋ ಇಲ್ವೋ ಗೊತ್ತಿಲ್ಲಾ
ಜನ ಸುಮ್ನೆ ಬಿಡ್ತರಾ ನಿಮ್ಮನ್ನ ? ತಕ್ಕ ಪಾಠ ಕಲಿಸುವದರಲ್ಲಿ ಯಾವುದೇ ಸಂಶಯವಿಲ್ಲ https://t.co/LqHtFrzvDa
— M B Patil (@reachmbp) January 16, 2018